ಜಾನ್ವಿ ಕಪೂರ್‌ ಧರಿಸಿರುವ ಈ ತುಂಡುಡುಗೆ ಬೆಲೆ ಬರೋಬ್ಬರಿ 1.86 ಲಕ್ಷವಂತೆ! ಬಾಲಿವುಡ್‌ನ ನಟಿ ಜಾನ್ವಿ ಕಪೂರ್ ಸ್ಟೈಲಿಶ್ ಲೇಸ್-ಅಪ್ ಮಿನಿ ಡ್ರೆಸ್‌ನಲ್ಲಿ ಗಮನ ಸೆಳೆದಿದ್ದಾರೆ. ಇವರ ಫೋಟೋಗಳು ಸಖತ್‌ ವೈರಲ್‌ ಆಗಿವೆ. ನಟಿ ಧರಿಸಿರುವ ಈ ಮಿನಿ ಡ್ರೆಸ್‌ನ ಬೆಲೆ ಮಾತ್ರ ಸಾಮಾನ್ಯರು ಕಲ್ಪಿಸಿಕೊಳ್ಳಲೂ ಅಸಾಧ್ಯ. ಹಾಗಾದರೆ ಜಾನ್ವಿ ಔಟ್‌ಫಿಟ್‌ನ ಬೆಲೆ ಎಷ್ಷು? ಬಾಲಿವುಡ್‌ನ ನಟಿ ಜಾನ್ವಿ ಕಪೂರ್ ಸ್ಟೈಲಿಶ್ ಲೇಸ್-ಅಪ್ ಮಿನಿ ಡ್ರೆಸ್‌ನಲ್ಲಿ ಗಮನ ಸೆಳೆದಿದ್ದಾರೆ. ಇವರ ಫೋಟೋಗಳು ಸಖತ್‌ ವೈರಲ್‌ ಆಗಿವೆ. ನಟಿ ಧರಿಸಿರುವ ಈ ಮಿನಿ ಡ್ರೆಸ್‌ನ ಬೆಲೆ ಮಾತ್ರ ಸಾಮಾನ್ಯರು ಕಲ್ಪಿಸಿಕೊಳ್ಳಲೂ ಅಸಾಧ್ಯ. ಹಾಗಾದರೆ ಜಾನ್ವಿ ಔಟ್‌ಫಿಟ್‌ನ ಬೆಲೆ ಎಷ್ಷು? ಜಾನ್ವಿ ಇತ್ತೀಚಿಗೆ ಸ್ಟೈಲಿಶ್ ಚೆಕ್ ಮಿನಿ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಈ ಸರಣಿಯ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿರುವ ಜಾನ್ವಿ ತಮ್ಮ ಫ್ಯಾಶನ್-ಫಾರ್ವರ್ಡ್ ಲುಕ್‌ಗಳಿಂದ ತುಂಬಿರುವ ಫೋಟೋಗಳಿಂದ ಎಲ್ಲ ಅನುಯಾಯಿಗಳಿಗೆ ಸ್ಟೈಲ್‌ ಐತಾನ್ ಆಗಿದ್ದಾರೆ. ಜಾನ್ವಿ ಕಪೂರ್ ಅವರು ತಮ್ಮ ಫ್ಯಾಷನ್‌ನಿಂದ ಹೇಗೆ ರಾಕ್ ಮಾಡುವುದು ಎಂಬುದನ್ನು ಚೆನ್ನಾಗಿ ಅರಿತಿದ್ದಾರೆ. ಅದು ಮಿನಿ ಡ್ರೆಸ್ ಆಗಿರಲಿ ಅಥವಾ ಸೀರೆಯಾಗಿರಲಿ ಅಥವಾ ದಾವಣಿ ಲಂಗವೇ ಇರಲಿ ಎಲ್ಲಾ ನೋಟವನ್ನು ಪರ್ಫೇಕ್ಟ್‌ ಆಗಿ ಕ್ಯಾರಿ ಮಾಡುತ್ತಾರೆ. ಕಪ್ಪು ಮತ್ತು ಬಿಳಿ ಚೆಕ್ಡ್ ಡ್ರೆಸ್‌ನ ಡೀಪ್‌ ನೆಕ್‌, ಪಫ್ಡ್ ಸ್ಲೀವ್‌ಗಳು, ಲೇಸ್-ಅಪ್ ಫಾಸ್ಟೆನಿಂಗ್, ಬಾಡಿಕಾನ್ ಫಿಟ್ ಮತ್ತು ಮಿನಿ ಹೆಮ್‌ಲೈನ್ ಜಾನ್ವಿ ಕರ್ವಿ ಫಿಗರ್‌ ಅನ್ನು ಹೈಲೈಟ್ ಮಾಡಿದೆ. ಜಾನ್ವಿ ತಮ್ಮ ಚಿಕ್ ಲುಕ್ ಅನ್ನು ಒಂದು ಜೋಡಿ ಪರ್ಲ್ ಸ್ಟಡ್ ಕಿವಿಯೋಲೆಗಳು ಮತ್ತು ತನ್ನ ವದಂತಿಯ ಬಾಯ್‌ಫ್ರೆಂಡ್ 'ಶಿಖು' ಹೆಸರು ಹೊಂದಿರುವ ಡೈಮಂಡ್ ಸ್ಟೇಟ್‌ಮೆಂಟ್ ಚೈನ್ ನೆಕ್ಲೇಸ್‌ ಧರಿಸಿ, ಮೊನಚಾದ ಬಿಳಿ ಪಂಪ್ ಹೀಲ್ಸ್‌ನೊಂದಿಗೆ, ತಮ್ಮ ನೋಟವನ್ನು ಪೂರ್ಣ ಗೊಳಿಸಿದ್ದಾರೆ. ಜಾನ್ವಿ ಆಯ್ಕೆ ಮಾಡಿರುವ ಡಿಸೈನರ್ ಬ್ರ್ಯಾಂಡ್ ಅಲೆಸ್ಸಾಂಡ್ರಾ ರಿಚ್‌ ಕಲೆಕ್ಷನ್‌ನ ಈ ಉಡುಗೆ ಬೆಲೆ $2,232 ಅಂದರೆ 1.86 ಲಕ್ಷಕ್ಕೆ ಸಮನಾಗಿದೆ. ಸೆಲೆಬ್ರಿಟಿ ಫ್ಯಾಶನ್ ಸ್ಟೈಲಿಸ್ಟ್ ಮನೀಶಾ ಮೆಲ್ವಾನಿ ಮತ್ತು ಮೇಕಪ್ ಕಲಾವಿದೆ ತನ್ವಿ ಚೆಂಬೂರ್ಕರ್ ಜಾನ್ವಿ ಅವರನ್ನು ಸೊಗಸಾದ ಗೊಂಬೆಯಂತೆ ಕಾಣಲು ಸಹಾಯ ಮಾಡಿದ್ದಾರೆ.