ಹಾಟ್ ಲುಕ್‌ನಲ್ಲಿ ಜೊತೆ ಜೊತೆಯಲಿ ನಟಿ ಅಪೂರ್ವ: ಮಿನಿ ಸ್ಕರ್ಟ್‌ನಲ್ಲಿ ಮಗಳನ್ನೇ ಮೀರಿಸ್ತೀರಾ ಎಂದ ಫ್ಯಾನ್ಸ್‌! ಕನ್ನಡ ಕಿರುತೆರೆ ಮತ್ತು ಸಿನಿಮಾ ಎರಡರಲ್ಲೂ ಗುರುತಿಸಿಕೊಂಡಿರುವ ನಟಿ ಅಪೂರ್ವ ಶ್ರೀ ಈಗ ಮಗಳ ಜತೆಗೆ ಪ್ರವಾಸದಲ್ಲಿದ್ದು, ಮಿನಿ ಸ್ಕರ್ಟ್‌ನಲ್ಲಿ ಮಿಂಚಿದ್ದಾರೆ. ವಿಶೇಷವಾಗಿ ಜತೆಗಿದ್ದ ಮಗಳನ್ನೂ ಮೀರಿಸಿದ್ದಾರೆ. ಕನ್ನಡ ಕಿರುತೆರೆ ಮತ್ತು ಸಿನಿಮಾ ಎರಡರಲ್ಲೂ ಗುರುತಿಸಿಕೊಂಡಿರುವ ನಟಿ ಅಪೂರ್ವ ಶ್ರೀ ಈಗ ಮಗಳ ಜತೆಗೆ ಪ್ರವಾಸದಲ್ಲಿದ್ದು, ಮಿನಿ ಸ್ಕರ್ಟ್‌ನಲ್ಲಿ ಮಿಂಚಿದ್ದಾರೆ. ವಿಶೇಷವಾಗಿ ಜತೆಗಿದ್ದ ಮಗಳನ್ನೂ ಮೀರಿಸಿದ್ದಾರೆ. ಕಿರುತೆರೆಯಲ್ಲಿ ಹೆಸರು ಮಾಡಿರುವ ನಟಿ ಅಪೂರ್ವ ಶ್ರೀ ಪ್ರವಾಸದ ಮೂಡ್‌ನಲ್ಲಿದ್ದಾರೆ. ಮಗಳ ಜತೆಗೆ ಲಕ್ಷದ್ವೀಪಕ್ಕೆ ಹಾರಿದ್ದಾರೆ. ಧಾರಾವಾಹಿಗಳಲ್ಲಿ ಲಕ್ಷಣವಾಗಿ ಸೀರೆಯಲ್ಲಿ ಎದುರಾಗುವ ಈ ನಟಿ, ಇದೀಗ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಮಗಳು ರಾಜ್ವಿ ಜತೆಗೆ ಲಕ್ಷದ್ವೀಪಕ್ಕೆ ಪ್ರಯಾಣ ಬೆಳೆಸಿ, ವೆಕೇಷನ್‌ ಅನ್ನು ಭರ್ಜರಿಯಾಗಿಯೇ ಎಂಜಾಯ್‌ ಮಾಡಿದ್ದಾರೆ. ಸದ್ಯ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ನಲ್ಲಿ ಸುಬ್ಬುವಿನ ತಾಯಿ ಪಾತ್ರದಲ್ಲಿ ಅಪೂರ್ವ ನಟಿಸುತ್ತಿದ್ದಾರೆ. ಈ ಸೀರಿಯಲ್‌ ಶೂಟಿಂಗ್‌ನ ಬಿಡುವಿನಲ್ಲಿಯೇ ಮಗಳ ಜತೆಗೆ ಲಕ್ಷ ದ್ವೀಪಕ್ಕೆ ಹಾರಿ, ಬೀಚ್‌ ಬಳಿ ಮೋಜು ಮಸ್ತಿ ಮಾಡಿದ್ದಾರೆ. ವಿಶೇಷ ಏನೆಂದರೆ, ಮಗಳು ರಾಜ್ವಿ ಮೈತುಂಬ ಬಟ್ಟೆ ಧರಿಸಿದರೆ, ತಾಯಿ ಅಪೂರ್ವ ಮಿನಿ ಸ್ಕರ್ಟ್‌ನಲ್ಲಿ ಮಿಂದೆದ್ದಿದ್ದಾರೆ. ನಟಿಯ ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಸೂಪರ್‌ ಎಂದು ಕಾಮೆಂಟ್‌ ಹಾಕುತ್ತಿದ್ದಾರೆ. ಇನ್ನು ಕೆಲವರು ವಯಸ್ಸು ಕೇವಲ ನಂಬರ್‌ ಮಾತ್ರ ಎನ್ನುತ್ತಿದ್ದಾರೆ. ವಾವ್ ಮಿರಾಕಲ್ ಅಮ್ಮ, ಇದು ನೀವಾ ನಂಬಕ್ಕೆ ಆಗ್ತಿಲ್ಲ ನನಗೆ ಎಂದೂ ಕೆಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ವಯಸ್ಸು ಕೇವಲ ನಂಬರ್ ಅಷ್ಟೇ, ಹಾಟ್ ಅಪೂರ್ವ ಅಂತ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದು, ಲಕ್ಷದ್ವೀಪದಲ್ಲಿ ಬರೀ ಬೀಚ್‌ ಸುತ್ತಾಡದೇ, ಕ್ರೂಸ್‌ ಏರಿ ಎಂಜಾಯ್‌ ಸಹ ಮಾಡುತ್ತಿದ್ದಾರೆ. ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಕಥಾನಾಯಕಿ ಅನು ಸಿರಿಮನೆ ತಾಯಿ ಪುಷ್ಪ ಪಾತ್ರವನ್ನ ನಿರ್ವಹಿಸಿದವರು ನಟಿ ಅಪೂರ್ವ ಶ್ರೀ. ‘ಜೊತೆ ಜೊತೆಯಲಿ’ ಸೀರಿಯಲ್‌ ಮೂಲಕ ಅಪೂರ್ವ ಶ್ರೀ ಅವರಿಗೆ ಸಿಕ್ಕಾಪಟ್ಟೆ ಜನಪ್ರಿಯತೆ ಲಭಿಸಿತು.