ದುಬಾರಿ ಕಾರು ಖರೀದಿಸಿದ ಯುಟ್ಯೂಬರ್ ಸ್ಯಾಮ್ ಸಮೀರ್; ದುಡ್ಡು ಮಾಡಿದ್ರೆ ಹೀಗ್ ಮಾಡ್ಬೇಕು ಎಂದ ನೆಟ್ಟಿಗರು! ಮೊದಲ ದುಬಾರಿ ಕಾರು ಖರೀದಿಸಿದ ಯುಟ್ಯೂಬರ್ ಸ್ಯಾಮ್. ಎಲ್ಲಿ ನೋಡಿದರು ನಿಮ್ಮ ಹವಾ! ಹಣ ಸಂಪಾದನೆ ಜೋರಾ ಎಂದ ನೆಟ್ಟಿಗರು.... ಮೊದಲ ದುಬಾರಿ ಕಾರು ಖರೀದಿಸಿದ ಯುಟ್ಯೂಬರ್ ಸ್ಯಾಮ್. ಎಲ್ಲಿ ನೋಡಿದರು ನಿಮ್ಮ ಹವಾ! ಹಣ ಸಂಪಾದನೆ ಜೋರಾ ಎಂದ ನೆಟ್ಟಿಗರು.... ಕನ್ನಡ ಯುಟ್ಯೂಬ್ ಚಾನೆಲ್ ಹೊಂದಿರುವ ಸ್ಯಾಮ್ ಸಮೀರ್ ಇನ್‌ಸ್ಟಾ ( ) ತಮ್ಮ ಮೊದಲ ದುಬಾರಿ ಕಾರನ್ನು ಖರೀದಿ ಮಾಡಿದ್ದಾರೆ. ಯುಟ್ಯೂವ್ ವ್ಲಾಗ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫೋಟೋ ಅಪ್ಲೋಡ್ ಮಾಡಿರುವ ಸ್ಯಾಮ್ 'ನನ್ನ ಬಗ್ಗೆ ನನಗೆ ಹೆಮ್ಮೆ ಇದೆ ಇದು ಹೊಸ ಅಧ್ಯಾಯ' ಎಂದು ಬರೆದುಕೊಂಡಿದ್ದಾರೆ. ಮಹೇಂದ್ರ 700 ಬೆಂಗಳೂರಿನ ಆನ್‌ ರೋಡ್‌ ಬೆಲೆ ಸುಮಾರು 14 ಲಕ್ಷದಿಂದ ಆರಂಭವಾಗುತ್ತದೆ ಹಾಗೂ ಟಾಪ್‌ ಮಾಡಲ್ 34 ಲಕ್ಷ ರೂ ಬೆಲೆ ಇದೆ. ಇದರಲ್ಲಿ ಕಪ್ಪು ಬಣ್ಣದ ಕಾರು ಆಯ್ಕೆ ಮಾಡಿಕೊಂಡಿರುವ ಸ್ಯಾಮ್ ಕಪ್ಪು ಬಣ್ಣದ ಸೂಟ್‌ ಧರಿಸಿ ಕಾರು ಖರೀದಿ ಮಾಡಲು ಫ್ಯಾಮಿಲಿ ಜೊತೆ ಹೋಗಿದ್ದಾರೆ. ಯುಟ್ಯೂಬ್ ಮತ್ತು ಇನ್‌ಸ್ಟಾಗ್ರಾಂನಿಂದ ಇಷ್ಟೋಂದು ದುಡಿದು ಕಾರು ತೆಗೆದುಕೊಳ್ಳಬಹುದು ಅಂತ ಗೊತ್ತಿರಲಿಲ್ಲ...ದುಡ್ಡು ಮಾಡಿದ್ರೆ ಹೀಗೆ ಮಾಡ್ಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ದಿನಕ್ಕೊಂದು ಯುಟ್ಯೂಬ್ ವಿಡಿಯೋ ಹಾಗೂ ಇನ್‌ಸ್ಟಾಗ್ರಾಂ ರಿಲೀಸ್ ಅಪ್ಲೋಡ್ ಮಾಡಿ 6 ಲಕ್ಷ 22 ಸಾವಿರ ಫಾಲೋವರ್ಸ್‌ ಹಾಗೂ 2 ಲಕ್ಷ 63 ಸಾವಿರ ಯುಟ್ಯೂಬ್‌ ಸಬ್‌ಸ್ಕ್ರೈಬರ್‌ ಹೊಂದಿದ್ದಾರೆ.