ನಮ್ ರೋಲ್ ಮಾಡೆಲ್ ಚಂದನ್-ನಿವೇದಿತಾ ಟ್ರೆಂಡಿಂಗ್; ಯಾಕ್ ಹೀಗಂತಿದಾರೆ, ಇದೇನ್ ಹೊಸ ಕಥೆ? ಚಂದನ್ ಹಾಗು ನಿವೇದಿತಾ ಜೋಡಿ ಹಾಗಲ್ಲ. ನಗುನಗುತ್ತಲೇ ಈ ಇಬ್ಬರೂ ನಿನ್ನೆ ಶಾಂತಿನಗರದ ಫ್ಯಾಮಿಲಿ ಕೋರ್ಟ್‌ಗೆ ಡಿವೋರ್ಸ್ ಅಪ್ಲೈ ಮಾಡಿ, ಇಂದು ಅದು ಮಂಜೂರು ಆಗುತ್ತಿದ್ದಂತೆ ಖುಷಿಯಾಗಿ ಹಗ್ ಮಾಡಿಕೊಂಡು, ಶೇಕ್ ಹ್ಯಾಂಡ್‌ ಮಾಡುತ್ತಲೇ ಬೇರೆಬೇರೆ ಆಗಿರುವುದು ನಿಜಕ್ಕೂ.. ಸ್ಯಾಂಡಲ್‌ವುಡ್ ನಟ ಹಾಗು ರ್‍ಯಾಪರ್‌ ಚಂದನ್ ಶೆಟ್ಟಿ ( ) ಹಾಗೂ ನಿವೇದಿತಾ ಗೌಡ ( ) ವಿಚ್ಛೇದನ ಪಡೆದುಕೊಂಡಿದ್ದು ಈಗ ಹಳೇ ಸುದ್ದಿ. ಈಗೇನಿದ್ದರೂ ಕಾಮೆಂಟ್‌ಗಳದೇ ಕಾರುಬಾರು. ಚಂದನ್ ಹಾಗೂ ನಿವೇದಿತಾ ವಿಚ್ಛೇದನದ ಬಗ್ಗೆ ಸೋಷಿಯಲ್ ಮೀಡಿಯಾ ತುಂಬಾ ವಿವಿಧ ಬಗೆಯ ಕಾಮೆಂಟ್‌ಗಳು ಹರಿದಾಡತೊಡಗಿವೆ. ಅದರಲ್ಲೊಂದು ಭಾರೀ ಗಮನ ಸೆಳೆಯುತ್ತಿರುವ ಕಾಮೆಂಟ್ ಎಂದರೆ, ಅದು 'ಆದರ್ಶ ವಿಚ್ಛೇದನ, ಬೇರೆ ಆದ್ರೆ ಹೀಗೇ ಆಗ್ಬೇಕು; ನಮ್ ರೋಲ್ ಮಾಡೆಲ್ ಚಂದನ್-ನಿವೇದಿತಾ ಟ್ರೆಂಡ್!...' ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರಿಬ್ಬರ ( ) ವಿಚ್ಛೇದನ ಹಲವರ ಅಚ್ಚರಿಗೆ ಕಾರಣವಾಗಿದೆ. ಯಾಕಂದ್ರೆ ಯಾವುದೇ ದಂಪತಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದರೆ ತಿಂಗಳಾನುಗಟ್ಟಲೇ, ವರ್ಷಗಟ್ಟಲೇ ವಿಚಾರಣೆ ಕೋರ್ಟ್​ನಲ್ಲಿ ನಡೆಯುತ್ತೆ. ಆದರೆ, ಚಂದನ್ ಶೆಟ್ಟಿ ದಂಪತಿ ವಿಚ್ಛೇದನ ಮಾತ್ರ ಒಂದೇ ದಿನದಲ್ಲಿ ಆಗಿದೆ. ಕಾರಣ ಇವರಿಬ್ಬರು ನಗು ನಗುತ್ತಲೇ, ಒಪ್ಪಂದದ ಮೇಲೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ಕೋರ್ಟ್​ಗೆ ಹಾಜರಾದ ವೇಳೆ ಈ ಜೋಡಿ ಅಕ್ಕಪಕ್ಕದಲ್ಲೇ ಇತ್ತು. ಹೀಗಾಗಿ ಬೇಗನೇ ವಿಚ್ಛೇದನ ನೀಡಿ ಆದೇಶ ಹೊರಡಿಸಲಾಗಿದೆ. ಚಂದನ್ ಶೆಟ್ಟಿ, ನಿವೇದಿತಾ ಗೌಡ ವಿಚ್ಛೇದನಕ್ಕೆ ಇದೇ ಕಾರಣ; ಬೆಸ್ಟ್ ಕಾಮೆಂಟ್ ಇದಪ್ಪ ಅಂತಿದಾರೆ, ಹೌದಾ? ಮನಸ್ತಾಪ, ಮುಖ ನೋಡಲೂ ಬಯಸದೇ, ಕೋರ್ಟ್‌ನಲ್ಲಿ ಕೂಡ ಜಗಳವಾಡದೇ ಈ ಇಬ್ಬರೂ ಬೇರೆಬೇರೆ ಆಗಿರುವುದನ್ನು ಹಲವರು ಸ್ವಾಗತಿಸಿದ್ದಾರೆ. ಸಾಮಾನ್ಯವಾಗಿ ಯಾವುದೇ ದಂಪತಿ, ಪರಸ್ಪರ ಮನಸ್ತಾಪ ಮೂಡಿದ ಮೇಲೆ ಒಬ್ಬರ ಮುಖವನ್ನು ಇನ್ನೊಬ್ಬರು ನೋಡಲು ಬಯಸುವುದಿಲ್ಲ. ಡಿವೋರ್ಸ್ ಅಪ್ಲೈ ಮಾಡುವಾಗಲೇ ಡಿವೋರ್ಸ್ ಆದವರಂತೆ ಬೇರೆಬೇರೆಯಾಗಿ ಬರುತ್ತಾರೆ. ಸಂಧಾನ ಪ್ರಕ್ರಿಯೆಯಲ್ಲೂ ಜೋರಾಗಿ ಕಿರುಚುತ್ತಾರೆ, ಕೂಗಾಡುತ್ತಾರೆ. ಡಿವೋರ್ಸ್ ಮಂಜೂರಾದ ಮೇಲಂತೂ ತಾಳಿ ಕಿತ್ತೆಸೆದು ಮುಖಕ್ಕೆ ಎಸೆಯುತ್ತಾರೆ, ಅಥವಾ ತಾಳಿ ಕಟ್ಟಿದವರು ಕಿತ್ತುಕೊಳ್ಳುತ್ತಾರೆ. ಚಂದನ್ ಶೆಟ್ಟಿ, ನಿವೇದಿತಾ ಗೌಡ ಸಡನ್ ವಿಚ್ಛೇದನಕ್ಕೆ ದಿಗ್ಭ್ರಮೆ; ಕಾನೂನು ಬದಲಾಯಿತೇ? ಆದರೆ, ಚಂದನ್ ಹಾಗು ನಿವೇದಿತಾ ಜೋಡಿ ಹಾಗಲ್ಲ. ನಗುನಗುತ್ತಲೇ ಈ ಇಬ್ಬರೂ ನಿನ್ನೆ ಶಾಂತಿನಗರದ ಫ್ಯಾಮಿಲಿ ಕೋರ್ಟ್‌ಗೆ ಡಿವೋರ್ಸ್ ಅಪ್ಲೈ ಮಾಡಿ, ಇಂದು ಅದು ಮಂಜೂರು ಆಗುತ್ತಿದ್ದಂತೆ ಖುಷಿಯಾಗಿ ಹಗ್ ಮಾಡಿಕೊಂಡು, ಶೇಕ್ ಹ್ಯಾಂಡ್‌ ಮಾಡುತ್ತಲೇ ಬೇರೆಬೇರೆ ಆಗಿರುವುದು ನಿಜಕ್ಕೂ ಆದರ್ಶ ಎನ್ನಲೇಬೇಕಾದ ನಡತೆ. ಅದನ್ನು ಗುರುತಿಸಿದ ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಅವರಿಬ್ಬರೂ ವಿಚ್ಛೇದನ ಪಡೆದುಕೊಂಡ ರೀತಿಯನ್ನು ಶ್ಲಾಘಿಸಿದ್ದಾರೆ. ಅವರಿಬ್ಬರೂ ನಮ್ಮ ರೋಲ್ ಮಾಡೆಲ್‌ ಎಂದು ಕೊಂಡಾಡಿದ್ದಾರೆ. ಅನಂತನ ಅವಾಂತರದಲ್ಲಿ 'ಅಂಜಲಿ'ಯಾದ ಶಾಂತ ಈಗ ತ್ರಿಬ್ಬಲ್ ರೈಡಿಂಗ್ ಮಾಡ್ತಿದಾರೆ! ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ಅವರಿಬ್ಬರ ದಾಂಪತ್ಯದಲ್ಲಿ ಅದೇನಾಯಿತೋ ಏನೋ, ಅವರಿಬ್ಬರೂ ತಮ್ಮ ನಾಲ್ಕು ವರ್ಷಗಳ ದಾಂಪತ್ಯಕ್ಕೆ ಇತಿಶ್ರೀ ಹಾಡಿದ್ದಾರೆ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್​ ಪುರಸ್ಕರಿಸಿ ಚಂದನ್ ಶೆಟ್ಟಿ, ನಿವೇದಿತಾ ಗೌಡ ವಿಚ್ಛೇದನವನ್ನು ಮಂಜೂರು ಮಾಡಿ ಬೆಂಗಳೂರು ಕೌಟುಂಬಿಕ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಮೂಲಕ ರ್‍ಯಾಪರ್‌ ಚಂದನ್ ಶೆಟ್ಟಿ- ನಿವೇದಿತಾ ಗೌಡ ಅವರ ನಾಲ್ಕು ವರ್ಷದ ದಾಂಪತ್ಯ ಅಂತ್ಯವಾಗಿದೆ. ಪುರುಷೋತ್ತಮನ ಕಥೆ 'ಓಂ' ಆಯ್ತು, ಯಾರವರು? ಸುಧೀಂದ್ರ ಸ್ನೇಹಿತ ರೌಡಿ ಆಗಿದ್ರಾ? ಬಹಿರಂಗವಾಗಿ ಹೇಳಿಕೊಳ್ಳದ ಕೆಲವು ಕಾರಣಗಳಿಂದ ಒಟ್ಟಿಗೇ ಇರಲು ಇಚ್ಚಿಸದ ಈ ಜೋಡಿ, ಪ್ರತ್ಯೇಕವಾಗಿರಲು ಬಯಸಿದೆ. ಹೀಗಾಗಿ ವಿಚ್ಛೇದನ ಕೋರಿ ಬೆಂಗಳೂರಿನ ಶಾಂತಿನಗರದ ಫ್ಯಾಮಿಲಿ ಕೋರ್ಟ್​ನಲ್ಲಿ ವಿಚ್ಛೇದನಕ್ಕೆ 06 ಜೂನ್ 2024ರಂದು ಅರ್ಜಿ ಸಲ್ಲಿಸಿತ್ತು. ಪರಸ್ಪರ ಒಪ್ಪಂದದ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರಿಂದ, ಕೋರ್ಟ್, ವಿಚ್ಛೇದನ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಚಂದನ್​ ಹಾಗೂ ನಿವೇದಿತಾ ವಿಚ್ಛೇದನ ಅರ್ಜಿ ಇಂದು (ಜೂನ್ 07) ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಕೆ. ಎಸ್. ಜ್ಯೋತಿ ಶ್ರೀ ಅವರ ಬೆಂಚ್​ ಮುಂದೆ ಬಂದಿತ್ತು.