ತಿನ್ಬೇಕಾದ್ರೂ ನೆಟ್ಟಗೆ ಕೂರಮ್ಮ; ಜೈ ಜಗದೀಶ್ ಪುತ್ರಿ ಮತ್ತೆ ಟ್ರೋಲ್! ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ವೈಭವಿ ಜಗದೀಶ್ ಫಾಲೋವರ್ಸ್. ಕ್ರೇಜ್ ಹೆಚ್ಚಿಸುತ್ತಿರುವ ಸುಂದರಿಯನ್ನು ಮದುವೆಯಾಗಲು ಹರಿದು ಬರುತ್ತಿದೆ ಆಫರ್‌ಗಳು... ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ವೈಭವಿ ಜಗದೀಶ್ ಫಾಲೋವರ್ಸ್. ಕ್ರೇಜ್ ಹೆಚ್ಚಿಸುತ್ತಿರುವ ಸುಂದರಿಯನ್ನು ಮದುವೆಯಾಗಲು ಹರಿದು ಬರುತ್ತಿದೆ ಆಫರ್‌ಗಳು... ಕನ್ನಡ ಚಿತ್ರರಂಗದ ಹಿರಿಯ ನಟ ಜೈ ಜಗದೀಶ್ ಮತ್ತು ವಿಜಯಲಕ್ಷ್ಮಿ ಸಿಂಗ್ ಅವರ ಮುದ್ದಿನ ಪುತ್ರಿ ವೈಭವಿ ಜಗದೀಶ್ ದಿನದಿಂದ ದಿನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಕ್ರೇಜ್ ಹೆಚ್ಚಿಸುತ್ತಿದ್ದಾರೆ. ಒಂದು ಲಕ್ಷ ಮೂವತ್ತು ಸಾವಿರ ಫಾಲೋವರ್ಸ್ ಹೊಂದಿರುವ ವೈಭವಿ ಜಗದೀಶ್ ಹೆಚ್ಚಾಗಿ ಬ್ಯೂಟಿ, ಫ್ಯಾಷನ್ ಮತ್ತು ಟ್ರಾವಲ್‌ ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ. ಲಾಕ್‌ಡೌನ್‌ ನಂತರ ವೈಭವಿ ಜಗದೀಶ್ ಫಿಸಿಕಲ್ ಟ್ರಾನ್ಸ್‌ಫಾರ್ಮೇಷನ್ ಕಂಡರು. ಸಿಕ್ಕಾಪಟ್ಟೆ ತೂಕ ಇಳಿಸಿಕೊಂಡಿದ್ದಾರೆ ಅಲ್ಲಿಂದ ಪಡ್ಡೆ ಹುಡುಗರ ಗಮನ ಸೆಳೆಯಲು ಶುರುವಾಯ್ತು. ಸದ್ಯ ವೈಭವಿ ಜಗದೀಶ್ ಕೈಯಲ್ಲಿ ಕೇಕ್ ಹಿಡಿದು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಕಪ್‌ಕೇಕ್‌ ಬೇಕಾ ಯಾರಿಗಾದರೂ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗುತ್ತಿದೆ. ಯಾಕಮ್ಮಾ??? ಸರಿಯಾಗಿ ಕೂತ್ಕೊಂಡು ತಿನ್ನಬಹುದು ಅಲ್ವಾ? ಯಾವ ವಕ್ರವಕ್ರ ಕೂತ್ಕೊಂಡಿದ್ಯಾ? ಊಟಕ್ಕೆ ಗೌರವ ಕೊಡಮ್ಮ...ಆಹಾರದ ಜೊತೆ ಆಟ ಬೇಡ ಎಂದು ನೆಟ್ಟಿಗರು ಕಿವಿ ಮಾತುಗಳನ್ನು ಕೇಳಿದ್ದಾರೆ. ಚಿಕ್ಕವಯಸ್ಸಿನಲ್ಲಿ ಮೂರ್ನಾಲ್ಕು ಸಿನಿಮಾಗಳನ್ನು ಮಾಡಿದ ವೈಭವಿ ಜಗದೀಶ್‌ ಮತ್ತು ಸಹೋದರಿಯರನ್ನು ಯಾನಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ವಿಜಯಲಕ್ಷ್ಮಿ ಸಿಂಗ್ ಪರಿಚಯ ಮಾಡಿಕೊಡುತ್ತಾರೆ.