ಬಾತ್ ರೂಮ್ ಸೆಲ್ಫಿ ಪೋಸ್ಟ್ ಮಾಡಿದ ನಟಿ…. ಆಲಿಯಾ ಭಟ್ ಅಂದ್ಕೊಂಡ್ರಾ? ಕೇಳ್ತಿದ್ದಾರೆ ಫ್ಯಾನ್ಸ್ ಸ್ಯಾಂಡಲ್ ವುಡ್ ಬೋಲ್ಡ್ ಬ್ಯೂಟಿ ಚೈತ್ರಾ ಆಚಾರ್ ಸೋಶಿಯಲ್ ಮೀಡಿಯಾದಲ್ಲಿ ಬಾತ್ ರೂಮ್ ಸೆಲ್ಫೀ ಶೇರ್ ಮಾಡಿದ್ದಾರೆ. ಸ್ಯಾಂಡಲ್ ವುಡ್ ಬೋಲ್ಡ್ ಬ್ಯೂಟಿ ಚೈತ್ರಾ ಆಚಾರ್ ಸೋಶಿಯಲ್ ಮೀಡಿಯಾದಲ್ಲಿ ಬಾತ್ ರೂಮ್ ಸೆಲ್ಫೀ ಶೇರ್ ಮಾಡಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ( ) ಸೈಡ್ ಬಿಯಲ್ಲಿ ಸುರಭಿಯಾಗಿ ಅಮೋಘ ಅಭಿನಯ ನೀಡಿದ ಕನ್ನಡದ ಬೋಲ್ಡ್ ಬ್ಯೂಟಿ ಚೈತ್ರಾ ಆಚಾರ್ ತಮ್ಮ ನಟನೆಯಿಂದ ಫೇಮಸ್ ಆಗೋದರ ಜೊತೆಗೆ ತಮ್ಮ ಫೋಟೋ ಶೂಟ್‌‌ಗಳಿಂದಲೂ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಬೋಲ್ಡ್ ಅವತಾರದಲ್ಲಿ ಫೋಟೋ ಶೂಟ್ ಮಾಡಿಸಿ ಅಪ್ ಲೋಡ್ ಮಾಡುವ ಚೈತ್ರಾ ಆಚಾರ್ ( ), ಕನ್ನಡದ ಬೋಲ್ಡ್ ಬ್ಯೂಟಿ ಅಂತಾನೆ ಫೇಮಸ್ರೆ ಇವರ ಫೋಟೋಗಳು ಒಂದಕ್ಕಿಂತ ಒಂದು ವಿಭಿನ್ನವಾಗಿಯೂ, ಬೋಲ್ಡ್ ಆಗಿಯೂ ಇರುತ್ತದೆ. ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಜೊತೆಗೆ ಗಾಯಕಿಯಾಗಿ ಗುರುತಿಸಿಕೊಂಡ ಈ ಚೆಲುವೆ ಇದೀಗ ತಮ್ಮ ಬಾತ್ ರೂಪ್ ಸೆಲ್ಫಿ ಹಂಚಿಕೊಂಡಿದ್ದಾರೆ. () ಎಂದು ಕ್ಯಾಪ್ಶನ್ ಕೊಟ್ಟು ಫೋಟೋ ಅಪ್ ಲೋಡ್ ಮಾಡಿರುವ ಚೈತ್ರಾ ಈ ಫೋಟೋದಲ್ಲಿ ಥೇಟ್ ಆಲಿಯಾ ಭಟ್ ಥರಾನೆ ಕಾಣಿಸ್ತಿದ್ದಾರೆ. ಒಂದು ಆಂಗಲ್ ನಲ್ಲಿ ಆಲಿಯಾ ಭಟ್ ರನ್ನೆ ( ) ಹೋಲುವ ಚೈತ್ರಾರನ್ನು ನೋಡಿ ಜನರು ಕನ್ನಡದ ಆಲಿಯಾ ಭಟ್ ಎಂದು ಹೇಳುತ್ತಾರೆ. ಜನರು ಹಾಗೆ ಹೇಳೋದು ನನಗೆ ಇಷ್ಟ ಅನ್ನೋದನ್ನು ಸಹ ಈ ಹಿಂದೆ ಚೈತ್ರಾ ಮನಸ್ಸು ಬಿಚ್ಚಿ ಹೇಳಿದ್ದರು. ಇನ್ನು ವೃತ್ತಿಪರ ಗಾಯಕಿಯಾಗಬೇಕೆಂದು () ಮಹದಾಸೆ ಹೊಂದಿದ್ದ ಚೈತ್ರಾಗೆ ನಟನೆ ಒಲಿದು ಬಂದಿದ್ದು ಅಕಸ್ಮಿಕವೇ. 2021ರಲ್ಲಿ ಬಿಡುಗಡೆಯಾಗಿದ್ದ ರಾಜ್ ಬಿ ಶೆಟ್ಟಿ, ರಿಷಭ್ ಶೆಟ್ಟಿಯವರ ಗರುಡಗಮನ ವೃಷಭ ವಾಹನ ಸಿನಿಮಾದಲ್ಲಿ ಸೋಜುಗಾದ ಸೂಜು ಮಲ್ಲಿಗೆ ಹಾಡು ಹಾಡಿ, ಸೈಮಾ ಅವಾರ್ಡ್ ಕೂಡ ಗಳಿಸಿದ್ದರು. ನಾನು ಹಾಡೊ ಹಾಡಿಗೂ, ನನ್ನ ಡ್ರೆಸ್ ಗೂ ಹೋಲಿಕೆ ಬೇಡ ಎಂದು ಸ್ಟೇಟ್ ಮೆಂಟ್ ಸಹ ನೀಡಿದ್ದರು. ಚೈತ್ರಾ ಆಚಾರ್ ಬೋಲ್ಡ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುತ್ತವೆ, ಜನರು ನೆಗೆಟಿವ್ ಕಾಮೆಂಟ್ಸ್ ಮಾಡುತ್ತಲೇ ಇರುತ್ತಾರೆ. ಚೈತ್ರಾ ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೇ, ಕಾಮೆಂಟ್ ಸೆಕ್ಷನ್ ಆಫ್ ಮಾಡಿಸಿದ್ದಾರೆ. ಅಷ್ಟೇ ಅಲ್ಲ ನನಗೆ ಯಾರು ಏನು ಮಾಡಬೇಡಿ ಎನ್ನುತ್ತಾರೋ, ಅದನ್ನೇ ಮಾಡೋ ಆಸಕ್ತಿ ಜಾಸ್ತಿ. ಹೌದು ನಾನು ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದೇನೆ, ಬೋಲ್ಡ್ ಪಾತ್ರಗಳನ್ನು ಸಹ ಮಾಡುತ್ತೇನೆ ಎನ್ನುವ ಬೋಲ್ಡ್ ಉತ್ತರ ಕೊಡುತ್ತಾರೆ ಈ ಚೆಲುವೆ. ಇನ್ನು ಚೈತ್ರಾ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಾಹಿರಾ, ಟೋಬಿ, ಸಪ್ತಸಾಗರಾಚೆ ಎಲ್ಲೋ, ಬ್ಲಿಂಕ್ ಸಿನಿಮಾಗಳಲ್ಲಿ ನಟಿಸಿದ್ದ ಇವರು ಸದ್ಯ ಸ್ಟ್ರಾಬೆರ್ರಿ ಮತ್ತು ಹ್ಯಾಪಿ ಬರ್ತ್ ಡೇ ಟು ಮಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪರ ಭಾಷಾ ಸಿನಿಮಾಗಳಲ್ಲಿ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಮಾಡೊದಾಗಿ ತಿಳಿಸಿದ್ದಾರೆ.