ತೊಡೆ ಕಾಣ್ಸಂಗ್ ಚಡ್ಡಿ ಹಾಕಂಡ್, ಎದೆ ಕಾಣ್ಸಂಗ್ ಡ್ರೆಸ್ ಹಾಕಂಡ್ ಪೋಸ್ ಕೊಟ್ರು ಸ್ಯಾಂಡಲ್‌‌ವುಡ್ ಸ್ಟೀಟಿ! ದಕ್ಷಿಣ ಭಾರತದ ಸಿನಿಮಾದಲ್ಲಿ ಮೈತುಂಬಾ ಬಟ್ಟೆ ತೊಟ್ಟು ಕೌಟುಂಬಿಕ ಸಿನಿಮಾಗಳಲ್ಲಿ ಕಾಣಿಸುತ್ತಿದ್ದ ರಾಧಿಕಾ ಕುಮಾರಸ್ವಾಮಿ, ಈಗ ಎದೆ ಹಾಗೂ ತೊಡೆ ಕಾಣಿಸುವಂತಹ ಬಟ್ಟೆ ತೊಟ್ಟು ಅಭಿಮಾನಿಗಳನ್ನು ಮತ್ತೇರಿಸುವಂತೆ ಮಾಡಿದ್ದಾರೆ. ರಾಧಿಕಾ ಅವರ ಉಡುಗೆಗಳನ್ನು ನೊಡಿ ಅಭಿಮಾನಿಗಳು ಇದೇನಾಯ್ತು ನಿಮಗೆ, ವಯಸ್ಸಾದಂತೆ ಎಕ್ಸ್‌ಪೋಸ್ ಜಾಸ್ತಿ ಮಾಡ್ತಿದ್ದೀರಿ. ಅಣ್ಣ-ತಂಗಿ ಸಿನಿಮಾ ಮಾಡಿದ್ದು ನೀವೇನಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ದಕ್ಷಿಣ ಭಾರತದ ಸಿನಿಮಾದಲ್ಲಿ ಮೈತುಂಬಾ ಬಟ್ಟೆ ತೊಟ್ಟು ಕೌಟುಂಬಿಕ ಸಿನಿಮಾಗಳಲ್ಲಿ ಕಾಣಿಸುತ್ತಿದ್ದ ರಾಧಿಕಾ ಕುಮಾರಸ್ವಾಮಿ, ಈಗ ಎದೆ ಹಾಗೂ ತೊಡೆ ಕಾಣಿಸುವಂತಹ ಬಟ್ಟೆ ತೊಟ್ಟು ಅಭಿಮಾನಿಗಳನ್ನು ಮತ್ತೇರಿಸುವಂತೆ ಮಾಡಿದ್ದಾರೆ. ರಾಧಿಕಾ ಅವರ ಉಡುಗೆಗಳನ್ನು ನೊಡಿ ಅಭಿಮಾನಿಗಳು ಇದೇನಾಯ್ತು ನಿಮಗೆ, ವಯಸ್ಸಾದಂತೆ ಎಕ್ಸ್‌ಪೋಸ್ ಜಾಸ್ತಿ ಮಾಡ್ತಿದ್ದೀರಿ. ಅಣ್ಣ-ತಂಗಿ ಸಿನಿಮಾ ಮಾಡಿದ್ದು ನೀವೇನಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ರಾಧಿಕಾ ಕುಮಾರಸ್ವಾಮಿ ಎಂದರೆ ಕುಟುಂಬ ಪ್ರಧಾನ ಸಿನಿಮಾಗಳಲ್ಲಿ ನಟಿಸಿ, ಮನೆ ಮಂದಿಯನ್ನು ಗೆದ್ದವರಾಗಿದ್ದಾರೆ. ಎಂದಿಗೂ ತಮ್ಮ ದೇಹದ ಮೈಮಾಟವನ್ನು ತೋರಿಸಿರಲಿಲ್ಲ. ಆದರೆ, ಈಗ ಮೈಮಾಟ ಪ್ರದರ್ಶನವೇ ಹೆಚ್ಚಾಗಿದೆ. ಅಣ್ಣ-ತಂಗಿ ಸಿನಿಮಾದಲ್ಲಿ ಶಿವರಾಜ್‌ ಕುಮಾರ್ ಅವರ ತಂಗಿಯಾಗಿ ಕಾಣಿಸಿಕೊಂಡ ರಾಧಿಕಾ ಇಡೀ ರಾಜ್ಯದ ಮನೆ ಮಗಳಾಗಿದ್ದಳು. ಜೊತೆಗೆ ತವರಿಗೆ ಬಾ ತಂಗಿ, ಮನೆ ಮಗಳು, ಅನಾಥರು, ಆಟೋ ಶಂಕರ್ ಸೇರಿದಂತೆ ಹಲವು ಸಿನಿಮಾದಲ್ಲಿ ನಟನೆ ಮಾಡಿದ್ದರೂ, ಎಲ್ಲಿಯೂ ಹಾಟ್‌ ಆಗಿ ಕಾಣಿಸಿಕೊಂಡಿರಲಿಲ್ಲ. ರಾಧಿಕಾ ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ಸಿನಿಮಾ ಕ್ಷೇತ್ರಗಳಿಂದ ಒಂದಷ್ಟು ವರ್ಷ ದೂರವೇ ಉಳಿದಿದ್ದರು. ಇದಾದ ನಂತರ ಪುನಃ ಸಿನಿಮಾ ಕ್ಷೇತ್ರದಲ್ಲಿ ಎರಡನೇ ಇನ್ನಿಂಗ್ಸ್‌ ಆರಂಭಿಸಿರುವ ರಾಧಿಕಾ ತಮ್ಮ ದೇಹದ ಮಾದಕತೆಯನ್ನು ಅಭಿಮಾನಿಗಳಿಗೆ ತೋರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫುಲ್ ಆಕ್ಟಿವ್ ಆಗಿರುವ ರಾಧಿಕಾ ಕುಮಾರಸ್ವಾಮಿ ಅವರು ತುಂಡುಡುಗೆಯನ್ನು ತೊಟ್ಟು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಿಂದಿ ಹಾಡಿಗೆ ರೀಲ್ಸ್‌ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ಎದೆಭಾಗ ಮತ್ತು ತೊಡೆ ಭಾಗವೂ ಕಾಣಿಸುತ್ತಿದೆ. ರಾಧಿಕಾ ಅವರ ಅವತಾರ ನೋಡಿದ ಅಭಿಮಾನಿಗಳು ತರಹೇವಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಕೆಲವರು ನೀವು ಈಗಲೂ ಬಾರ್ಬಿಡಾಲ್ ಎಂದು ಹೊಗಳಿದರೆ, ಇನ್ನು ಕೆಲವರು ಕೆಟ್ಟದಾಗಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಇನ್ನು ಕೆಲವರು ಅಕ್ಕಾ ಕುಮಾರಣ್ಣಂದು ಹಾರ್ಟ್‌ ಸ್ವಲ್ಪ ವೀಕ್ ಇದೆ. ಇದರ ಮೇಲೆ ನೀವೇ ಅರ್ಥ ಮಾಡಿಕೊಳ್ಳಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಕುಮಾರಣ್ಣ ಎಲ್ಲಿದ್ದೀಯಪ್ಪಾ ಎಂದು ಕೂಡ ಕಾಮೆಂಟ್ ಮಾಡಿ ಕಾಲೆಳೆದಿದ್ದಾರೆ. ಇನ್ನು ರಾಧಿಕಾ ಅವರು ಈ ರೀಲ್ಸ್‌ಗೆ ಅಜಾಗ್ರತಾ ಮತ್ತು ಟ್ರೆಂಡಿಂಗ್ ಹ್ಯಾಷ್‌ಟ್ಯಾಗ್ ಬಳಸಿದ್ದಾರೆ. ಅಜಾಗ್ರತಾ ಚಿತ್ರದ ಶೂಟಿಂಗ್ ಮಧ್ಯದಲ್ಲಿ ತೆಗೆದಿರುವ ವಿಡಿಯೋ ಇದಾಗಿದ್ದು, ಚಿತ್ರದಲ್ಲಿ ನಟಿಯ ಲುಕ್ ಹೇಗಿರಲಿದೆ ಎಂಬುದನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ವಿನಯಾ ಪ್ರಸಾದ್, ಸ್ಪರ್ಶ ಚಿತ್ರದ ರೇಖಾ, ಸುಚೇಂದ್ರ ಪ್ರಸಾದ್, ನಟ ದೇವರಾಜ್ ಸೇರಿದಂತೆ ಉತ್ತಮ ತಾರಾಗಣವಿದೆ. ಎಂ.ಶಶಿಧರ್ ನಿರ್ದೇಶನದ, ಮರಾಠಿ ಹಾಗೂ ಹಿಂದಿ ನಟ ಶ್ರೇಯಸ್ ತಲ್ಪಾಡೆ ನಟಿಸಿರುವ ಅಜಾಗ್ರತ ಸಿನಿಮಾ ಶೂಟಿಂಗ್‌ನಲ್ಲಿ ರಾಧಿಕಾ ಬ್ಯೂಸಿಯಾಗಿದ್ದಾರೆ. ಈ ಸಿನಿಮಾ ಕನ್ನಡ, ತೆಲುಗು, ತಮಿಳು, ತೆಲುಗು, ಮಲಯಾಳಂ, ಹಿಂದಿ, ಕೊಂಕಣಿ ಮತ್ತು ಮರಾಠಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.