ಹಸಿಬಿಸಿ ದೃಶ್ಯಗಳ ಬಗ್ಗೆ ಹಾಗೆ ಹೇಳಿದ್ದ ಅನುಪಮಾ, ಈಗ ಹೀಗೆ ಹೇಳೋದಾ? ಮೊದಲ ಲಿಪ್​ಲಾಕ್​ ಅನುಭವವನ್ನೂ ಬಿಚ್ಚಿಟ್ಟ ನಟಿ ಕೋಟಿ ಕೊಟ್ಟರೂ ಹಸಿಬಿಸಿ ದೃಶ್ಯ ಮಾಡಲ್ಲ ಎಂದು ಹೇಳಿಕೆ ಕೊಟ್ಟಿದ್ದ ನಟಿ ಅನುಪಮಾ ಈಗ ಹೇಳ್ತಿರೋದೇನು? ಮೊದಲ ಬಾರಿಗೆ ಲಿಪ್​ಲಾಪ್​ ಅನುಭವ ಹೇಗಿತ್ತು? ಈಗೀಗ ಲಿಪ್​ಲಾಕ್​, ಅರೆನಗ್ನ, ಸಂಪೂರ್ಣ ನಗ್ನ ಹೀಗೆಲ್ಲಾ ಮಾಡದೇ ಇದ್ದರೆ ಚಿತ್ರಗಳು ಓಡುವುದೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಸ್ಥಿತಿ ಬಂದಿದ್ಯೋ ಗೊತ್ತಿಲ್ಲ. ಇದೇ ಕಾರಣಕ್ಕೆ ಬಾಲಿವುಡ್​ ತಾರೆಯರು ಮಾತ್ರವಲ್ಲದೇ, ಬಹುತೇಕ ಎಲ್ಲಾ 'ವುಡ್'​ ತಾರೆಯರೂ ಇದೀಗ ಇದಕ್ಕೆ ಮೊರೆ ಹೋಗಿದ್ದಾರೆ. ಅದರಲ್ಲಿಯೂ ಅನಿಮಲ್​ ಚಿತ್ರದಲ್ಲಿ ಸಂಪೂರ್ಣ ಬೆತ್ತಲಾಗುವ ಮೂಲಕ ರಾತ್ರೋ ರಾತ್ರಿ ನ್ಯಾಷನಲ್​ ಕ್ರಷ್​ ಎಂಬ ಬಿರುದಿನ ಜೊತೆಗೆ ಏಕಾಏಕಿ ಎಲ್ಲರ ಗಮನ ಸೆಳೆದು ನಟಿ ತೃಪ್ತಿ ಡಿಮ್ರಿ ಸೂಪರ್​ಹಿಟ್​ ಆದ ಮೇಲಂತೂ ಇದೀಗ ಇಂಥದ್ದೊಂದು ಟ್ರೆಂಡ್​ ಶುರುವಾಗುತ್ತಿದೆ. ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡರಷ್ಟೇ ತಮಗೆ ಸಿನಿಮಾದಲ್ಲಿ ನೆಲೆಯೂರಲು ಸಾಧ್ಯ ಎಂದು ನಟಿಯರು ಕಂಡುಕೊಂಡಂತಿದೆ. ಇದಕ್ಕೆ ಇನ್ನೊಂದು ಉದಾಹರಣೆ ಸೌತ್​ ಬ್ಯೂಟಿ ಅನುಪಮಾ ಪರಮೇಶ್ವರನ್. ಗುಂಗುರು ಕೂದಲಲ್ಲಿ ಈ ಸುಂದರಿ ಇದಾಗಲೇ ಕೆಲವೊಂದು ಚಿತ್ರಗಳಲ್ಲಿನಟಿಸಿದ್ದಾರೆ. ಆದರೆ ಅವರು ಬೋಲ್ಡ್​ ಅವತಾರದಲ್ಲಿ ಕಾಣಿಸಿಕೊಂಡಿರಲಿಲ್ಲ. ಕೋಟಿ ಕೊಟ್ಟರೂ ತಾವು ಇಂಥ ದೃಶ್ಯಗಳಲ್ಲಿ ನಟಿಸಲ್ಲ ಎಂದು ಕೆಲ ವರ್ಷಗಳ ಹಿಂದೆ ನಟಿ ಹೇಳಿದ್ದರು. ಇದಕ್ಕಾಗಿ ಸಿನಿ ಪ್ರಿಯರಿಂದ ಭೇಷ್​ ಭೇಷ್​ ಎನಿಸಿಕೊಂಡಿದ್ದರು. ಆದರೆ ಇದೀಗ ಸುದೀರ್ಘ ಲಿಪ್​ಲಾಕ್​ ಮಾಡುವ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಇಂಥದ್ದೊಂದು ದೃಶ್ಯದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಹೆಸರು ‘ಟಿಲ್ಲು ಸ್ಕ್ವೇರ್’. ಇದರಲ್ಲಿ ಕಾರಿನಲ್ಲಿ ನಟನ ಜೊತೆ ಲಿಪ್​ಲಾಕ್​ ಮಾಡಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. 30 ಲಕ್ಷ ಸಂಬಳ ಪಡೆದು ರಾಜ್​ಕುಂದ್ರಾರ ಬೆನ್ನಿಗೆ ಚೂರಿ ಹಾಕಿದ ಶೆರ್ಲಿನ್​! ಬ್ಲೂ ಫಿಲ್ಮ್​ ಕೇಸ್​ ಬಗ್ಗೆ ಗೆಹನಾ ಹೇಳಿದ್ದೇನು? ಆಗ ಹಾಗೆಲ್ಲಾ ಹೇಳಿದವರು ಈಗ ಈ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದೀರಲ್ಲಾ ಎಂದು ತಮ್ಮ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ಬರುತ್ತಿರುವುದಕ್ಕೆ ಬೇಸರದ ಜೊತೆ ಕಿಡಿ ಕಾರಿರುವ ನಟಿ, ಏನೋ ಅಪರಾಧ ಮಾಡಿದವರ ರೀತಿಯಲ್ಲಿ ಮಾತನಾಡುತ್ತೀರಲ್ಲ. ಲಿಪ್ ಲಾಕ್ ದೃಶ್ಯವನ್ನು ಮಾಡಿ ನಾನು ಅನ್ಯಾಯ ಮಾಡಿದ್ದೇನಾ? 18 ವರ್ಷದವಳಿದ್ದಾಗ ಚುಂಬನ ಮತ್ತು ದಪ್ಪ ದೃಶ್ಯಗಳ ಕಟ್ಟುನಿಟ್ಟಾದ ನೀತಿಯನ್ನು ಹೊಂದಿದ್ದೆ. ಆಗ ಆ ರೀತಿ ಹೇಳಿಕೆ ಕೊಟ್ಟಿದ್ದೆ ಅಷ್ಟೆ. ಆದರೆ ಈಗ ಪರಿಪೂರ್ಣ ನಟಿಯಾಗಿದ್ದೇನೆ. ಕಥೆಗೆ ಅಗತ್ಯವಿರುವ ದೃಶ್ಯಗಳನ್ನು ತೆಗೆದುಕೊಳ್ಳುವಷ್ಟು ಪ್ರಬುದ್ಧರಾಗಿರಬೇಕು ಮತ್ತು ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ನನಗೆ ಎನಿಸುತ್ತಿದೆ ಎಂದಿದ್ದಾರೆ! ಸ್ಟೀರಿಯೊಟೈಪಿಕಲ್ ಪಾತ್ರಗಳನ್ನು ಮಾಡಲು ಬೇಸರಗೊಂಡು ಈ ರೀತಿ ಮಾಡಿದ್ದೇನೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಮೊದಲ ಬಾರಿಗೆ ಲಿಪ್​ಲಾಕ್​ ಅನುಭವ ಹಂಚಿಕೊಂಡ ನಟಿ, ಕಾರಿನಲ್ಲಿ ತಮಗೆ ಲಿಪ್ ಲಾಕ್ ಮಾಡಲು ಕಷ್ಟವಾಯಿತು ಎಂದಿದ್ದಾರೆ. ನೂರಾರು ಜನರ ಎದುರು, ಅದೂ ಕಾರಿನಲ್ಲಿ ಅಂತಹ ದೃಶ್ಯ ಮಾಡುವಾಗ ಬೇರೆಯದ್ದೇ ಮನಸ್ಥಿತಿ ಬೇಕಾಗುತ್ತದೆ. ಹಾಗಾಗಿ ಆ ದೃಶ್ಯದಲ್ಲಿ ನಟಿಸುವಾಗ ನನಗೆ ತೀರಾ ಕಷ್ಟವಾಯಿತು. ಆದರೆ, ಅದು ಬೇರೆಯದ್ದೇ ರೀತಿಯ ಪಾತ್ರವಾಗಿದ್ದರಿಂದ ಮಾಡಿದೆ ಎಂದು ಅನುಪಮಾ ಮಾತನಾಡಿದ್ದಾರೆ.ಇನ್ನು ಟಿಲ್ಲು ಸ್ಕ್ವೇರ್‌ ಚಿತ್ರದ ಕುರಿತು ಹೇಳುವುದಾದರೆ ತೆಲುಗಿನಲ್ಲಿ ಡಿಜೆ ಟಿಲ್ಲು ಸಿನಿಮಾ ಸೂಪರ್‌ ಹಿಟ್‌ ಆಗಿತ್ತು. ಅದರ ಸೀಕ್ವೆಲ್​ ಈ ಚಿತ್ರ. ಇದರಲ್ಲಿ ಅನುಪಮಾ ಅವರ ಬೋಲ್ಡ್​ ಅವತಾರವನ್ನು ವೀಕ್ಷಕರು ಮೆಚ್ಚಿಕೊಳ್ಳಲಿದ್ದಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಅಷ್ಟಕ್ಕೂ ನಟಿ ಮಲಯಾಳಂ ಬಳಿಕ ತೆಲುಗಿಗೆ ಕಾಲಿಟ್ಟವರು. ತೆಲುಗು ಚಿತ್ರರಂಗದಲ್ಲಿ ಅವರಿಗೆ ಸಾಕಷ್ಟು ಅವಕಾಶ ಸಿಕ್ಕಿತು. ಟಾಲಿವುಡ್​ನಿಂದ ಕಾಲಿವುಡ್​ ಪ್ರವೇಶಿಸಿದ್ದ ನಟಿ, ಅಲ್ಲಿಂದ ಪುನೀತ್‌ ರಾಜ್‌ಕುಮಾರ್‌ ಜೊತೆ ನಟಸಾರ್ವಭೌಮದಲ್ಲಿಯೂ ನಟಿಸಿದರು. ಇನ್ನು ಟಿಲ್ಲು ಸ್ಕ್ವೇರ್‌ ಕುರಿತು ಹೇಳುವುದಾದರೆ, ಇದರಲ್ಲಿ ಸಿಧು ನಾಯಕನಾಗಿದ್ದಾರೆ. ಮಲ್ಲಿಕ್‌ ರಾಮ್‌ ನಿರ್ದೇಶನದ ಈ ಚಿತ್ರಕ್ಕೆ ಸಿತಾರಾ ಎಂಟರ್‌ಟೈನ್‌ಮೆಂಟ್‌ ಬಂಡವಾಳ ಹೂಡಿದೆ. ಸದ್ಯ ಬಿಡುಗಡೆ ಆಗಿರುವ ಈ ಚಿತ್ರದ ಟ್ರೇಲರ್‌ನಲ್ಲಿ ಲಿಪ್‌ಲಾಪ್‌ ದೃಶ್ಯಗಳಲ್ಲಿ ಅನುಪಮಾ ಮಿಂಚು ಹರಿಸಿದ್ದಾರೆ. ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳ ನಿರೀಕ್ಷೆ ಸುಳ್ಳಾಗೋಯ್ತು: ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ ರಜನಿ ಪುತ್ರಿ ಐಶ್ವರ್ಯಾ- ಧನುಷ್​?