ರೀಚಾ ಚಡ್ಡಾ ಪ್ರಗ್ನೆನ್ಸಿ ಫೋಟೋ ಶೂಟ್ ವೈರಲ್ : ಹೊಟ್ಟೆ ತೋರಿಸಿದ್ದಕ್ಕೆ ನೆಟ್ಟಿಗರ ಸಿಟ್ಟು ನಿನ್ನೆ ಹೆಣ್ಣು ಮಕ್ಕಳ ದಿನವನ್ನು ಬಹುತೇಕ ಬಾಲಿವುಡ್ ನಟಿಯರು, ಸೆಲೆಬ್ರಿಟಿಗಳು ಹಾಗೂ ಸಾಮಾನ್ಯ ಹೆಣ್ಣು ಮಕ್ಕಳ ಫೋಷಕರು ಹಾಗೂ ಮಕ್ಕಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಹಾಕುವ ಮೂಲಕ ಆಚರಿಸಿದರು. ಅದೇ ರೀತಿ ಬಾಲಿವುಡ್ ನಟಿ ರೀಚಾ ಚಡ್ಡಾ ಕೂಡ ತಮ್ಮ ಮೆಟರ್ನಿಟಿ ಫೋಟೋಗಳನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ನಿನ್ನೆ ಹೆಣ್ಣು ಮಕ್ಕಳ ದಿನವನ್ನು ಬಹುತೇಕ ಬಾಲಿವುಡ್ ನಟಿಯರು, ಸೆಲೆಬ್ರಿಟಿಗಳು ಹಾಗೂ ಸಾಮಾನ್ಯ ಹೆಣ್ಣು ಮಕ್ಕಳ ಫೋಷಕರು ಹಾಗೂ ಮಕ್ಕಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಹಾಕುವ ಮೂಲಕ ಆಚರಿಸಿದರು. ಅದೇ ರೀತಿ ಬಾಲಿವುಡ್ ನಟಿ ರೀಚಾ ಚಡ್ಡಾ ಕೂಡ ತಮ್ಮ ಮೆಟರ್ನಿಟಿ ಫೋಟೋಗಳನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ರೀಚಾ ಚಡ್ಡಾ ಹಾಗೂ ಅಲಿ ಫಜಲ್ ಅವರು ಕೂಡ ಬಾಲಿವುಡ್‌ನ ಹೊಸ ಪೋಷಕರಾಗಿದ್ದಾರೆ. ಜೂನ್ 16ರಂದು ದಂಪತಿ ಹೆಣ್ಣು ಮಗಳನ್ನು ಬರಮಾಡಿಕೊಂಡರು. ಫುಕ್ರೆ ಸಿನಿಮಾ ಸೆಟ್‌ನಲ್ಲಿ ಇವರಿಬ್ಬರು ಭೇಟಿಯಾಗಿದ್ದರು. ನಂತರ ಪ್ರೀತಿಯಲ್ಲಿ ಬಿದ್ದಿದ್ದ ಈ ಜೋಡಿ 2022ರ ಆಕ್ಟೋಬರ್‌ನಲ್ಲಿ ಮದುವೆಯಾಗಿದ್ದರು. ರೀಚಾ ಚಡ್ಡಾ ಕೊನೆಯದಾಗಿ ಹೀರಾಮಂಡಿ ವೆಬ್‌ಸಿರೀಸ್‌ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.