ಎನ್ನುತ್ತಲೇ ಬೋಲ್ಡ್ ಅವತಾರದಲ್ಲಿ‌ ಪೋಸ್ ಕೊಟ್ಟ ಡಾಲಿ ಧನಂಜಯ್ ನಾಯಕಿ ಡಾಲಿ ಧನಂಜಯ್ ಅಭಿನಯದ ಕೋಟಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ಮೋಕ್ಷಾ ಕುಶಲ್ ತುಂಬಾನೆ ಜಾಸ್ತಿ ಎನ್ನುವಷ್ಟು ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಡಾಲಿ ಧನಂಜಯ್ ಅಭಿನಯದ ಕೋಟಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ಮೋಕ್ಷಾ ಕುಶಲ್ ತುಂಬಾನೆ ಜಾಸ್ತಿ ಎನ್ನುವಷ್ಟು ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಪರಮೇಶ್ವರ್ ಗುಂಡ್ಕಲ್ ನಿರ್ದೇಶನದ, ಡಾಲಿ ಧನಂಜಯ್ ಅಭಿನಯದ ಕೋಟಿ ಸಿನಿಮಾಗೆ ಸ್ಪಷ್ಟವಾಗಿ ಕನ್ನಡ ಮಾತನಾಡುವ, ಮುದ್ದಾದ ಹುಡುಗಿಯ ಅನ್ವೇಷಣೆಯಲ್ಲಿದ್ದಾಗಲೇ ಪರಮ್ ಗೆ ಸಿಕ್ಕ ಕೊಡಗಿನ ಬೆಡಗಿ ಮೋಕ್ಷಾ ಕುಶಾಲ್ ( ). ಈಗ ಸಿನಿಮಾ ರಿಲೀಸ್ ಆಗಿದ್ದು ಆಗಿದೆ, ಮೋಕ್ಷಾ ನಟನೆಯನ್ನು ಜನ ಮೆಚ್ಚಿಕೊಂಡಿದ್ದು ಆಗಿದೆ. ಆದಿ ಪುರಾಣ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕೂರ್ಗ್ ಬ್ಯೂಟಿ ಮೋಕ್ಷಾ, ನಂತರ ನವರತ್ನ ಸಿನಿಮಾದಲ್ಲಿ ವೈಲ್ಡ್ ಲೈಫ್ ಫೋಟೊಗ್ರಾಫರ್ ಆಗುವ ಮೂಲಕ ಚಿರಪರಿಚಿತರಾದರು. ಇದೀಗ ಡಾಲಿ ಧನಂಜಯ್ ಗೆ ( ) ನಾಯಕಿಯಾಗಿ ಗುರುತಿಸಿಕೊಂಡಿರುವ ಮೋಕ್ಷ ಸಖತ್ ಬೋಲ್ಡ್ ಮತ್ತು ಬಬ್ಲಿ ಗರ್ಲ್ ಅನ್ನೋದು ಗೊತ್ತೇ ಇದೆ. ಸೋಶಿಯಲ್ ಮೀಡೀಯಾದಲ್ಲಿ ( ) ಆಕ್ಟೀವ್ ಆಗಿರುವಮೋಕ್ಷಾ ಕುಶಾಲ್, ಹೆಚ್ಚಾಗಿ ತಮ್ಮ ಬೋಲ್ಡ್ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ತುಸು ಹೆಚ್ಚೇ ಎನ್ನುವಂತೆ ತುಂಬಾನೆ ಹಾಟ್ ಆಗಿ ಫೋಟೊ ಶೂಟ್ ಮಾಡಿಸಿದ್ದು, ಇವರ ಹಾಟ್ ಫೋಟೊದಿಂದ ಇಂಟರ್ನೆಟಲ್ಲಿ ಬಿಸಿ ಹೆಚ್ಚಾಗಿದೆ ಅಂತಾನೆ ಹೇಳಬಹುದು. ಮೋಕ್ಷಾ ಟ್ಯೂಬ್ ಬ್ರಾ ಧರಿಸಿ, ಹರಿದ ಜೀನ್ಸ್ ಧರಿಸಿ, ಬೋಲ್ಡ್ ಆಗಿ ಪೋಸ್ ನೀಡಿ ಫೊಟೊ ತೆಗೆಸಿಕೊಂಡಿದ್ದಾರೆ. ಬ್ಲ್ಯಾಕ್ ಆಂಡ್ ವೈಟ್ ಫೋಟೊಗಳನ್ನು ಹರಿಯಬಿಟ್ಟಿರುವ ಮೋಕ್ಷಾ ಅದಕ್ಕೆ ಅಂತ ಕ್ಯಾಪ್ಶನ್ ಬೇರೆ ಕೊಟ್ಟಿದ್ದಾರೆ. ಸದ್ಯ ಈ ಫೋಟೊಗಳು ಪಡ್ಡೆಗಳ ಎದೆಯಲ್ಲಿ ಕುಚ್ಚು ಹಚ್ಚಿದ ಅಂದ್ರೆ ತಪ್ಪಲ್ಲ. ಮೋಕ್ಷಾರ ಈ ಫೋಟೊಗಳು ಸಖತ್ ವೈರಲ್ ಆಗ್ತಿವೆ. ಮೋಕ್ಷಾ ಬ್ಯೂಟಿಗೆ ಗಂಡು ಹೈಕ್ಳು ಫಿದಾ ಆಗಿದ್ದು, ಓ ಮೈ ಗಾಡ್, ಸೆಕ್ಸಿ, ಹಾಟಿ, ಜಕಾಸ್, ತುಂಬಾನೆ ಮಾಡರ್ನ್ ಆಗಿ ಕಾಣಿಸ್ತಿದ್ದೀರಾ, ತುಂಬಾನೆ ಸ್ಟನ್ನಿಂಗ್ ಆಗಿದೆ, ಆದಷ್ಟು ಬೇಗನೆ ಕಲರ್ ಫೋಟೊ ಅಪ್ ಲೋಡ್ ಮಾಡಿ ನಾವು ಕಾಯ್ತಿದ್ದೀವಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಸ್ಯಾಂಡಲ್’ವುಡ್ ನಟಿಯರು ಸಹ ಬಾಲಿವುಡ್ ನಟಿಯರಂತೆ ( ) ಇಷ್ಟೊಂದು ಬೋಲ್ಡ್ ಆಗಿ ಕಾಣಿಸಿಕೊಳ್ಳೋದಕ್ಕೆ ಶುರು ಮಾಡಿದ್ದಾರೆ ಎಂದು ಟೀಕಿಸಿದ್ದಾರೆ. ಇನ್ನೂ ಒಬ್ರು ಇಲ್ಲಿ ಕಂಟೆಂಟ್ ಹಾಟ್ ಆಗಿಲ್ಲ, ಆದ್ರೆ ಇಲ್ಲಿರೋ ಹುಡುಗಿ ತುಂಬಾನೆ ಹಾಟ್ ಆಗಿದ್ದಾರೆ, ಸುತ್ತಲೂ ಬಿಸಿ ಹೆಚ್ಚಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮಾಡೆಲ್ ಆಗಿರುವಮೋಕ್ಷಾನಿಜವಾಗಿಯೂ ತುಂಬಾನೆ ಹಾಟ್ ಆಗಿಯೇ ಇದ್ದಾರೆ. ಇವರು ಹಲವು ಫ್ಯಾಷನ್ ಶೋ, ಈವೆಂಟ್ ಗಳಲ್ಲಿ ಕೂಡ ಭಾಗವಹಿಸಿದ್ದಾರೆ, ಜೊತೆಗೆ ಗೋದ್ರೇಜ್ ಸೋಪ್, ಸಂಗೀತಾ ಮೊಬೈಲ್, ಸಿರೋನಾ ಮೆನ್ಸ್ಟ್ರುವಲ್ ಕಪ್, ಕ್ರಾಸ್ ಬೀಟ್ ಸ್ಮಾರ್ಟ್ ವಾಚ್, ಟೈಟಾನ್ ವಾಚ್, ಸೀರೆ, ಜ್ಯುವೆಲ್ಲರಿಗಳಿಗೆ ಮಾಡೆಲ್ ಆಗಿ ಹಲವಾರು ಜಾಹೀರಾತುಗಳಲ್ಲಿ () ಮೋಕ್ಷಾ ನಟಿಸಿದ್ದಾರೆ. ಮುಂದೆ ಯಾವ ಸಿನಿಮಾದಲ್ಲಿ ಇವರು ನಟಿಸಲಿದ್ದಾರೆ ಎಂದು ಜನರು ಕೂಡ ಕಾಯ್ತಿದ್ದಾರೆ.