ಸ್ನಾನ ಸ್ಕಿಪ್​ ಮಾಡುವ ಸೀಕ್ರೇಟ್​ ಹೇಳಿದ ನಟಿ ತಮನ್ನಾ ಭಾಟಿಯಾ: ಏನಿದು ಮಿಲ್ಕಿ ಬ್ಯೂಟಿಯ ಸಂಡೇ ಗುಟ್ಟು? ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರಿಗೆ ಭಾನುವಾರ ಸ್ನಾನ ಮಾಡುವುದು ಎಂದರೆ ಆಗಲ್ವಂತೆ! ಈ ಕುರಿತು ನಟಿ ಹೇಳಿದ್ದೇನು? ಮಿಲ್ಕಿ ಬ್ಯೂಟಿ ( ) ಎಂದೇ ಫೇಮಸ್​ ಆಗಿರುವ ಬಾಲಿವುಡ್​ ನಟಿ ತಮನ್ನಾ ಭಾಟಿಯಾ, ತೆಲುಗು , ತಮಿಳು ಚಿತ್ರರಂಗದಲ್ಲಿಯೂ ಸಕತ್​ ಫೇಮಸ್​. 70 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿರುವ ಅವರು ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದವರು. ಎಂಟು ಫಿಲ್ಮ್‌ಫೇರ್ ಪ್ರಶಸ್ತಿಗಳ ದಕ್ಷಿಣ ನಾಮನಿರ್ದೇಶನಗಳನ್ನು ಪಡೆದ ಅಪರೂಪದ ನಟಿ ತಮನ್ನಾ. ವಿಶೇಷ ಏನೆಂದರೆ, ಇವರು ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗಾಗಿ 2010 ರಲ್ಲಿ ಕಲೈಮಾಮಣಿ ಮತ್ತು 2022 ರಲ್ಲಿ ಗೌರವ ಡಾಕ್ಟರೇಟ್ ಕೂಡ ಪಡೆದಿದ್ದಾರೆ. 34 ವರ್ಷಗಳ ಈ ಚೆಲುವೆ ಸಹಜವಾಗಿಯೇ ಚಿತ್ರರಂಗದಲ್ಲಿ ಸಕತ್​ ಬೇಡಿಕೆ ನಟಿಯಾಗಿದ್ದು, ಇವರ ಸಂಭಾವನೆ ಕೂಡ ಕೋಟಿಯನ್ನು ಮೀರುತ್ತದೆ. ಸದ್ಯ ವೆಬ್ ಸೀರಿಸ್‌ಗಳಲ್ಲಿ ತಮನ್ನಾ ( ) ಬ್ಯುಸಿಯಾಗಿದ್ದು, ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದಾರೆ. ಅದರಲ್ಲಿಯೂ ಲಸ್ಟ್ ಸ್ಟೋರಿ 2 ಮತ್ತು ಜೀ ಕರ್ದ ಸೀರಿಸ್‌ನಲ್ಲಿ ನಟಿಸಿದ್ದು ರಿಲೀಸ್‌ಗೆ ರೆಡಿಯಾಗಿವೆ. ಈ ಎರಡೂ ಚಿತ್ರಗಳಲ್ಲಿ ತಮನ್ನಾ ಹಿಂದೆಂದಿಗಿಂತಲೂ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ನಟಿಯ ಇಂಟರೆಸ್ಟಿಂಗ್​ ಮಾಹಿತಿಯೊಂದು ಹೊರಕ್ಕೆ ಬರುತ್ತಿದೆ. ಅಷ್ಟಕ್ಕೂ ಈ ವಿಷಯವನ್ನು ನಟಿ ಸೋಷಿಯಲ್​ ಮೀಡಿಯಾದಲ್ಲಿ ಖುದ್ದು ಬರೆದುಕೊಂಡಿದ್ದಾರೆ. ಅದೇನೆಂದರೆ ತಮಗೆ ಭಾನುವಾರ ರೆಸ್ಟ್​ ಎಂದರೆ ಸಂಪುರ್ಣ ರೆಸ್ಟ್​ ಬೇಕು. ಇದೇ ಕಾರಣಕ್ಕೆ, ತಾವು ಭಾನುವಾರ ಸ್ನಾನ ಕೂಡ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಫೋಟೋ ಮೂಲಕ ತಮಾಷೆಯಾಗಿ ಪೋಸ್ಟ್​ ಮಾಡಿದ್ದಾರೆ. ಒಂದು ವಿಡಿಯೋ ಶೇರ್​ ಮಾಡಿರುವ ನಟಿ, ಅದರಲ್ಲಿ ತಾಯಿಯನ್ನು ಅಪ್ಪಿಕೊಂಡಿದ್ದಾರೆ. ಜೊತೆಗೆ ಅಳುಮೋರೆ ಹಾಕಿದ್ದಾರೆ. ಅದರಲ್ಲಿ ಅಮ್ಮನ ಬಳಿ ದುಃಖ ಹೇಳಿಕೊಳ್ಳುತ್ತಿದ್ದಾರೆ ನಟಿ. ಅವರಮ್ಮ ಹೋಗಿ ಸ್ನಾಮ ಮಾಡು ಎಂದು ಹೇಳಿದರೆ ನಟಿ, ಭಾನುವಾರದಂದು ಸ್ನಾನ ಮಾಡುವುದು ನನಗೆ ಇಷ್ಟವಿಲ್ಲ. ಆದರೆ ಮೇಕಪ್ ಕಲಾವಿದರು ದಿನಕ್ಕೆ ಮೂರು ಬಾರಿ ಸ್ನಾನ ಮಾಡಲು ಹೇಳುತ್ತಾರೆ. ಆದರೆ ಭಾನುವಾರ ರಜಾ ದಿನವಾಗಿರುವ ಕಾರಣ, ಯಾವುದೇ ಕೆಲಸ ಮಾಡುವುದಕ್ಕೂ ಇಷ್ಟವಿಲ್ಲ. ಸ್ನಾನ ಕೂಡ ಎಂದು ತಮಾಷೆ ಮಾಡಿದ್ದಾರೆ. ಇದಕ್ಕೆ ಥರಹೇವಾರಿ ಕಮೆಂಟ್​ಗಳ ಸುರಿಮಳೆಯಾಗಿದೆ. ಯುವಕನ ಕೈ ನೋಡಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಭಾವುಕ: ಆತನ ಅಭಿಮಾನಕ್ಕೆ ನಟಿಯ ಕಣ್ಣೀರು ಸದ್ಯ ನಟಿ ತಮನ್ನಾ ಅವರಿಗೆ ವೆಬ್​ ಸಿರೀಸ್​ಗಳಿಂದಲೂ ಆಫರ್​ಗಳು ಹೆಚ್ಚಾಗಿವೆ. ಇತ್ತೀಚೆಗೆ ‘ಅಮೇಜಾನ್​ ಪ್ರೈಂ ವಿಡಿಯೋ’ದಲ್ಲಿ ರಿಲೀಸ್​ ಆದ ‘ಜೀ ಕರ್ದಾ’ ವೆಬ್​ ಸಿರೀಸ್​ನಲ್ಲಿ ತಮನ್ನಾ ನಟಿಸಿದ್ದಾರೆ. ‘ಲಸ್ಟ್​ ಸ್ಟೋರೀಸ್​ 2’ ಚಿತ್ರದಲ್ಲೂ ಅವರೊಂದು ಪ್ರಮುಖ ಪಾತ್ರ ಮಾಡಿದ್ದು ನೆಟ್​ಫ್ಲಿಕ್ಸ್​ ಮೂಲಕ ಇದೇ 29ರಂದು ಅದು ಬಿಡುಗಡೆ ಆಗಲಿದೆ. ನಟಿ ಇತ್ತೀಚೆಗೆ ಸಕತ್​ ಸುದ್ದಿ ಮಾಡಿದ್ದು, ತಮನ್ನಾ ಮತ್ತು ನಟಿ ಅನುಷ್ಕಾ ಶರ್ಮಾ ಪತಿ, ಕ್ರಿಕೆಟಿಗ ವಿರಾಟ್​ ಕೊಹ್ಲಿ ಅವರ ಡೇಟಿಂಗ್​ ವದಂತಿ ಕುರಿತು. ವಿರಾಟ್ ಕೊಹ್ಲಿ ಜೊತೆಗೆ ತಮನ್ನಾ ಭಾಟಿಯಾ ಹೆಸರು ಕೂಡ ಕೇಳಿಬರುತ್ತಿದೆ. ಜಾಹೀರಾತೊಂದರ ಚಿತ್ರೀಕರಣದ ವೇಳೆ ವಿರಾಟ್ ( ) ಮತ್ತು ತಮನ್ನಾ ಭೇಟಿಯಾಗಿದ್ದರು. ಇದಾದ ನಂತರ ಇವರಿಬ್ಬರ ಅಫೇರ್ ಸುದ್ದಿಗೆ ವೇಗ ಸಿಕ್ಕಿತ್ತು. ಈ ಇಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅನುಷ್ಕಾ ಶರ್ಮಾ ( ) ಜೊತೆ ಮದುವೆಗೂ ಮುನ್ನ ವಿರಾಟ್ ಕೊಹ್ಲಿ ಹೆಸರು ಹಲವು ನಟರು ಮತ್ತು ಮಾಡೆಲ್‌ಗಳ ಜೊತೆ ಸೇರಿಕೊಂಡಿತ್ತು. ತಮನ್ನಾ ಭಾಟಿಯಾ ಹೊರತುಪಡಿಸಿ, ವಿರಾಟ್ ಕೊಹ್ಲಿಯ ಹೆಸರು ಬ್ರೆಜಿಲಿಯನ್ ಮಾಡೆಲ್ ಇಸಾಬೆಲ್ಲೆ ಲೈಟ್‌ನೊಂದಿಗೆ ಮುಖ್ಯಾಂಶಗಳಲ್ಲಿತ್ತು. ಕೊಹ್ಲಿ ಜೊತೆಗೆ ಕಾಲಿವುಡ್ ನಟಿ ಸಾಕ್ಷಿ ಅಗರ್ವಾಲ್ ಹೆಸರು ಕೂಡ ತಳುಕು ಹಾಕಿಕೊಂಡಿದೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು 11 ಡಿಸೆಂಬರ್ 2017 ರಂದು ಇಟಲಿಯಲ್ಲಿ ವಿವಾಹವಾದರು.ಜಯಾ ಬಚ್ಚನ್​@76: ಪತಿ ಅಮಿತಾಭ್ ಬಚ್ಚನ್​​-ರೇಖಾ ಸಂಬಂಧದ ಕುರಿತು ನಟಿ ಹೇಳಿದ್ದೇನು?