ಚಿತ್ರರಂಗದಿಂದ ದರ್ಶನ್ ಬ್ಯಾನ್‌ ಯಾಕಿಲ್ಲ? ಲೆಕ್ಕವಿಲ್ಲದಷ್ಟೂ ವಿವಾದವಿದ್ದರೂ ರೌಡಿ ಶೀಟರ್ ಓಪನ್‌ ಮಾಡಿಲ್ಲವೇಕೆ? ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪಿ ನಟ ದರ್ಶನ್ ಬೆನ್ನಲ್ಲೇ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಮತ್ತು ರೌಡಿ ಶೀಟರ್ ಓಪನ್ ಮಾಡಬೇಕು ಎಂಬ ಒತ್ತಡ ಹೆಚ್ಚಿದೆ. ಬೆಂಗಳೂರು (ಜೂ.11):ಬೆಂಗಳೂರಿನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪಿ ನಟ ದರ್ಶನ್ ( ), ಆತನ ಎರಡನೇ ಪತ್ನಿ ಪವಿತ್ರಾ ಗೌಡ ( ) ಸೇರಿ ಒಟ್ಟು 13 ಮಂದಿಯನ್ನು ಬಂಧಿಸಲಾಗಿದ್ದು, 6 ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇದೀಗ ವಿಷ್ಯ ಅದಲ್ಲ ಒಬ್ಬ ನಟನಾಗಿ ಸಮಾಜಕ್ಕೆ ಮಾದರಿಯಾಗಿರಬೇಕಿದ್ದ ದರ್ಶನ್‌ ವಿರುದ್ಧ ಚಿತ್ರರಂಗ ಯಾವುದೇ ಕ್ರಮ ಕೈಗೊಂಡಿಲ್ಲ ಯಾಕೆ? ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಂಡಿಲ್ಲವೇಕೆ? ಗಲಾಟೆಗಳ ಸರಮಾಲೆ, ಈಗ ಕೊಲೆ ಕೇಸ್, ದೈಹಿಕ ಹಲ್ಲೆ ಇಷ್ಟೆಲ್ಲ ಇದ್ದರೂ ರೌಡಿ ಶೀಟರ್ ಓಪನ್ ಮಾಡಿಲ್ಲವೇಕೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನ ಪ್ರಶ್ನಿಸುತ್ತಿದ್ದಾರೆ. ಬೆಳಗಿನವರೆಗೂ ಪಾರ್ಟಿ ಮಾಡಿದ್ದ ದರ್ಶನ್&ಗ್ಯಾಂಗ್! ಹತ್ಯೆಗೂ ಮುನ್ನ ಏನೇನಾಯ್ತು? ಕಂಪ್ಲೀಟ್‌ ಡೀಟೆಲ್ಸ್ ಕಾವೇರಿ ಹೋರಾಟದಲ್ಲಿ ಭಾಗಿಯಾದವರ ವಿರುದ್ಧ ರೌಡಿ ಶೀಟರ್ ಓಪನ್ ಮಾಡಲಾಗಿದೆ. ರಸ್ತೆ ರೈಲು ತಡೆದವರ ವಿರುದ್ಧವೂ ಪೊಲೀಸರು ರೌಡಿಶೀಟರ್ ಓಪನ್ ಮಾಡಿದ್ದಾರೆ. ಕೇಸ್ ಮೇಲೆ ಕೇಸ್, ಗಲಾಟೆ ಮೇಲೆ ಗಲಾಟೆ ಮಾಡಿಕೊಂಡಿರುವ ದರ್ಶನ್ ಮೇಲೆ ಯಾಕೆ ರೌಡಿಶೀಟರ್ ಓಪನ್ ಮಾಡಲಾಗುತ್ತಿಲ್ಲ? ಈ ಹಿಂದೆ ಕೂಡ ದರ್ಶನ್ ನಡೆಸಿದ್ದ ಹಲವು ಅಪರಾಧ ಕೃತ್ಯಗಳು ಬೆಳಕಿಗೆ ಬಂದಿತ್ತು. ಇದರಲ್ಲಿ ಕೆಲವೊಂದನ್ನು ಮುಚ್ಚಿ ಹಾಕಲಾಗಿತ್ತು ಎನ್ನು ಆರೋಪಗಳು ಕೇಳಿಬರುತ್ತಲೇ ಇದೆ. ಸ್ಯಾಂಡಲ್‌ವುಡ್‌ನಲ್ಲಿ ಚಿತ್ರಗಳಿಂದ ಹೆಚ್ಚು ವಿವಾದಗಳಿಂದಲೇ ಸುದ್ದಿಯಲ್ಲಿರುವ ದರ್ಶನ್ ವಿರುದ್ಧ ಕರ್ನಾಟಕ ಚಲನಚಿತ್ರ ಮಂಡಳಿಯಾಗಲಿ ಬ್ಯಾನ್ ಮಾಡುವ ಕ್ರಮ ತೆಗೆದುಕೊಂಡಿಲ್ಲ, ಹಲವು ಅಪರಾಧ ಇದ್ದರೂ ಕರ್ನಾಟಕ ಪೊಲೀಸ್‌ ಇಲಾಖೆ ರೌಡಿ ಶೀಟರ್ ಓಪನ್ ಮಾಡದೆ ಪೊಲೀಸರು ಸುಮ್ಮನಿರುವುದ್ಯಾಕೆ? ಯಾವುದಾದರೂ ಕಾಣದ ಶಕ್ತಿ ಪೊಲೀಸರ ಕೈ ಕಟ್ಟಿ ಹಾಕಿದ್ಯಾ? ಎಂಬ ಪ್ರಶ್ನೆಗಳು ಎದ್ದಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣ: ಮೆಜೆಸ್ಟಿಕ್‌ ದಾಸ... 6 ದಿನ ಪೊಲೀಸ್ ಕಸ್ಟಡಿಯಲ್ಲಿ ವಾಸ! 2023ರಲ್ಲಿ ಆದ ವಿವಾದಗಳಿವು...