ಘಟಾನುಘಟಿ ತಾರೆಯರಿಗೆ ಡ್ಯಾನ್ಸ್​ ಹೇಳಿಕೊಟ್ಟ ಶ್ರೀರಸ್ತು ಶುಭಮಸ್ತು ದೀಪಿಕಾಗೆ ಈ ಸ್ಥಿತಿ ಬಂದೋಯ್ತಾ? ಶ್ರೀರಸ್ತು ಶುಭಮಸ್ತು ದೀಪಿಕಾ ಡ್ಯಾನ್ಸ್​ ಮಾಡಲು ಒದ್ದಾಡುತ್ತಿದ್ದಾಳೆ. ಇವಳನ್ನು ನೋಡಿ ಎಲ್ಲರೂ ನಗುತ್ತಿದ್ದಾರೆ. ಅಷ್ಟಕ್ಕೂ ಈ ದೀಪಿಕಾ ಯಾರು? ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ಇದೀಗ ವಿವಾಹ ವಾರ್ಷಿಕೋತ್ಸವದ ಸಂಭ್ರಮ ನಡೆಯುತ್ತಿದೆ. ಅದಕ್ಕಾಗಿ ಮನೆಯವರೆಲ್ಲರೂ ಸೇರಿ ಡ್ಯಾನ್ಸ್​ ಕಲಿಯುತ್ತಿದ್ದಾರೆ. ಇದಾಗಲೇ ಕೋರಿಯೋಗ್ರಫರ್​ ಕೂಡ ಮನೆಗೆ ಆಗಮಿಸಿದ್ದು, ಎಲ್ಲರಿಗೂ ನೃತ್ಯ ಕಲಿಸಿಕೊಡುತ್ತಿದ್ದಾರೆ. ಅದೇ ಇನ್ನೊಂದೆಡೆ, ಅಭಿ ಮನೆ ಬಿಟ್ಟು ಹೋಗದಂತೆ ತಡೆಯಲು ಎಲ್ಲರೂ ಶತ ಪ್ರಯತ್ನ ಮಾಡುತ್ತಿದ್ದಾರೆ. ಶಾರ್ವರಿ ಮತ್ತು ದೀಪಿಕಾ ಮಾತ್ರ ಮನೆಯವರನ್ನು ಒಡೆಯಲು ನೋಡುತ್ತಿದ್ದಾರೆ. ಆದರೆ ಡ್ಯಾನ್ಸ್​ ಮೂಲಕ ಎಲ್ಲರೂ ಒಂದಾಗುವರೇ ಎನ್ನುವ ಪ್ರಶ್ನೆಯೂ ಕಾಡುತ್ತಿದೆ. ಇದಕ್ಕೆ ಕಾರಣ, ಅವಿ ಮತ್ತು ಅಭಿ ಇಬ್ಬರೂ ತಮ್ಮ ಅಪ್ಪನ ಕೈ ಹಿಡಿದು ಡ್ಯಾನ್ಸ್​ ಮಾಡುವಂತೆ ಕೋರಿಯೋಗ್ರಫರ್​ ಹೇಳಿದ್ದಾರೆ. ಅವಿಗೆ ಇದರಿಂದ ಸಮಸ್ಯೆ ಇಲ್ಲ. ಆದರೆ ಅಪ್ಪನನ್ನು ಕಂಡರೆ ಕೆಂಡಾಮಂಡಲ ಆಗುವ ಅಭಿ ಕೂಡ ಎಲ್ಲರ ಮಾತು ಕೇಳಿ ಅಪ್ಪನ ಜೊತೆ ಡ್ಯಾನ್ಸ್​ ಮಾಡಿದ್ದಾನೆ. ಹೀಗೆ ಮಾಡುವಾಗ ಎಡವಿ ಬಿದ್ದಾಗ ಅತ್ತ ಅಪ್ಪ, ಇತ್ತ ಅಣ್ಣ ಅವಿ ಇಬ್ಬರೂ ಅವನನ್ನು ಕಾಪಾಡಿದ್ದಾರೆ. ಅಪ್ಪ ಮತ್ತು ಅಣ್ಣನ ಮೇಲೆ ಕಿಡಿ ಕಾರುತ್ತಿರುವ ಅವಿಗೆ ಏನೋ ಸಂಕಟವಾಗಿದೆ. ತಾನು ಮಾಡಿದ್ದು ತಪ್ಪು ಎಂದು ಅನ್ನಿಸುತ್ತಿದೆ. ಇನ್ನಾದ್ರೂ ಅವನು ಪತ್ನಿಯ ಮಾತು ಕೇಳಿದೇ ಒಂದಾಗುವನಾ ಎಂದು ನೋಡಬೇಕಿದೆಯಷ್ಟೇ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಇದರಲ್ಲಿ ಹೈಲೈಟ್​ ಆಗಿರುವುದು ದೀಪಿಕಾ. ಕೋರಿಯೋಗ್ರಫರ್​ ಎಲ್ಲರಿಗೂ ಡ್ಯಾನ್ಸ್​ ಹೇಳಿಕೊಡುವಾಗ ದೀಪಿಕಾಗೂ ಹೇಳಿಕೊಟ್ಟಿದ್ದಾರೆ. ಆದರೆ ದೀಪಿಕಾಗೆ ಡ್ಯಾನ್ಸ್​ ಮಾಡಲು ಬರುತ್ತಿಲ್ಲ. ಇದೇ ಕಾರಣಕ್ಕೆ ಪೂರ್ಣಿ ಸೇರಿದಂತೆ ಎಲ್ಲರೂ ನಕ್ಕಿದ್ದಾರೆ. ಇದರಲ್ಲಿ ದೀಪಿಕಾ ವಿಲನ್​. ಇದೇ ಕಾರಣಕ್ಕೆ ಅವಳ ಸೊಕ್ಕು ಮುರಿಯಲು ಈ ದೃಶ್ಯವನ್ನು ಇದರಲ್ಲಿ ಸೇರಿಸಲಾಗಿದೆ. ಆದರೆ ಅಸಲಿಯತ್ತೇ ಬೇರೆ. ಡ್ಯಾನ್ಸ್​ ಬಾರದವರಿಗೆ ಡ್ಯಾನ್ಸ್​ ಹೇಳಿಕೊಡುವುದು ಹಾಗೂ ಅಂಥವರು ಡ್ಯಾನ್ಸ್​ ಮಾಡುವುದು ಎಷ್ಟು ಕಷ್ಟವೋ ಅದಕ್ಕಿಂತಲೂ ಕಷ್ಟ ಓರ್ವ ಡಾನ್ಸರ್​ ಅದರಲ್ಲಿಯೂ ಕೋರಿಯೋಗ್ರಫರ್​ ತನಗೆ ಡ್ಯಾನ್ಸ್​ ಮಾಡಲು ಬಾರದಂತೆ ನಟಿಸುವುದು. ಇಲ್ಲಿ ದೀಪಿಕಾ ಕಥೆಯೂ ಹಾಗೆಯೇ ಆಗಿದೆ. ಕೆಂಪು ಸೀರೆಯಲ್ಲಿ ನೃತ್ಯದಿಂದ ಕಿಚ್ಚು ಹೊತ್ತಿಸಿದ ಶ್ರೀರಸ್ತು ಶುಭಮಸ್ತು ಸೊಸೆಯಂದಿರು! ಏಕೆಂದರೆ ದೀಪಿಕಾ ಅಂದರೆ ದರ್ಶಿನಿ ಡೆಲ್ಟಾ ಅವರು ಖುದ್ದು ಕೋರಿಯೋಗ್ರಫರ್​. ಇವರು ನಟಿಯಾಗೋ ಮೊದಲು ಮಾಡೆಲ್ (), ಜೊತೆಗೆ ಕೊರಿಯೋಗ್ರಾಫರ್ ಆಗಿ ಗುರುತಿಸಿಕೊಂಡವರು. ನಟ ಪ್ರಭುದೇವ, ಜಾನಿ ಮಾಸ್ಟರ್ ಮೊದಲಾದ ಜನಪ್ರಿಯ ಕೊರಿಯೋಗ್ರಫರ್ ಜೊತೆ ಅಸಿಸ್ಟಂಟ್ ಕೊರಿಯೋಗ್ರಫರ್ ಆಗಿ ಇವರು ಕೆಲಸ ಮಾಡಿದ್ದಾರೆ. ದರ್ಶಿನಿ ಶರಣ್ ನಟನೆಯ ಛೂ ಮಂತರ್ ಹಾಡಿಗೆ ಕೊರಿಯೋಗ್ರಫಿ ಮಾಡುವ ಮೂಲಕ ಅಸಿಸ್ಟೆಂಟ್ ಕೊರಿಯೋಗ್ರಫರ್ ಆಗಿ ಬಡ್ತಿ ಪಡೆದರು. ಈ ಡ್ಯಾನ್ಸ್ ಬೀಟ್ ( ) ಸಖತ್ ಸದ್ದು ಮಾಡಿತ್ತು. ಇದೀಗ ಕನ್ನಡದ ಉಪಾಧ್ಯಕ್ಷ ಸಿನಿಮಾದಲ್ಲೂ ಕೊರಿಯೋಗ್ರಫರ್ ಆಗಿ ಕೆಲಸ ಮಾಡಿದ್ದಾರೆ. ಉಪಾಧ್ಯಕ್ಷ ಸಿನಿಮಾದ ಹಾಡುಗಳಿಗೆ ಚಿಕ್ಕಣ್ಣ ಮತ್ತು ಮಲೈಕಾ ವಸುಪಾಲ್ ಗೆ ಸಖತ್ತಾಗಿ ಡ್ಯಾನ್ಸ್ ಹೇಳಿಕೊಡುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಓಪನ್ ಬಾಟಲ್ ಹಾಡಿಗೆ ಪುನೀತ್ ರಾಜ್ ಕುಮಾರ್​ಗೆ ಜಾನಿ ಮಾಸ್ಟರ್ ಅವರಿಗೆ ಅಸಿಸ್ಟಂಟ್ ಕೊರಿಯೋಗ್ರಫಿ ಮಾಡಿದ ದರ್ಶಿನಿ, ನನ್ನ ಕೊರಿಯೋಗ್ರಫಿ ಮೇಲೆ ನನಗಿಂತ ಹೆಚ್ಚಿನ ನಂಬಿಕೆ ಇಟ್ಟಿದ್ದ ಪುನೀತ್ ರಾಜ್ ಕುಮಾರ್ ( ) ಅವರ ಆಶೀರ್ವಾದದಿಂದಲೇ ನಾನು ಇವತ್ತು ಈ ಹಂತಕ್ಕೆ ಬಂದಿದ್ದೇನೆ ಎಂದು ಹೇಳ್ತಾರೆ. ಅಪ್ಪನ ಕನಸಿನಂತೆ ಡ್ಯಾನ್ಸರ್ () ಆಗಿ ಕರಿಯರ್ ಆರಂಭಿಸಿದ ದರ್ಶಿನಿ, ಮೊದಲಿಗೆ ತಮಿಳು ಮತ್ತು ತೆಲುಗು ರಿಯಾಲಿಟಿ ಶೋಗಳಲ್ಲಿ ಬಾಲ್ಯದಲ್ಲಿಯೇ ಭಾಗವಹಿಸಿದ್ದರು. ಕನ್ನಡದಲ್ಲಿ ನಟಿಯಾಗೋ ಮುನ್ನವೇ ಅವರು ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡರು. ಇದೀಗ ಕನ್ನಡ, ತೆಲುಗಿನ ಸೂಪರ್ ಸ್ಟಾರ್ ನಾಯಕರಿಗೆ ಅಂದರೆ ಪುನೀತ್ ರಾಜ್ ಕುಮಾರ್, ಯಶ್, ಸುದೀಪ್, ಶರಣ್, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ, ನಾನಿಯಂತಹ ಮಹಾನ್ ನಟರಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ತಮಿಳಿನಲ್ಲಿ ಜಾನಿ ಮಾಸ್ಟರ್ ( ) ಅವರಿಗೆ ಅಸಿಸ್ಟಂಟ್ ಆಗಿ ಪ್ರಭುದೇವ () ಅವರಿಗೆ ಕೊರಿಯೋಗ್ರಫಿ ಮಾಡಿದ ದರ್ಶಿನಿ ಡೆಲ್ಟಾ ನಾಗರಾಜ್, ಸದ್ಯ ಕನ್ನಡದ ಮೊದಲ ಡ್ಯಾನ್ಸ್ ಕೊರಿಯೋಗ್ರಫರ್ ಆಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಇವರು ಇದರಲ್ಲಿ ಡ್ಯಾನ್ಸ್​ ಬಾರದ ಹಾಗೆ ನಟಿಸುವುದೇ ಕಷ್ಟವಾಗೋಗಿದೆ. ಇನ್ಮುಂದೆ ಯಾವ ಸಂಧಾನಕ್ಕೂ ಹೋಗಲ್ಲ... ಥೂ ನಮ್ಮ ಜನ್ಮಕ್ಕೆ... ಪ್ರಥಮ್​ ಕೆಂಡಾಮಂಡಲ ಆಗಿದ್ದೇಕೆ?