ಪಿಂಕ್ ಲೆಹೆಂಗಾದಲ್ಲಿ ಸಖತ್ ಹಾಟ್ ಆಗಿ ಕಾಣಿಸ್ತಿದ್ದಾರೆ ಮಯೂರಿ ಕ್ಯಾತರಿ ಅಶ್ವಿನಿ ನಕ್ಷತ್ರ ಸೀರಿಯಲ್ ಮೂಲಕ ಕನ್ನಡಿಗರ ಮನೆಮಾತಾದ ನಟಿ ಮಯೂರಿ ಕ್ಯಾತರಿ ಒಂದು ಮಗುವಿನ ತಾಯಿಯಾದರೂ ಇಂದಿಗೂ ಸಖತ್ ಸ್ಟೈಲಿಶ್ ಆಗಿದ್ದಾರೆ. ಅಶ್ವಿನಿ ನಕ್ಷತ್ರ ಸೀರಿಯಲ್ ಮೂಲಕ ಕನ್ನಡಿಗರ ಮನೆಮಾತಾದ ನಟಿ ಮಯೂರಿ ಕ್ಯಾತರಿ ಒಂದು ಮಗುವಿನ ತಾಯಿಯಾದರೂ ಇಂದಿಗೂ ಸಖತ್ ಸ್ಟೈಲಿಶ್ ಆಗಿದ್ದಾರೆ. ಅದೆಷ್ಟೋ ನಟಿಯರು ತಮ್ಮ ಮೊದಲಿಗೆ ಸೀರಿಯಲ್ ಮೂಲಕವೇ ನಟನೆಗೆ ಎಂಟ್ರಿ ಕೊಟ್ಟು ನಂತರ ಸಿನಿಮಾದಲ್ಲಿ ಹೆಸರು ಮಾಡಿದ್ದಾರೆ, ಅಂತವರಲ್ಲಿ ಮಯೂರಿ ಕ್ಯಾತರಿ ( )ಕೂಡ ಒಬ್ಬರು. ನಟಿಸಿದ್ದು ಒಂದೇ ಸೀರಿಯಲ್ ಆದರೂ ಇಂದಿಗೂ ಅದೇ ಜೆಕೆ ಜೊತೆ ನಟಿಸಿದ ಅಶ್ವಿನಿ ನಕ್ಷತ್ರ ಸೀರಿಯಲ್ ಮೂಲಕ ಜನ ಅವರನ್ನು ನೆನಪಿಟ್ಟುಕೊಂಡಿದ್ದಾರೆ. ಸೀರಿಯಲ್ ಜಗತ್ತಿನ ಅತ್ಯಂತ ಜನಪ್ರಿಯ ಧಾರಾವಾಹಿ ಅಶ್ವಿನಿ ನಕ್ಷತ್ರದಲ್ಲಿ ( ) ಅಶ್ವಿನಿಯಾಗಿ ನಟಿಸುವ ಮೂಲಕ ಕನ್ನಡಿಗರ ಮನೆಮನದಲ್ಲೂ ನೆಲೆಸಿದ ನಟಿ ಮಯೂರಿ ಕ್ಯಾತರಿ. ಇವರು ತಮ್ಮ ಮುದ್ದು ಮುಖ, ಮುಗ್ಧ ಮಾತು, ಪ್ರಬುದ್ಧ ಅಭಿನಯದಿಂದಲೇ ಜನಮನ ಗೆದ್ದಿದ್ದರು. ಸೀರಿಯಲ್ ಬಳಿಕ ಸಿನಿಮಾರಂಗಕ್ಕೆ ಮುಖ ಮಾಡಿದಮಯೂರಿಕೃಷ್ಣ ಲೀಲಾ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಸ್ಯಾಂಡಲ್ ವುಡ್ ಗೆ ( )ಕಾಲಿಟ್ಟರು. ಕನ್ನಡದಲ್ಲಿ ಇವರು ಇಷ್ಟಕಾಮ್ಯ, ನಟರಾಜ ಸರ್ವೀಸ್, ಕರಿಯಾ 2 ಸೇರಿ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ. ಮಯೂರಿ 2020 ರಲ್ಲಿ ತಮ್ಮ ಬಹುದಿನಗಳ ಗೆಳೆಯ ಅರುಣ್ ರಾಜು ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 2022 ರಲ್ಲಿ ಒಂದು ಮಗುವಿನ ತಾಯಿಯಾದ ಬಳಿಕ ನಟನೆಯಿಂದ ದೂರವೇ ಉಳಿದಿದ್ದರು. ಅಶ್ವಿನಿ ಕೊನೆಯದಾಗಿ ವೀಲ್ ಚೇರ್ ರೋಮಿಯೋ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ( ) ಸಖತ್ ಆಕ್ಟೀವ್ ಆಗಿರುವ ಮಯೂರಿ, ಫೋಟೋ ಗಳನ್ನು ಶೇರ್ ಮಾಡುತ್ತಿರುತ್ತಾರೆ, ಜೊತೆಗೆ ತಮ್ಮ ಪ್ರವಾಸದ ಫೋಟೋಗಳು, ಸ್ನೇಹಿತರ ಜೊತೆಗಿನ ಫೋಟೋಗಳು, ವಿವಿಧ ಕಾರ್ಯಕ್ರಮಗಳ, ಮಾಡೆಲಿಂಗ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಮಯೂರಿ ಪಿಂಕ್ ಕಲರ್ ಲೆಹೆಂಗಾದಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ತುಂಬಾನೆ ಹಾಟ್ ಆಗಿ ಕಾಣಿಸುತ್ತಿದ್ದಾರೆ. ಮಯೂರಿ ಬೇಬಿ ಪಿಂಕ್ ಬಣ್ಣದ ಲೆಹೆಂಗಾ, ಮತ್ತು ಸ್ಲೀವ್ ಲೆಸ್ ಬ್ಲೌಸ್ ಧರಿಸಿದ್ದು, ಗ್ಲಾಮರಸ್ ಆಗಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಮೀಕು ಬಾಟಿ ಅವರ ಡಿಸೈನರ್ ಡ್ರೆಸ್ ಧರಿಸಿರುವ ಮಯೂರಿ ಅವರಿಗೆ ಮೇಕಪ್ ಆರ್ಟಿಸ್ಟ್ ನಂದನ್ ಅದ್ಭುತವಾಗಿ ಮೇಕಪ್ ಮಾಡಿದ್ದಾರೆ. ಒಂದು ಮಗುವಿನ ಅಮ್ಮನಾಗಿದ್ದರೂ, ಫಿಟ್ ಆಗಿರುವ ಮಯೂರಿ ಅವರ ದೇಹಸಿರಿ, ಸ್ಟೈಲ್ ಮತ್ತು ಫಿಟ್ನೆಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.