ನಟಿ ರಾಗಿಣಿ ಮದುವೆ ಫಿಕ್ಸ್‌ ಆಯ್ತಾ?; ಒಡವೆ ಅಂಗಡಿಯಲ್ಲಿ ಚೌಕಾಸಿ ಮಾಡ್ಬೇಡಿ ಎಂದ ನೆಟ್ಟಿಗರು! ಅಬ್ಬಬ್ಬಾ ರಾಗಿಣಿ ಧರಿಸಿರುವ ಒಡವೆ ನೋಡಿ ನೆಟ್ಟಿಗರು ಶಾಕ್. ಮದ್ವೆ ಹೆಣ್ಣು ಕೂಡ ಇಷ್ಟೊಂದು ಹಾಕಲ್ಲ ಅಂತಾರೆ ನೆಟ್ಟಿಗರು.... ಅಬ್ಬಬ್ಬಾ ರಾಗಿಣಿ ಧರಿಸಿರುವ ಒಡವೆ ನೋಡಿ ನೆಟ್ಟಿಗರು ಶಾಕ್. ಮದ್ವೆ ಹೆಣ್ಣು ಕೂಡ ಇಷ್ಟೊಂದು ಹಾಕಲ್ಲ ಅಂತಾರೆ ನೆಟ್ಟಿಗರು.... ಕನ್ನಡ ಚಿತ್ರರಂಗದ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು ತಮ್ಮ ಪ್ರತಿದಿನದ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಸದ್ಯ ರಾಗಿಣಿ ರೇಶ್ಮಿ ಸೀರೆ ಧರಿಸಿ ದೊಡ್ಡ ದೊಡ್ಡ ಚಿನ್ನದ ಸರಗಳನ್ನು ಧರಿಸಿರುವ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. ಗೊಂಬೆ ರೀತಿ ಕಾಣಿಸುತ್ತಿದ್ದಾರೆ. ಇದೇನಪ್ಪಾ ರಾಗಿಣಿ ಮದುವೆ ಆಗ್ತಿದ್ದಾರಾ? ಯಾರಿಗೂ ಹೇಳದೆ ಮದುವೆ ಮಾಡಿಕೊಳ್ಳುತ್ತಿದ್ದಾರೆ ಇದೆಲ್ಲಾ ಮದುಮಗಳು ಹಾಕುವ ಒಡವೆ ಅಲ್ವಾ ಅಂತ ನೆಟ್ಟಿಗರಲ್ಲಿ ಅನುಮಾನ ಶುರುವಾಗಿತ್ತು. ಸ್ವಲ್ಪ ಸಮಯ ನಂತರ ರಾಗಿಣಿ ಫೋಟೋ ಅಪ್ಲೋಡ್ ಮಾಡುತ್ತಾರೆ. ವೇಣುಗೋಪಾ ಜ್ಯುವೆಲ್ಸ್‌ ಆಂಡ್ ಡೈಮೆಂಟ್‌ ಚಾಮರಾಜನಗರದಲ್ಲಿ ಅಂಗಡಿ ಓಪನಿಂಗ್ ಎಂದು. ಮದುವೆ ಎಂದುಕೊಂಡ ನೆಟ್ಟಿಗರು 'ಮೇಡಂ ನಿಮ್ಮ ಬಳಿ ಹಣ ಜಾಸ್ತಿ ಇದೆ ಅಂತ ಗೊತ್ತಿದೆ ದಯವಿಟ್ಟು ಚೌಕಾಸಿ ಮಾಡಬೇಡಿ ದಾರಾಳ ಮನಸ್ಸಿನಿಂದ ದುಡ್ಡು ಸುರಿಯಿರಿ' ಎಂದು ಹಾಸ್ಯ ಮಾಡುತ್ತಾ ಕಾಲೆಳೆದಿದ್ದಾರೆ. ಕಿಕ್‌ ಸಿನಿಮಾದಲ್ಲಿ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡ ನಂತರ ವೃಷಭ ಸಿನಿಮಾ ಮತ್ತು ಸಾರಿ -ಕರ್ಮ ರಿಟರ್ನ್ಸ್‌ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿದಿದೆ ಎನ್ನಲಾಗಿದೆ.