ವಿಂಟೇಜ್ ಲುಕ್ ನಲ್ಲಿ ಸ್ಯಾಂಡಲ್ ವುಡ್ ಬೋಲ್ಡ್ ಬ್ಯೂಟಿ… ಯಾರಿದು ಗೆಸ್ ಮಾಡಿ! ಪ್ರತಿ ಬಾರಿ ತಮ್ಮ ಹೊಸ ಲುಕ್ ಗಳಿಂದ ಸದ್ದು ಮಾಡುತ್ತಿರುವ ಸ್ಯಾಂಡಲ್ ವುಡ್ ಬ್ಯೂಟಿ ಚೈತ್ರಾ ಆಚಾರ್ ಇದೀಗ ವಿಂಟೇಜ್ ಲುಕ್ ನಲ್ಲಿ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ. ಪ್ರತಿ ಬಾರಿ ತಮ್ಮ ಹೊಸ ಲುಕ್ ಗಳಿಂದ ಸದ್ದು ಮಾಡುತ್ತಿರುವ ಸ್ಯಾಂಡಲ್ ವುಡ್ ಬ್ಯೂಟಿ ಚೈತ್ರಾ ಆಚಾರ್ ಇದೀಗ ವಿಂಟೇಜ್ ಲುಕ್ ನಲ್ಲಿ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಸ್ಯಾಂಡಲ್‌ವುಡ್ ಬೋಲ್ಡ್ ನಟಿ ( ) ಅಂದ್ರೆ ನೆನಪಾಗೋದು ಚೈತ್ರಾ ಆಚಾರ್ ( ). ಸಿನಿಮಾಗಳಲ್ಲಿ ವಿವಿಧ ರೀತಿಯ ಪಾತ್ರಗಳನ್ನು ಮಾಡುತ್ತಾ, ಅತ್ಯುತ್ತಮ ನಟಿ ಎನಿಸಿಕೊಂಡಿರುವ ನಟಿ ಚೈತ್ರ ಸಖತ್ ಬೋಲ್ಡ್ ಹುಡುಗಿ. ಸಿನಿಮಾಗಳಲ್ಲಿ ಗ್ರಾಮದ ಹುಡುಗಿ, ವೇಶ್ಯೇ ಎಲ್ಲಾ ಪಾತ್ರಕ್ಕೂ ನ್ಯಾಯ ಒದಗಿಸಿ ಅದ್ಭುತವಾಗಿ ನಟಿಸುವಚೈತ್ರಾರಿಯಲ್ ಲೈಫಲ್ಲಿ ಸಖತ್ ಸ್ಟೈಲ್. ಹರಳು ಹುರಿದಂತೆ ಮಾತನಾಡುವ ಚೈತ್ರಾ ಫ್ಯಾಷನ್ ಸೆನ್ಸ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ( ) ಆ್ಯಕ್ಟಿವ್ ಆಗಿರುವ ಚೈತ್ರಾ ಹೆಚ್ಚಾಗಿ ತಮ್ಮ ಮೈಮಾಟ ಪ್ರದರ್ಶಿಸುತ್ತಾ, ತುಂಬಾ ಬೋಲ್ಡ್ ಅವತಾರಗಳಲ್ಲಿ ಫೋಟೋ ಶೂಟ್ ಮಾಡಿಸುವ ಬೆಡಗಿ ಈ ಬಾರಿ ಕೊಂಚ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಹಳೇ ರೀತಿಯ ಹೇರ್ ಸ್ಟೈಲ್ () ಮಾಡಿ, ಕಿವಿಗೆ ದೊಡ್ಡದಾದ ಕಿವಿಯೋಲೆ ಧರಿಸಿ, ಕಪ್ಪು ಬಣ್ಣದ ಡ್ರೆಸ್ ಧರಿಸಿ, ಹಳೇ ಕಾರಲ್ಲಿ ಕುಳಿತು ಪೋಸ್ ನೀಡೋ ಮೂಲಕ, ವಿಂಟೇಲ್ ಲುಕ್ ನಲ್ಲಿ ( ) ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಫೋಟೋಗಳನ್ನು ನೋಡಿದ್ರೆ ಇವರು ನಿಜವಾಗ್ಲೂ ಚೈತ್ರಾ ಆಚಾರ್ ಆ? ಅಥವಾ ಹಳೆಯ ಬಾಲಿವುಡ್ ಹಿರೋಯಿನ್ ಇರಬಹುದೇನೋ ಎನಿಸುತಿದೆ. ವಿಂಟೇಜ್ ಲುಕ್ ಚೈತ್ರಾ ಆಚಾರ್ ಗೆ ತುಂಬಾ ಚೆನ್ನಾಗಿ ಸೂಟ್ ಆಗುತ್ತಿದೆ. ತಮ್ಮ ಫೋಟೋಗಳಿಗೆ ಕ್ಯಾಪ್ಶನ್ ಆಗಿ ಚೈತ್ರಾ ? ಎಂದು ಬರೆದುಕೊಂಡಿದ್ದಾರೆ. ಶಾಶ್ವತಿ ಚಂದ್ರಶೇಖರ್ ಸ್ಟೈಲ್ ಮಾಡಿದ್ದು, ಎಂಎನ್ ಆರ್ಟಿಸ್ಟ್ರಿಯವರ ಮೇಕಪ್ ನಲ್ಲಿ ಚೈತ್ರಾ ಲುಕ್ ಸಖತ್ತಾಗಿ ಕಾಣಿಸುತ್ತಿದೆ. ಇನ್ನು ಕರಿಯರ್ () ವಿಷ್ಯಕ್ಕೆ ಬರೋದಾದ್ರೆ ಚೈತ್ರಾ ಆಚಾರ್ ಸದ್ಯ ಮಲ್ಟಿ ಸ್ಟಾರ್ ಗಳು ನಟಿಸುತ್ತಿರುವಉತ್ತರಕಾಂಡಚಿತ್ರದಲ್ಲಿ ಲಚ್ಚಿ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನಟರಾಕ್ಷಸ ಧನಂಜಯ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ನಟಿಸುತ್ತಿದ್ದಾರೆ.