ಮತ್ತೆ ಬೋಲ್ಡ್ ಫೋಟೋ ಮೂಲಕ ಟೆಂಪ್ರೇಚರ್ ಹೆಚ್ಚಿಸಿದ ಚೈತ್ರಾ ಆಚಾರ್! ಸ್ಯಾಂಡಲ್ ವುಡ್ ನ ಬೋಲ್ಡ್ ಬ್ಯೂಟಿ ಚೈತ್ರಾ ಆಚಾರ್ ಮತ್ತೆ ಟೆಂಪ್ರೇಚರ್ ಹೆಚ್ಚಿಸುವಂತಹ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಸ್ಯಾಂಡಲ್ ವುಡ್ ನ ಬೋಲ್ಡ್ ಬ್ಯೂಟಿ ಚೈತ್ರಾ ಆಚಾರ್ ಮತ್ತೆ ಟೆಂಪ್ರೇಚರ್ ಹೆಚ್ಚಿಸುವಂತಹ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಸಪ್ತಸಾಗರದಾಚೆ ಎಲ್ಲೋ ಪಾರ್ಟ್ ಬಿ ಬೆಡಗಿ ಚೈತ್ರಾ ಆಚಾರ್ ( ) ಇತ್ತೀಚಿನ ದಿನಗಳಲ್ಲಿ ತಮ್ಮ ಬೋಲ್ಡ್ ಫೋಟೋ ಶೂಟ್ ನಿಂದಾಗಿಯೇ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಮತ್ತೊಂದಿಷ್ಟು ಫೋಟೋ ಗಳನ್ನು ಶೇರ್ ಮಾಡಿದ್ದು, ಪಡ್ಡೆಗಳ ನಿದ್ದೆ ಕೆಡಿಸುವಂತಿದೆ. ಸೋಶಿಯಲ್ ಮಿಡಿಯಾದಲ್ಲಿ ( ) ಸಖತ್ ಆಕ್ಟೀವ್ ಆಗಿರುವ ಬೋಲ್ಡ್ ಬ್ಯೂಟಿ ಚೈತ್ರಾ ಆಚಾರ್ ಹೆಚ್ಚಾಗಿ ಅರೆಬರೆ ಉಡುಗೆಯಲ್ಲೇ ಫೋಟೋ ಶೂಟ್ ಮಾಡಿಸುತ್ತಿರುತ್ತಾರೆ. ಅವರು ಸೀರೆಯುಟ್ಟರೂ ಮಾದಕ ಭಂಗಿಯಲ್ಲೇ ಪೋಸ್ ಕೊಡುತ್ತಾರೆ. ಆದರೆ ಈ ಬಾರಿ ಒಂದು ಹೆಜ್ಜೆ ಮುಂದೇ ಹೋಗಿದ್ದಾರೆ. ಸ್ಯಾಂಡಲ್ ವುಡ್ ನ () ಬೋಲ್ಡ್ ಬ್ಯೂಟಿ ಎಂದೇ ಖ್ಯಾತಿ ಪಡೆದಚೈತ್ರಾ ಆಚಾರ್ಇದೀಗ ತಮ್ಮ ಇನ್ ಸ್ಟಾಗ್ರಾಂನಲ್ಲಿ ಟೂ ಪೀಸ್ ಧರಿಸಿ, ಅದರ ಮೇಲೋಂದು ಪಾರದರ್ಶಕ ಉಡುಗೆ ಧರಿಸಿ, ಆ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಆ ಮೂಲಕ ಚೈತ್ರಾ ತಾವು ಬೋಲ್ಡೆಸ್ಟ್ ಅನ್ನೋದನ್ನು ರೂಪಿಸಿದ್ದಾರೆ. ತುಂಡುಡುಗೆಯಲ್ಲಿ ಕಾಣಿಸಿಕೊಂಡರೂ ಚೈತ್ರಾ ಯಾವತ್ತೂ ಬಿಕಿನಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ತಮ್ಮ ಬೋಲ್ಡ್ ಮಾತು, ನಡೆ, ನುಡಿಯಂತೆ, ಬಿಕಿನಿ ಫೋಟೋಗಳನ್ನು ಶೇರ್ ಮಾಡುವ ಮೂಲಕ ತಾನು ಯಾವತ್ತಿದ್ರೂ ಬೋಲ್ಡ್ ಎಂದಿದ್ದಾರೆ. ಇನ್ನು ಆ ಫೋಟೋಗಳಿಗೆ ಚೈತ್ರಾ ಕ್ಯಾಪ್ಶನ್ ಕೂಡ ಕೊಟ್ಟಿದ್ದು ಆಕೆಯ ಬಗ್ಗೆ ಅದೆಷ್ಟೋ ಅಮೇಜಿಂಗ್ ವಿಷಯಗಳಿವೆ, ಅದರಲ್ಲಿ ಅವಳ ದೇಹ ಕೂಡ ಒಂದು ( … …) ಎಂದು ಬರೆದುಕೊಂಡಿದ್ದಾರೆ. ಹಿಂದೆ ಚೈತ್ರಾ ಫೋಟೋಗಳಿಗೆ ಕೆಟ್ಟದಾಗಿ ಕಾಮೆಂಟ್ ಗಳು ಬರುತ್ತಿದ್ದವು, ಹಾಗಾಗಿ ಚೈತ್ರಾ ಯಾವ ರಗಳೆಯೂ ಬೇಡ ಎಂದು ತಮ್ಮ ಕಾಮೆಂಟ್ ಸೆಕ್ಷನ್ ಕ್ಲೋಸ್ ಮಾಡಿದ್ದಾರೆ. ಆದರೆ ಫ್ಯಾನ್ ಪೇಜ್ ಗಳಲ್ಲಿ ಮಾತ್ರ ಚೈತ್ರಾ ಫೋಟೋ ಭಾರಿ ಸದ್ದು ಮಾಡ್ತಿದೆ. ಚೈತ್ರಾ ಹೊಟ್ಟೆ ನೋಡಿದ ಜನ ನೀವು ಪ್ರೆಗ್ನೆಂಟಾ ಅಂತ ಕೇಳ್ತಿದ್ದಾರೆ? ಇನ್ನು ಕರಿಯರ್ ವಿಷಯಕ್ಕೆ ಬರೋದಾದ್ರೆ, ಯಾವಾಗಲೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸೋಕೆ ಇಷ್ಟಪಡುವ ಚೈತ್ರಾ ಆಚಾರ್, ಇದೀಗ ಧನಂಜಯ್ ನಟಿಸಲಿರುವ ಉತ್ತರಾಕಾಂಡ ಸಿನಿಮಾದಲ್ಲಿ ಲಚ್ಚಿ ಪಾತ್ರದಲ್ಲಿ ನಟಿಸಲಿದ್ದಾರೆ. ಅದ್ಭುತ ನಟಿಯಾಗಿರುವಚೈತ್ರಾಪಾತ್ರ ಎಂತದ್ದಿರಬಹುದು ಎನ್ನುವ ಕುತೂಹಲ ಈಗ ಹೆಚ್ಚಾಗಿದೆ.