ಹಾಕಿರೋದೆಲ್ಲಾ ಚಿನ್ನ ಆಗಿದ್ರೆ ಸೀರಿಯಲ್ ಬಿಟ್ಟುಬಿಡು; 'ಗೀತಾ' ಕಾಲೆಳೆದ ನೆಟ್ಟಿಗರು ಅಬ್ಬಬ್ಬಾ! ಗೀತಾ ಸೀರಿಲ್ ನಟಿ ಧರಿಸಿರುವ ಚಿನ್ನ ನೋಡಿ ನೆಟ್ಟಿಗರು ಫುಲ್ ಶಾಕ್. ಗ್ರಾಂ ಲೆಕ್ಕಾಚಾರ ಶುರುವಾಗಿದೆ..... ಅಬ್ಬಬ್ಬಾ! ಗೀತಾ ಸೀರಿಲ್ ನಟಿ ಧರಿಸಿರುವ ಚಿನ್ನ ನೋಡಿ ನೆಟ್ಟಿಗರು ಫುಲ್ ಶಾಕ್. ಗ್ರಾಂ ಲೆಕ್ಕಾಚಾರ ಶುರುವಾಗಿದೆ..... ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿಯಲ್ಲಿ ಮಿಂಚುತ್ತಿರುವ ಭವ್ಯಾ ಗೌಡ ಇತ್ತೀಚಿಗೆ ರೇಶ್ಮೆ ಸೀರೆ ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಕ್ರೀಂ ಮತ್ತು ಪಿಂಕ್ ಕಾಂಬಿನೇಷನ್‌ ಸೀರೆ ಇದಾಗಿತ್ತು ಲೇಪನಾ ನಾಗರಾಜ್ ಬ್ಲೌಸ್‌ ಡಿಸೈನ್ ಮತ್ತು ಸೀರೆ ಬಾರ್ಡರ್‌ ಡಿಟೇಲಿಂಗ್ ಮಾಡಿದ್ದಾರೆ. ಈ ಫೋಟೋದಲ್ಲಿ ಪಕ್ಕಾ ಮಧುಮಗಳಂತೆ ಕಾಣಿಸಿಕೊಂಡಿರುವ ಭವ್ಯಾಳ ಕಾಲೆಳೆದಿದ್ದಾರೆ ನೆಟ್ಟಿಗರು. ಇದಕ್ಕೆ ಕಾರಣ ಆಕೆ ಧರಿಸಿರುವ ಆಭರಣ. ರೇಶ್ಮೆ ಸೀರೆಗೆ ಲುಕ್ ನೀಡಲು ಒಂದು ಚಿನ್ನದ ಮಾಲೆ ಮತ್ತೊಂದು ಮುತ್ತಿನ ಚೋಕರ್ ಧರಿಸಿದ್ದಾರೆ. ಕೈ ತುಂಬಾ ಬಳೆ ಮತ್ತು ಉಂಗುರ ಧರಿಸಿ ಮಿಂಚಿದ್ದಾರೆ. ಈ ಆಭರಣಗಳು ಗಜರಾಜ ಜ್ಯೂವಲರೀಸ್‌ಗೆ ಸೇರಿದ್ದು ಹೀಗಾಗಿ ಎಷ್ಟು ಗ್ರಾಂ ಚಿನ್ನ ಹಾಕಿದ್ಯಾ? ಇಷ್ಟೋಂದು ಹಣ ಇದ್ಮೇಲೆ ಯಾಕೆ ಸೀರಿಯಲ್ ಮಾಡ್ತಿದ್ಯಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಶೂಟಿಂಗ್ ಬಿಡುವಿನ ಸಮಯದಲ್ಲಿ ಭವ್ಯಾ ಆಗಾಗ ಫೋಟೋಶೂಟ್ ಮಾಡಿಸುತ್ತಾರೆ. ಮಾಡರ್ನ್‌ ಮಾತ್ರವಲ್ಲ ಎಲ್ಲಾ ಶೈಲಿಯ ಟ್ರೆಡಿಷನಲ್‌ ಲುಕ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.