20ರ ಹರೆಯದಲ್ಲೇ 40ರ ವಿನೋದ್ ಖನ್ನಾ ಜೊತೆ ಹಸಿಬಿಸಿ ಬೆಡ್​ರೂಂ ಸೀನ್, ಇವರಿಬ್ಬರ ನಡುವೆ ಇತ್ತಾ ಅಫೇರ್! ತಮಗಿಂತ 21 ವರ್ಷ ಹಿರಿಯ ನಟ ವಿನೋದ್​ ಖನ್ನಾ ಜೊತೆ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡ ಬಳಿಕ ಪಶ್ಚಾತ್ತಾಪ ಪಟ್ಟುಕೊಂಡಿದ್ದ ನಟಿ ಮಾಧುರಿ ದೀಕ್ಷಿತ್​ ಹೇಳಿದ್ದೇನು? ನಟ ವಿನೋದ್​ ಖನ್ನಾ ನಿಧನರಾಗಿ ಆರು ವರ್ಷಗಳೇ ಕಳೆದಿವೆ. ಆದರೆ ಬಾಲಿವುಡ್​ ಲವರ್​ ಬಾಯ್​ ಎಂದೇ ಫೇಮಸ್​ ಆಗಿದ್ದ ಇವರ ಒಂದೊಂದೇ ಇಂಟರೆಸ್ಟಿಂಗ್​ ವಿಷಯಗಳು ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತವೆ. ಇದೇ ಇನ್ನೊಂದೆಡೆ ಧಕ್​ ಧಕ್​ ಬೆಡಗಿ ಮಾಧುರಿ ದೀಕ್ಷಿತ್​ ಮತ್ತು ವಿನೋದ್​ ಖನ್ನಾ ಅವರ 'ದಯಾವನ್' ಚಿತ್ರ ವೀಕ್ಷಿಸಿದವರು ಮಾತ್ರ ತಬ್ಬಿಬ್ಬಾಗಿದ್ದು ಸುಳ್ಳಳ್ಳ. 1988ರಲ್ಲಿ ತೆರೆ ಕಂಡಿದ್ದ ಈ ಚಿತ್ರದಲ್ಲಿ ಮಾಧುರಿ ಮತ್ತು ವಿನೋದ್​ ಖನ್ನಾರ ಹಸಿಬಿಸಿ ದೃಶ್ಯಕ್ಕೆ ಬಾಲಿವುಡ್​ ಪ್ರೇಮಿಗಳು ರೋಮಾಂಚನಗೊಂಡಿದ್ದರು. ಒಂದು ಹಂತದಲ್ಲಿ ನಟಿ ಮಾಧುರಿ ದೀಕ್ಷಿತ್​ ಅವರು ರಾತ್ರೋರಾತ್ರಿ ಫೇಮಸ್​ ಆಗಲು ಇದೇ ಕಾರಣ ಎಂದೂ ಹೇಳಲಾಗುತ್ತದೆ. ಇದಕ್ಕೂ ಮುನ್ನ ಕೆಲವೊಂದು ಚಿತ್ರಗಳಲ್ಲಿ ಮಾಧುರಿ ನಟಿಸಿದ್ದರೂ, ಅದು ಹೇಳಿಕೊಳ್ಳುವಷ್ಟರ ಮಟ್ಟಿಗೆ ಯಶಸ್ವಿಯಾಗಿರಲಿಲ್ಲ. ಆದರೆ ದಯಾವನ್​ ಚಿತ್ರದಲ್ಲಿ ಇವರು ತಮಗಿಂತ 21 ವರ್ಷ ಹಿರಿಯವರಾದ ವಿನೋದ್​ ಖನ್ನಾ ಜೊತೆ ಇಂಟಿಮೇಟ್​ ಸೀನ್​ನಲ್ಲಿ ಕಾಣಿಸಿಕೊಂಡಿದ್ದೂ ಅಲ್ಲದೇ ಚಿತ್ರ ಬ್ಲಾಕ್​ಬಸ್ಟರ್​ ಮಾಡಿದ್ದರು. ಇಂದು ಹಲವು ನಟಿಯರು ಸಂಪೂರ್ಣ ಬೆತ್ತಲಾಗಲು ಹೇಸದ ಕಾಲ. ಇನ್ನು ಪೈಪೋಟಿಗೆ ಬಿದ್ದವರಂತೆ ತಮ್ಮ ದೇಹಸಿರಿಯನ್ನು ಅಗತ್ಯಕ್ಕಿಂತ ಹೆಚ್ಚಾಗಿಯೇ ತೋರಿಸುತ್ತಾರೆ. ಇವೆಲ್ಲವೂ ಈಗ ಕಾಮನ್ ಎನಿಸಿಬಿಟ್ಟಿದೆ. ಆದರೆ 1988ರಲ್ಲಿ ಪರಿಸ್ಥಿತಿ ಹೀಗಿರಲಿಲ್ಲ. ಅಂಥ ಸಂದರ್ಭದಲ್ಲಿಯೇ ಬೆಡ್​ ಮೇಲೆ ವಿನೋದ್​ ಖನ್ನಾ ಜೊತೆ ಮಾಧುರಿ ದೀಕ್ಷಿತ್​ ಹಸಿಬಿಸಿಯಾಗಿ ಕಾಣಿಸಿಕೊಂಡಿದ್ದರು. ಆಗ ಅವರಿಗೆ 20 ವರ್ಷ ವಯಸ್ಸಾಗಿತ್ತು. ಈ ದೃಶ್ಯ ಮಾಧುರಿಯವರ ಅದೃಷ್ಟವನ್ನೂ ಬದಲಾಯಿಸಿತು. ವಿನೋದ್​ ಖನ್ನಾ ಅವರು ಮಾಧುರಿ ದೀಕ್ಷಿತ್​ ಮಾತ್ರವಲ್ಲದೇ ಹಲವಾರು ನಟಿಯರ ಜೊತೆ ಇದೇ ರೀತಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮಗೆ ಸ್ತ್ರೀಯರು ಎಂದರೆ ತುಂಬಾ ಇಷ್ಟ. ಅದರಲ್ಲಿ ತಪ್ಪೇನು ಎಂದು ನೇರಾನೇರ ಹೇಳುವ ಮೂಲಕವೇ ಇಂಥ ಪ್ರಯಣದ ದೃಶ್ಯಗಳು ಬಂದಾಗ ತಮ್ಮನ್ನು ತಾವು ಅದಕ್ಕೆ ಅರ್ಪಿಸಿಕೊಂಡು ಬಿಡುತ್ತಾರೆ. : ಪ್ರೀತಿಸ್ತೇನೆ ಆದ್ರೆ ಮದ್ವೆಯಾಗಲ್ಲ ಎಂದವಳ ಕೈಹಿಡಿದಿದ್ದ ವಿನೋದ್​ ಖನ್ನಾ! ಆದರೆ ಮಾಧುರಿ ದೀಕ್ಷಿತ್​ ಮಾತ್ರ ಈ ರೀತಿಯಾಗಿ ಕಾಣಿಸಿಕೊಂಡಿದ್ದು ಹಲವರ ಹುಬ್ಬೇರಿಸಿತ್ತು. ಮರಾಠಿ ಬ್ರಾಹ್ಮಣ ಕುಟುಂಬದಲ್ಲಿ ಬೆಳೆದ ಹುಡುಗಿಯೊಬ್ಬಳು ತಮಗಿಂತ 21 ವರ್ಷ ಹಿರಿಯ ನಟನ ಜೊತೆ ಹೀಗೆ ಕಾಣಿಸಿಕೊಂಡಿದ್ದಕ್ಕೆ ಸಕತ್​ ಟ್ರೋಲ್​ ಕೂಡ ಆದರು. ಇವರಿಬ್ಬರ ನಡುವೆ ಸಂಬಂಧವನ್ನೂ ಕಲ್ಪಿಸಲಾಯಿತು. ಆದರೆ ಇವರಿಬ್ಬರೂ ಎಂದಿಗೂ ಸಂಬಂಧದಲ್ಲಿ ಇರಲಿಲ್ಲ. ಆದರೆ ಚಿತ್ರರಂಗದಲ್ಲಿನ ಯಶಸ್ಸಿಗೆ ಮಾಧುರಿ ಅವರಿಗೆ ಅಂದು ಅದು ಅನಿವಾರ್ಯವಾಗಿತ್ತು. ಆದರೆ ಕೆಲ ವರ್ಷಗಳ ಬಳಿಕ, ನಟಿ ತಮ್ಮ ಈ ದೃಶ್ಯದ ಬಗ್ಗೆ ಬಹಳ ಬೇಸರ ವ್ಯಕ್ತಪಡಿಸಿದ್ದರು. ಸಂದರ್ಶನವೊಂದರಲ್ಲಿ ತಾವು ದಯಾವನ್​ ಚಿತ್ರದಲ್ಲಿ ಈ ರೀತಿ ಇಂಟಿಮೇಟ್​ ದೃಶ್ಯದಲ್ಲಿ ಕಾಣಿಸಿಕೊಂಡು ತಪ್ಪು ಮಾಡಿರುವುದಾಗಿ ಹೇಳಿದ್ದರು. ನನ್ನ ಸಿನಿ ಪಯಣದತ್ತ ಒಮ್ಮೆ ಕಣ್ಣು ಹಾಯಿಸಿದಾಗ, ದಯಾವನ್​ ಚಿತ್ರದ ಕಲ್ಪನೆ ಬರುತ್ತದೆ. ಆದರೆ ನಾನು ಅಂದು ಮಾಡಿದ್ದು ಸರಿ ಇರಲಿಲ್ಲ ಎನಿಸುತ್ತಿದೆ. ನಾನು ಖಡಾಖಂಡಿತವಾಗಿ ಅದನ್ನು ನಿರಾಕರಿಸಬೇಕಿತ್ತು. ಆದರೆ ಅಂದು ಹಾಗೆ ಹೇಳಲು ನನಗೆ ಭಯವಾಗಿತ್ತು. ಆ ದೃಶ್ಯ ಚಿತ್ರದಲ್ಲಿ ಅಗತ್ಯ ಎಂದು ನಿರ್ದೇಶಕರು ಹೇಳಿದಾಗ, ನಾನು ಸೈ ಎಂದುಬಿಟ್ಟೆ. ಆದರೆ ಬಹುಶಃ ನಾನು ಅದನ್ನು ಅವಾಯ್ಡ್​ ಮಾಡಬಹುದಿತ್ತೇನೋ ಅನ್ನಿಸುತ್ತದೆ ಎಂದು ಪಶ್ಚಾತ್ತಾಪ ಪಟ್ಟುಕೊಂಡಿದ್ದರು. ಮದ್ವೆಯಾಗ್ತೀಯಾ ಎಂದು ಪ್ರಿಯಾಂಕಾಗೆ ಕೇಳಿದ್ದ ಶಾರುಖ್​! ಮತ್ತೆ ಮುನ್ನೆಲೆಗೆ ಬಂತು ಹಳೆಯ ಸಂಬಂಧ