ಮೆಟ್‌ ಗಾಲಾ ರೆಡ್‌ ಕಾರ್ಪೆಟ್‌ ಮೇಲೆ ಮಿಂಚಿದ ಭಾರತೀಯ ಸೆಲೆಬ್ರೆಟಿಗಳು ಫೇಮಸ್‌ ಸ್ಟಾರ್-ಸ್ಟನ್ಡ್ ಈವೆಂಟ್ ಮೆಟ್ ಗಾಲಾ 2024 ಮೇ 06, 2024 ರಂದು ನಡೆಯಲಿದೆ. ನ್ಯೂಯಾರ್ಕ್‌ನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ಈ ಭವ್ಯ ಕಾರ್ಯಕ್ರಮ ನಡೆಯಲಿದೆ, ಇದನ್ನು ಮೆಟ್ ಎಂದು ಕರೆಯಲಾಗುತ್ತದೆ. ಇದುವರೆಗೂ ಮೆಟ್‌ ಗಾಲಾದ ರೆಡ್‌ ಕಾರ್ಪೆಟ್‌ ಮೆಲೆ ಹೆಜ್ಜೆ ಹಾಕಿದ ಭಾರತೀಯ ಸೆಲೆಬ್ರೆಟಿಗಳು ಇವರು. ಫೇಮಸ್‌ ಸ್ಟಾರ್-ಸ್ಟನ್ಡ್ ಈವೆಂಟ್ ಮೆಟ್ ಗಾಲಾ 2024 ಮೇ 06, 2024 ರಂದು ನಡೆಯಲಿದೆ. ನ್ಯೂಯಾರ್ಕ್‌ನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ಈ ಭವ್ಯ ಕಾರ್ಯಕ್ರಮ ನಡೆಯಲಿದೆ, ಇದನ್ನು ಮೆಟ್ ಎಂದು ಕರೆಯಲಾಗುತ್ತದೆ. ಇದುವರೆಗೂ ಮೆಟ್‌ ಗಾಲಾದ ರೆಡ್‌ ಕಾರ್ಪೆಟ್‌ ಮೆಲೆ ಹೆಜ್ಜೆ ಹಾಕಿದ ಭಾರತೀಯ ಸೆಲೆಬ್ರೆಟಿಗಳು ಇವರು. ಆಲಿಯಾ ಭಟ್:ಆಲಿಯಾ ಭಟ್ 2023ರಲ್ಲಿ ತನ್ನ ಬಹು ನಿರೀಕ್ಷಿತ ಮೆಟ್ ಗಾಲಾ ಪಾದಾರ್ಪಣೆ ಮಾಡಿದರು, ಪ್ರಸಿದ್ಧ ಡಿಸೈನರ್ ಪ್ರಬಲ್ ಗುರುಂಗ್ ವಿನ್ಯಾಸಗೊಳಿಸಿದ ಕೌಚರ್ ಗೌನ್‌ಧರಿಸಿ ಆಲಿಯಾ ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿದರು. ಅವರ 4 ಔಟ್‌ಫಿಟ್‌ ಫ್ಯಾಷನ್ ಐಕಾನ್ ಕಾರ್ಲ್ ಲಾಗರ್‌ಫೆಲ್ಡ್‌ಗೆ ಗೌರವ ಸಲ್ಲಿಸಿತು ಮತ್ತು ಅದು ಶನೆಲ್‌ನ ಚಳಿಗಾಲದ 1992 ರ ಸಂಗ್ರಹದ ಲಾಗರ್‌ಫೆಲ್ಡ್‌ನ ಕ್ಲಾಸಿಕ್ ಬ್ರೈಡಲ್ ವಿನ್ಯಾಸದಿಂದ ಸ್ಫೂರ್ತಿ ಪಡೆದಿತ್ತು. ದೀಪಿಕಾ ಪಡುಕೋಣೆ:ದೀಪಿಕಾ ಪಡುಕೋಣೆ ಅವರ ಮೆಟ್ ಗಾಲಾ ಪ್ರದರ್ಶನಗಳು ಅದ್ಭುತ. ದೀಪಿಕಾ ಪಡುಕೋಣೆ ತಮ್ಮ ಮೆಟ್‌ ಗಾಲಾ ಲುಕ್‌ನಿಂದ ನಿರಂತರವಾಗಿ ಫ್ಯಾಶನ್ ವಿಮರ್ಶಕರು ಮತ್ತು ಅಭಿಮಾನಿಗಳನ್ನು ಬೆರಗುಗೊಳಿಸಿದ್ದಾರೆ. 2018 ರಲ್ಲಿ ಹೆವೆನ್ಲಿ ಬಾಡೀಸ್: ಫ್ಯಾಶನ್ ಮತ್ತು ಕ್ಯಾಥೋಲಿಕ್ ಇಮ್ಯಾಜಿನೇಶನ್ ಥೀಮ್‌ಗಾಗಿ ಪ್ರಬಲ್ ಗುರುಂಗ್ ಅವರ ಈ ಗೌನ್ ದೀಪಿಕಾ ಧರಿಸಿದ್ದರು. ಪ್ರಿಯಾಂಕಾ ಚೋಪ್ರಾ:ಪ್ರಿಯಾಂಕಾ ಚೋಪ್ರಾ ಜೊನಾಸ್ 2017 ರಿಂದ 2023ರವರೆಗೆ ಮೆಟ್ ಗಾಲಾದ ರೆಡ್‌ ಕಾರ್ಪೆಟ್‌ ಅಲಂಕರಿಸಿದ್ದಾರೆ. ಪ್ರತಿ ವರ್ಷ, ಅವರು ತಮ್ಮ ಔಟ್‌ಫಿಟ್‌ನ ಆಯ್ಕೆಯ ಮೂಲಕ ಪ್ರೇಕ್ಷಕರನ್ನು ಅಚ್ಚರಿಗೊಳಿಸುತ್ತಾರೆ. ಇದರಲ್ಲಿ ಪಿಸಿ ಮೈಸನ್ ವ್ಯಾಲೆಂಟಿನೋಕಲೆಕ್ಷನ್‌ನ ಮಡೋನಾ-ಪ್ರೇರಿತ ಗೌನ್‌ ಅನ್ನು ಧರಿಸಿದ್ದರು. ದಿಯಾ ಮೆಹ್ತಾ ಜಾತಿಯಾ:ಫ್ಯಾಷನ್ ಸಲಹೆಗಾರರಾದ ದಿಯಾ ಮೆಹ್ತಾ ಜಟಿಯಾ ಅವರು 2023 ರಲ್ಲಿ ಮೆಟ್ ಗಾಲಾದಲ್ಲಿ ಪ್ರಬಲ್ ಗುರುಂಗ್ ಅವರ ಔಟ್‌ಫಿಟ್‌ ಅನ್ನು ಧರಿಸಿದ್ದರು. ಪಚ್ಚೆ ಹಸಿರು ಸ್ಕರ್ಟ್ ಮತ್ತು ಕಪ್ಪು ರವಿಕೆ ಜೊತೆಗೆ ವಿಲಿಯಂ ಗೋಲ್ಡ್‌ಬರ್ಗ್ ಕಿವಿಯೋಲೆ ಧರಿಸಿದ್ದರು. ನತಾಶಾ ಪೂನವಾಲಾ:ವಾಣಿಜ್ಯೋದ್ಯಮಿ ಮತ್ತು ಸ್ಟೈಲ್‌ ಕ್ವೀನ್‌ ನತಾಶಾ ಪೂನವಾಲ್ಲಾ ಅವರು ಮೆಟ್ ಗಾಲಾದಲ್ಲಿ ತಮ್ಮ ನವ್ಯ ವಿನ್ಯಾಸಗಳೊಂದಿಗೆ ಫ್ಯಾಷನ್ ಮಿತಿಗಳನ್ನು ಪದೇ ಪದೇ ಮೀರಿದ್ದಾರೆ. ಪೂನಾವಲ್ಲಾ ಅವರು ಷಿಯಾಪರೆಲ್ಲಿ ಗೌನ್ ಅನ್ನು ಧರಿಸಿದ್ದರು.