ಡೀಪ್‌ನೆಕ್‌ ಬ್ಲೌಸ್ ಧರಿಸಿ ಟ್ರೆಡಿಶನಲ್ ಉಡುಗೆಯಲ್ಲಿ ಬೋಲ್ಡ್ ಆಗಿ ಮಿಂಚಿದ ಟೋಬಿ ಬೆಡಗಿ ಕನ್ನಡ ಸಿನಿಮಾರಂಗದಲ್ಲಿ ಭರವಸೆಯ ನಟಿಯಾಗಿ ಬೆಳೆಯುತ್ತಿರುವ ಚೈತ್ರಾ ಆಚಾರ್ ಇದೀಗ ಮತ್ತೆ ತಮ್ಮ ಫೋಟೊ ಶೂಟ್ ಮೂಲಕ ಸುದ್ದಿಯಾಗ್ತಿದ್ದಾರೆ. ಕನ್ನಡ ಸಿನಿಮಾರಂಗದಲ್ಲಿ ಭರವಸೆಯ ನಟಿಯಾಗಿ ಬೆಳೆಯುತ್ತಿರುವ ಚೈತ್ರಾ ಆಚಾರ್ ಇದೀಗ ಮತ್ತೆ ತಮ್ಮ ಫೋಟೊ ಶೂಟ್ ಮೂಲಕ ಸುದ್ದಿಯಾಗ್ತಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಹೊಸ ಭರವಸೆಯನ್ನು ಹುಟ್ಟು ಹಾಕಿದ ನಟಿ ಮತ್ತು ಗಾಯಕಿ ಚೈತ್ರಾ ಆಚಾರ್ ( ). ಸೋಜುಗಾದ ಸೂಜು ಮಲ್ಲಿಗೆ ಎಂದು ಹಾಡಿ, ಅತ್ಯುತ್ತಮ ಹಿನ್ನೆಲೆ ಗಾಯಕಿ ಅವಾರ್ಡ್ ಪಡೆದ ಇವರು, ಸಪ್ತಸಾಗರದಾಚೆ, ಟೋಬಿ, ಬ್ಲಿಂಕ್ ಚಿತ್ರಗಳಲ್ಲಿ ತಮ್ಮ ಅದ್ಭುತ ನಟನೆ ಮೂಲಕ ಜನಮನ ಗೆದ್ದಿದ್ದಾರೆ. ಕನ್ನಡದ ಬೋಲ್ಡ್ ಬ್ಯೂಟಿ ( )ಅಂತಾನೆ ಫೇಮಸ್ ಆಗಿರುವಚೈತ್ರಾ ಆಚಾರ್, ತಮ್ಮ ಅದ್ಭುತ ನಟನೆ, ವಿಶೇಷ ಪಾತ್ರಗಳು, ಪಾತ್ರಕ್ಕೆ ಜೀವ ತುಂಬುವ ಅವರ ಚಾಣಕ್ಷತನದಿಂದಲೇ ಕನ್ನಡದ ಭರವಸೆಯ ನಟಿಯಾಗಿ ಬೆಳೆಯುತ್ತಿದ್ದಾರೆ. ಇದರ ಜೊತೆ ತಮ್ಮ ಬೋಲ್ಡ್ ನೆಸ್ ನಿಂದಲೂ ಸುದ್ದಿಯಾಗುತ್ತಿರುತ್ತಾರೆ. ಹೌದು, ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಚೈತ್ರಾ ಹೆಚ್ಚಾಗಿ ತಮ್ಮ ಬೋಲ್ಡ್ ಫೋಟೋ ಶೂಟ್ ಮೂಲಕವೇ ಬೋಲ್ಡ್ ಬ್ಯೂಟಿ ಅಂತಾನೆ ಕರೆಯಲ್ಪಟ್ಟಿದ್ದಾರೆ. ಇದೀಗ ಹೊಸ ಫೋಟೋಗಳ ಸೀರೀಸ್ ಶೇರ್ ಮಾಡಿದ್ದು, ಟ್ರೆಡಿಶನಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲೂ ತಮ್ಮ ಬೋಲ್ಡ್ ನೆಸ್ ಪ್ರದರ್ಶಿಸಿದ್ದಾರೆ ನಟಿ ತಿಳಿ ಹಸಿರು ಮತ್ತು ನೀಲಿ ಬಣ್ಣದ ಫ್ಲೋರಲ್ ಪ್ರಿಂಟ್ ಇರುವ ಲಂಗ ಮತ್ತು ತಿಳಿ ಹಸಿರು ಬಣ್ಣದ ಪ್ಲೋರಲ್ ಡಿಸೈನ್ ಮತ್ತು ವರ್ಕ್ ಇರುವ ಡೀಪ್ ನೆಕ್ ಬ್ಲೌಸ್ ಧರಿಸಿ, ಕೈ ಮತ್ತು ಕುತ್ತಿಗೆ ತುಂಬಾ ಆಭರಣ ಧರಿಸಿ, ಎರಡು ಜಡೆ ಕಟ್ಟಿ ಚೈತ್ರ ವಿವಿಧ ರೀತಿಯ ಪೋಸ್ ನೀಡಿದ್ದಾರೆ. ಸಮ್ಯಕಾ ಕ್ಲೋಥಿಂಗ್ಸ್‌ ಧರಿಸಿರುವ ಚೈತ್ರಾ, ವಿವಂತ್‌ ಗೋಲ್ಡ್‌ ಡೈಮಾಂಡ್ಸ್‌ನ ಆಭರಣಗಳನ್ನು ತೊಟ್ಟು, ಸ್ಟೈಲ್‌ ಬೈ ಐಶ್ವರ್ಯಾ ಅವರ ಸ್ಟೈಲ್ ನಲ್ಲೂ, ಪ್ರಶಾಂತ್‌ ಕುಮಾರ್‌ ಮೇಕೋವರ್‌ ಅವರ ಮೇಕಾಪ್ ಮೂಲಕ ಸಖತ್ತಾಗಿ ಮಿಂಚಿದ್ದಾರೆ ಬ್ಲಿಂಕ್ ಬೆಡಗಿ ಚೈತ್ರಾ ಆಚಾರ್. ಉಮೇಶ್ ಪಟೀಲ್ ಫೋಟೋಗ್ರಫಿ ಮಾಡಿದ್ದಾರೆ. ಟ್ರೆಡಿಶನಲ್ ವೇರ್( ) ಧರಿಸಿದ್ದರೂ ಸಹಚೈತ್ರಾತಮ್ಮ ಬೋಲ್ಡ್ ನೆಸ್ ಬಿಟ್ಟುಕೊಟ್ಟಿಲ್ಲ, ಡೀಪ್ ನೆಕ್ ಬ್ಲೌಸ್ ಧರಿಸುವ ಮೂಲಕ ಟೆಂಪ್ರೇಚರ್ ಹೆಚ್ಚಿಸಿದ್ದು ಸುಳ್ಳಲ್ಲ. ಇದಕ್ಕೆ ಶ್ರುತಿ ಹರಿಹರನ್ ನನಗೆ ಈ ಸೀರೀಸ್ ತುಂಬಾನೆ ಇಷ್ಟವಾಯಿತು ಎಂದಿದ್ದಾರೆ. ಇವರ ಲುಕ್ ಗೆ ಅಭಿಮಾನಿಗಳು ಸಹ ಫಿದಾ ಆಗಿದ್ದಾರೆ. ಬೆಂಗಳೂರು ಕ್ವೀನ್ಸ್‌ ಎಂಬ ಕನ್ನಡ ವೆಬ್‌ ಸರಣಿ ಮೂಲಕ ನಟನೆ ಕರಿಯರ್‌ ಆರಂಭಿಸಿದ ಚೈತ್ರಾ ಬಳಿಕ ಮಹಿರಾ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ರು, ಇದಲ್ಲದೆ ಟೋಬಿ, ಸಪ್ತಸಾಗರದಾಚೆ ಚಿತ್ರದಲ್ಲಿ ಅದ್ಭುತ ಅಭಿನಯದ ಮೂಲಕ ಮಿಂಚಿದರು. ಇತ್ತೀಚೆಗೆ ಇವರು ನಟಿಸಿದ ಬ್ಲಿಂಕ್ ಚಿತ್ರ ಬಿಡುಗಡೆಯಾಗಿದ್ದು, ಅದು ಕೂಡ ಸಖತ್ ಸದ್ದು ಮಾಡುತ್ತಿದೆ.