ಚೂಡಿದಾರ ಹಾಕ್ಕೊಂಡು, ಎಣ್ಣೆ ಹಚ್ಕೊತ್ತಿದ್ದೆ... ಅದ್ಯಾವಾಗ ಬಿಕಿನಿ ಧರಿಸಿದ್ನೋ... ಕಣ್ಣೀರಾದ 'ಕೂಲ್'​ ನಟಿ ಸನಾ! ಮಿನಿ ಸ್ಕರ್ಟ್​, ಬಿಕಿನಿಯಿಂದಲೇ ಫೇಮಸ್​ ಆಗಿದ್ದ ಸನಾ ಖಾನ್​ ಈಗ ಎಲ್ಲವನ್ನೂ ಬಿಟ್ಟು ಸಂಸಾರ ನಡೆಸುತ್ತಿದ್ದಾರೆ. ಈಗ ತಾವು ಇಂಥ ಡ್ರೆಸ್​ ಧರಿಸುತ್ತಿದ್ದ ಬಗ್ಗೆ ನೋವಿನ ಮಾತುಗಳನ್ನಾಡಿದ್ದಾರೆ. ಅವರು ಹೇಳಿದ್ದೇನು? ಮಿನಿ ಸ್ಕರ್ಟ್​, ಬಿಕಿನಿ ಎಲ್ಲವನ್ನೂ ಬಿಟ್ಟು ಹಿಜಾಬ್​ ಧರಿಸಿ ಈಗ ಗಂಡ- ಮುದ್ದು ಕಂದನ ಜೊತೆ ಸುಂದರ ಸಂಸಾರ ನಡೆಸುತ್ತಿದ್ದಾರೆ ಕಿರುತೆರೆ ನಟಿ, ಬಿಗ್ ಬಾಸ್ ಖ್ಯಾತಿಯ ಹಾಗೂ ಕನ್ನಡದ ಕೂಲ್​ ಸಿನಿಮಾ ನಟಿ ಸನಾ ಖಾನ್. ಇವರು ಬಣ್ಣದ ಲೋಕ ತ್ಯಜಿಸಿ ನಾಲ್ಕು ವರ್ಷಗಳಾಗಿವೆ. ಹಲವು ವರ್ಷಗಳ ಸಿನಿಮಾ ನಂಟು ಹೊಂದಿದ್ದ ನಟಿ, ಗುಜರಾತ್‌ನ ಅಂಕಲೇಶ್ವರದ ಮುಫ್ತಿ ಅನಾಸ್ ಸೈಯದ್ ( )ಅವರನ್ನು ವಿವಾಹವಾದರು. ವಿವಾಹದ ನಿರ್ಧಾರದ ಮಾಡುತ್ತಲೇ ಸಿನಿಮಾರಂಗ ತೊರೆಯುವ ಸಂದರ್ಭ ಬಂದಿತ್ತು. ಆಗ ನಟಿ ತುಂಬಾ ದುಃಖಿತರಾಗಿದ್ದರು. ಅಕ್ಷರಶಃ ಕಣ್ಣೀರಿಟ್ಟಿದ್ದರು. ಸಮಾಜ ಸೇವೆ ಮಾಡಲು ಮತ್ತು ಸೃಷ್ಟಿಕರ್ತನ ಆದೇಶವನ್ನು ಅನುಸರಿಸುವ ಕಾರಣಕ್ಕೆ ಬಣ್ಣದ ಲೋಕ ತೆರೆಯಬೇಕಾಯಿತು ಎನ್ನುತ್ತಲೇ ಹೆಸರು, ಖ್ಯಾತಿ, ಹಣ ಬಿಟ್ಟು ಹಿಜಾಬ್ ಧರಿಸಲು ಪ್ರಾರಂಭಿಸಿದ್ದೇಕೆ ಎಂದು ಬಹಿರಂಗ ಪಡಿಸಿದ್ದರು. 'ನನ್ನ ಹಳೆಯ ಜೀವನದಲ್ಲಿ ಸಹಜವಾಗಿ ಎಲ್ಲವೂ ಇತ್ತು. ಹಣ, ಹೆಸರು, ಖ್ಯಾತಿ ಎಲ್ಲಾ ಇತ್ತು. ನಾನು ಏನು ಬೇಕಾದರೂ ಮತ್ತು ಎಲ್ಲವನ್ನೂ ಮಾಡಬಹುದಿತ್ತು. ಆದರೆ ಒಂದು ವಿಷಯ ಮಾತ್ರ ಕಳೆದು ಹೋಗಿತ್ತು ನನ್ನ ಹೃದಯದ ಶಾಂತಿ. ನಾನು ಎಲ್ಲವನ್ನೂ ಹೊಂದಿದ್ದೆ ಆದರೆ ಸಂತೋಷ ಇರಲಿಲ್ಲ, ಅದು ತುಂಬಾ ಕಠಿಣವಾಗಿತ್ತು ಮತ್ತು ಖಿನ್ನತೆಯ ದಿನಗಳು ಇತ್ತು. ನಾನು ದೇವರ ಸಂದೇಶವನ್ನು ದಿನಗಳು ಇದ್ದವು' ಎಂದು ನಟನೆ ಬಿಟ್ಟು ಹಿಜಾಬ್​ ಧರಿಸುವ ಕುರಿತು ಹೇಳಿಕೊಂಡಿದ್ದರು. ಆದರೆ ಸನಾ ಖಾನ್​ ಎಂದು ಗೂಗಲ್​ನಲ್ಲಿ ಸರ್ಚ್​ ಸಾಕು, ಆಕೆಯ ಬಿಕಿನಿ ಫೋಟೋಗಳ ಸುರಿಮಳೆಯೇ ಆಗುತ್ತದೆ. ಏಕೆಂದರೆ ಈ ರೀತಿಯ ಬಟ್ಟೆ ತೊಟ್ಟು ಹಲವು ಚಿತ್ರಗಳನ್ನು ಸನಾ ಖಾನ್​ ನಟಿಸಿದ್ದಾರೆ. ಆದರೆ ಈಗ ಅವರ ಗೆಟಪ್​ ಸಂಪೂರ್ಣ ಬದಲಾಗಿದೆ. ಮುಸ್ಲಿಂ ಸಂಪ್ರದಾಯವನ್ನು ಮನಸಾರೆ ಅಪ್ಪಿಕೊಂಡಿರೋ ನಟಿ ಅಲ್ಲಿಯ ಡ್ರೆಸ್​ಕೋಡ್​ ಅನ್ನೇ ಅನುಸರಿಸುತ್ತಿದ್ದಾರೆ. ಇದೀಗ ನಟಿ, ರುಬಿನಾ ದಿಲಾಕ್ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ತಮ್ಮ ಸಿನಿಮಾ ಪಯಣ ಮತ್ತು ಈಗಿನ ದಿನಗಳ ಬಗ್ಗೆ ಮಾತನಾಡಿದ್ದಾರೆ. ಅ ದರಲ್ಲಿ ಅವರು, ಸಿನಿಮಾ ಬಿಡಬೇಕು ಎಂದು ನಿರ್ಧಾರ ಮಾಡಿದ್ದು ಖಂಡಿತವಾಗಿಯೂ ನನ್ನ ಆಲೋಚನೆ. ಇದಕ್ಕೂ ನನ್ನ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಈಗ ಹಿಂದಿರುಗಿ ನೋಡಿದಾಗ, ತುಂಬಾ ಅಚ್ಚರಿಯಾಗುತ್ತದೆ. ಏಕೆಂದರೆ ನಾನು ಮೊದಲಿನಿಂದಲೂ ಸಂಪ್ರದಾಯಬದ್ಧ ಹುಡುಗಿ. ಸಲ್ವಾರ್-ಕಮೀಜ್ ಧರಿಸಿ ನನ್ನ ಕೂದಲಿಗೆ ಎಣ್ಣೆ ಹಚ್ಚಿಕೊಳ್ಳುತ್ತಿದ್ದೆ, ಹೀಗೆಯೇ ಕಾಲೇಜಿಗೂ ಹೋಗುತ್ತಿದ್ದೆ. ಆದರೆ ಅದ್ಯಾವಾಗ ನಾನು ಈ ಷಾರ್ಟ್ ಸ್ಕರ್ಟ್ ಮತ್ತು ಬ್ಯಾಕ್‌ಲೆಸ್, ಬಿಕಿನಿ ಹಂತ ತಲುಪಿದೆನೋ ಗೊತ್ತಾಗುತ್ತಲೇ ಇಲ್ಲ. ಈಗ ಅದನ್ನು ನೆನಪಿಸಿಕೊಂಡರೆ ತುಂಬಾ ನೋವಾಗುತ್ತದೆ ಎಂದು ಕಣ್ಣೀರಾಗಿದ್ದಾರೆ. ಬಿಕಿನಿ ಬಿಟ್ಟು ಇಸ್ಲಾಂ ಅಪ್ಪಿಕೊಂಡ ಕನ್ನಡದ 'ಕೂಲ್​' ನಟಿಯ ಮಗನ ಮುಖ ರಿವೀಲ್​: ಈಗ ಹೇಗಿದ್ದಾರೆ ಸನಾ? ಅಂದಹಾಗೆ ಸನಾ, ನವೆಂಬರ್ 20, 2020 ರಂದು ಮುಫ್ತಿ ಅನಾಸ್ ಸೈಯದ್ ಅವರನ್ನು ವಿವಾಹವಾದರು. ಇವರಿಬ್ಬರ ಮೊದಲ ಭೇಟಿ 2017ರಲ್ಲಿ ಮೆಕ್ಕಾದಲ್ಲಿ ನಡೆದಿತ್ತು. ಕಳೆದ ಜೂನ್​ನಲ್ಲಿ ಮಗುವಿನ ತಾಯಿ ಆಗಿದ್ದಾರೆ. ಈಚೆಗಷ್ಟೇ ಮಗುವಿನ ದರ್ಶನ ಮಾಡಿಸಿ ಅದನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದರು. ಅಂದಹಾಗೆ, ಅನಾಸ್ ಸೈಯದ್ ಸೌಂದರ್ಯವರ್ಧಕ, ಪರ್ಸನಲ್ ಕೇರ್ ಲೈನ್ ನ ಸಂಸ್ಥಾಪರಾಗಿದ್ದಾರೆ. ತಾವು ಸಿನಿಮಾ ಬಿಡುವ ಬಗ್ಗೆ ಈ ಹಿಂದೆ ಮಾತನಾಡಿದ್ದ ಅವರು, ಒಂದು ಪುಸ್ತಕದಲ್ಲಿ ಮೆಸೇಜ್ ಇತ್ತು... ’ ಎಂದು. ಈ ಸಲುಗಳು ನನ್ನ ಮನಸ್ಸಿ ಮುಟ್ಟಿತ್ತು. ಮರು ದಿನ ನಾನು ಎದ್ದು ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡೆ. ನಾನು ಮನೆಯಲ್ಲಿ ಬಹಳಷ್ಟು ಸ್ಕಾರ್ಫ್‌ಗಳನ್ನು ಹೊಂದಿದ್ದೆ. ಮೊದಲೇ ತಂದು ಇಟ್ಟಿದ್ದೆ. ಕ್ಯಾಪ್ ಒಳಗೆ ಧರಿಸಿ ಸ್ಕಾರ್ಫ್‌ ಧರಿಸಿ ಇನ್ನು ಮುಂದೆ ಇದನ್ನು ನಾನು ತೆಗೆಯುವುದಿಲ್ಲ ಎಂದು ತೀರ್ಮಾನ ಮಾಡಿದೆ' ಎಂದಿದ್ದರು. ಇನ್ನು ಸನಾ ಅವರ ಸಿನಿ ಪಯಣದ ಕುರಿತು ಹೇಳುವುದಾದರೆ, ಬಾಲಿವುಡ್ () ಸಿನಿಮಾಗಳ ಜೊತೆಗೆ ಸನಾ ಖಾನ್ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ. ವಿಶೇಷ ಎಂದರೆ ಕನ್ನಡದಲ್ಲಿಯೂ ಅಭಿನಯಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೂಲ್ () ಸಿನಿಮಾದಲ್ಲಿ ಸನಾ ನಟಿಸಿದ್ದಾರೆ. ಇಷ್ಟೆಲ್ಲಾ ಉತ್ತುಂಗದಲ್ಲಿ ಇರುವಾಗಲೇ ಸಿನಿಮಾ ಬಿಡುವ ನಿರ್ಧಾರ ಮಾಡಿದ್ದು, ಅವರ ಅಭಿಮಾನಿಗಳಿಗೆ ಶಾಕ್​ ಆಗಿತ್ತು. ಆದರೆ ದೃಢ ಸಂಕಲ್ಪದೊಂದಿಗೆ ನಟಿ ಬಣ್ಣದ ಬದುಕಿಗೆ ವಿದಾಯ ಹೇಳಿದ್ದರು. ಆಗ ಅವರು, ತಾವು ನಟನೆ ಬಿಡುವ ಬಗ್ಗೆ ಮಾತನಾಡಿದ್ದರು. ಅದರಲ್ಲಿ ಅವರು, 'ನನಗಿನ್ನು ನೆನಪಿದೆ 2019 ರಂಜಾನ್ ನಲ್ಲಿ ನಾನು ನನ್ನ ಕನಸಿನಲ್ಲಿ ಸಮಾಧಿಯನ್ನು ನೋಡುತ್ತಿದ್ದೆ. ನಾನು ಸುಡುವ, ಉರಿಯುತ್ತಿರುವ ಸಮಾಧಿಯನ್ನು ನೋಡುತ್ತಿದ್ದೆ, ನಾನು ಸಮಾಧಿಯಲ್ಲಿ ನನ್ನನ್ನೇ ನೋಡುತ್ತಿದ್ದೆ. ನಾನು ಖಾಲಿ ಸಮಾಧಿಯನ್ನು ನೋಡಿದೆ, ನಾನು ಅಲ್ಲಿ ನನ್ನನ್ನು ನೋಡಿದೆ. ನಾನು ಬದಲಾಗದಿದ್ದರೆ, ನನ್ನ ಅಂತ್ಯ ಇದೇ ಆಗಲಿದೆ ಎಂಬುದಕ್ಕೆ ದೇವರು ನನಗೆ ನೀಡುತ್ತಿರುವ ಸಂಕೇತವಾಗಿದೆ ಎಂದು ನಾನು ಭಾವಿಸಿದೆ. ಅದು ನನಗೆ ಸ್ವಲ್ಪ ಆತಂಕವನ್ನುಂಟುಮಾಡಿತು' ಎಂದು ಹೇಳಿದ್ದರು. ಯಶ್​ ಜೊತೆ ಏನೇನು ಮಾಡ್ಬೇಕೆಂಬ ಮನದಾಸೆ ತೆರೆದಿಟ್ಟ ಬೋಲ್ಡ್​ ನಟಿ ಚೈತ್ರಾ ಆಚಾರ್​