ಗುಲಾಬಿ ನೀಡಲು ಅಲ್ಲಿ ಗೌತಮ್​ ಪ್ರಾಕ್ಟೀಸ್​ ಮಾಡ್ತಿದ್ರೆ ಇಲ್ಲಿ ಇವರೊಟ್ಟಿಗೆ ರೊಮ್ಯಾನ್ಸ್​ ಮಾಡೋದಾ? ನಟಿಯ ಕಾಲೆಳೆದ ಫ್ಯಾನ್ಸ್​ ಅಮೃತಧಾರೆಯ ನಟಿ ಭೂಮಿಕಾ ಅರ್ಥಾತ್​ ಛಾಯಾ ಸಿಂಗ್​ ಹಾಗೂ ಅವರ ಪತಿ ಕೃಷ್ಣ ಜೊತೆಗಿನ ಕ್ಯೂಟ್​ ವಿಡಿಯೋ ವೈರಲ್​ ಆಗಿದ್ದು, ಫ್ಯಾನ್ಸ್​ ನಟಿಯ ಕಾಲೆಳೆಯುತ್ತಿದ್ದಾರೆ. ಸೀರಿಯಲ್​ಗಳು ಎಂದರೆ ಹಾಗೆನೇ. ಧಾರಾವಾಹಿಯಲ್ಲಿನ ನಾಯಕ-ನಾಯಕಿಯರೇ ನಿಜವಾದ ಜೊತೆಗಾರರು, ಅವರೇ ನಿಜವಾದ ಪತಿ-ಪತ್ನಿ ಎಂದುಕೊಳ್ಳುವವರೂ ಇದ್ದಾರೆ, ಇಲ್ಲದೇ ಹೋದರೆ, ನೀವಿಬ್ಬರೂ ನಿಜ ಜೀವನದಲ್ಲಿಯೂ ಯಾಕೆ ಮದ್ವೆಯಾಗಬಾರದು ಎಂದೂ ಪ್ರಶ್ನಿಸುತ್ತಾರೆ. ಅಷ್ಟರ ಮಟ್ಟಿಗೆ ಸೀರಿಯಲ್​ಗಳ ಪಾತ್ರಗಳು ಹೆಚ್ಚಿನ ಪ್ರೇಕ್ಷಕರನ್ನು ಹೊಕ್ಕಿ ಬಿಟ್ಟಿರುತ್ತದೆ. ಇಲ್ಲಿರುವುದು ಕೇವಲ ಪಾತ್ರಧಾರಿಗಳು ಎನ್ನುವುದನ್ನು ಮರೆತು, ನಿಜವಾದ ಜೀವನದಲ್ಲಿಯೇ ಘಟನೆಗಳು ನಡೆಯುತ್ತಿವೆಯೋ ಎನ್ನುವಷ್ಟರ ಮಟ್ಟಿಗೆ ಸೀರಿಯಲ್​ ಪಾತ್ರಗಳನ್ನು ತಮ್ಮ ಮೇಲೆಯೇ ಆಹ್ವಾನೆ ಮಾಡಿಕೊಳ್ಳುವವರೂ ಇದ್ದಾರೆ. ಅದರಲ್ಲಿ ಒಂದು ಅಮೃತಧಾರೆ ಸೀರಿಯಲ್​. ಇಲ್ಲಿನ ನಾಯಕಿ ಭೂಮಿಕಾ ಮತ್ತು ನಾಯಕ ಗೌತಮ್​ ನಡುವೆ ಈಗಷ್ಟೇ ಪ್ರೇಮಾಂಕುರವಾಗಿದೆ. ಇಬ್ಬರೂ ತಮ್ಮ ಪ್ರೀತಿಯನ್ನು ನೇರವಾಗಿ ಹೇಳಿಕೊಳ್ಳಲು ಪರದಾಡುತ್ತಿದ್ದಾರೆ. ಅದೆಷ್ಟೋ ಬಾರಿ ಭೂಮಿಕಾ ಪರೋಕ್ಷವಾಗಿ ಗೌತಮ್​ಗೆ ಪ್ರೀತಿಯ ವಿಷಯ ಹೇಳಿದರೂ ಪ್ರೀತಿ-ಪ್ರೇಮದ ವಿಷಯದಲ್ಲಿ ತುಂಬಾ ಹಿಂದೆ ಇರುವ ಗೌತಮ್​ಗೆ ಅವೆಲ್ಲಾ ಅರ್ಥವೇ ಆಗಿಲ್ಲ. ಇದೀಗ ಸ್ನೇಹಿತ ಆನಂದ್​ ಗೌತಮ್​ಗೆ ಟಿಪ್ಸ್​ ಕೊಡುತ್ತಿದ್ದಾನೆ. ಅವನು ಕೊಟ್ಟ ಟಿಪ್ಸ್​ ಫಾಲೋ ಮಾಡುವುದು ಗೌತಮ್​ ಕೆಲಸ. ಇದೀಗ ಗುಲಾಬಿ ಹೂವನ್ನು ಹಿಡಿದು ಗೌತಮ್​ ಡಬಲ್​ ಆ್ಯಕ್ಟಿಂಗ್​ ಶುರು ಮಾಡಿಕೊಂಡಿದ್ದಾನೆ. ಗುಲಾಬಿ ಹೂವನ್ನು ಭೂಮಿಕಾಕ್ಕೆ ಕೊಟ್ಟು ಐ ಲವ್​ ಯೂ ಅಂದರೆ ಅವಳ ರಿಯಾಕ್ಷನ್​ ಹೇಗಿರುತ್ತದೆ ಎಂದು ತಾನೇ ಕಲ್ಪನೆ ಮಾಡಿಕೊಂಡು ನಗುತ್ತಾ ನಾಚಿಕೊಳ್ಳುತ್ತಿದ್ದಾನೆ. ಅಷ್ಟಕ್ಕೂ ಇದು ರೀಲ್​ ಕಥೆಯಷ್ಟೇ. ರಿಯಲ್​ ಲೈಫ್​ನಲ್ಲಿ ಭೂಮಿಕಾ ಅರ್ಥಾತ್​ ಛಾಯಾ ಸಿಂಗ್​ ಹಾಗೂ ಗೌತಮ್​ ಅರ್ಥಾತ್​ ರಾಜೇಶ್​ ಇಬ್ಬರಿಗೂ ಮದುವೆಯಾಗಿದ್ದು, ತಮ್ಮ ರಿಯಲ್​ ಲೈಫ್​ಅನ್ನು ಎಂಜಾಯ್​ ಮಾಡುತ್ತಿದ್ದಾರೆ. ಭೂಮಿಕಾ ಅಂದರೆ ಛಾಯಾ ಸಿಂಗ್​ ಅವರ ವಿಷಯಕ್ಕೆ ಬರುವುದಾದರೆ, ಅವರು ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಇದ್ದಾರೆ. ಇದೀಗ ಅವರ ಫ್ಯಾನ್ಸ್​ ಪೇಜ್​ನಿಂದ ಛಾಯಾ ಸಿಂಗ್​ ಮತ್ತು ಅವರ ನಿಜ ಜೀವನದ ಪತಿ ಕೃಷ್ಣ ಅವರ ರೊಮ್ಯಾಂಟಿಕ್​ ವಿಡಿಯೋ ಒಂದನ್ನು ಶೇರ್​ ಮಾಡಿಕೊಂಡಿದೆ. ಇದರಲ್ಲಿ ಕೃಷ್ಣ ಅವರು ತಮ್ಮ ಪತ್ನಿ ಛಾಯಾ ಕುರಿತು ಮಾತನಾಡಿದ್ದಾರೆ, ಜೊತೆಗೆ ಗುಲಾಬಿ ಹೂವಿನ ಗುಚ್ಛ ನೀಡಿ ಮತ್ತೊಮ್ಮೆ ಪ್ರಪೋಸ್​ ಮಾಡಿದ್ದಾರೆ. ಇದರಿಂದ ಭಾವುಕರಾಗಿರುವ ಛಾಯಾ ಅವರು ಆನಂದ ಭಾಷ್ಪ ಹರಿಸಿದ್ದಾರೆ. ಜೊತೆಗೆ ಇಬ್ಬರೂ ಕೈ ಕೈ ಹಿಡಿದು ಡ್ಯಾನ್ಸ್​ ಮಾಡಿದ್ದಾರೆ. ಇನ್ನು ಈ ಜೋಡಿಯ ಕುರಿತು ಹೇಳುವುದಾದರೆ, ಕೃಷ್ಣ ಅವರ ಜೊತೆ ಛಾಯಾ ಅವರ ಮದುವೆಯಾಗಿ 11 ವರ್ಷಗಳು ಕಳೆದಿವೆ. ಇನ್​ಸ್ಟಾಗ್ರಾಮ್​ನಲ್ಲಿ ಅವರು ಪತಿಯ ಜೊತೆ ಆಗಾಗ ಫೋಟೋ ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಇಲ್ಲಿ ನಿಂತರೆ ಗೌತಮ್​, ಅಲ್ಲಿ ನಿಂತರೆ ಭೂಮಿಕಾ... ಡುಮ್ಮ ಸರ್​ ಡಬಲ್​ ಆ್ಯಕ್ಟಿಂಗ್​ಗೆ ಮನಸೋತ ವೀಕ್ಷಕರು (@chaya_singh_fp) ಅವರಿಗೆ ಕೃಷ್ಣ ಅವರ ಪರಿಚಯವಾದದ್ದು, ತಮಿಳು ಚಿತ್ರದಲ್ಲಿ ನಟಿಸುವ ಸಮಯದಲ್ಲಿ. ಕೃಷ್ಣ ಅವರೂ ಸಿನಿಮಾರಂಗದಲ್ಲೇ ಇದ್ದು, ತಮಿಳು ಕಿರುತೆರೆಯ ಜನಪ್ರಿಯ ನಟ. 2010ರಲ್ಲಿ ತಮಿಳು ನಟ ಕೃಷ್ಣರನ್ನು ಮೊದಲು ಭೇಟಿಯಾಗಿದ್ದರು. 'ಆನಂದಪುರತು ವೀಡ್' ( ) ಎಂಬ ಸಿನಿಮಾದ ವೇಳೆ ಭೇಟಿಯಾದ ಇವರು ಪರಸ್ಪರ ಇಷ್ಟಪಟ್ಟು ನಂತರ ಹಿರಿಯರ ಒಪ್ಪಿಸಿ, ಅವರ ಆಶೀರ್ವಾದ ಪಡೆದು 2012ರಲ್ಲಿ ಮದುವೆಯಾಗಿದ್ದಾರೆ. 2010ರಲ್ಲಿ ತೆರೆ ಕಂಡ ಈ ಚಿತ್ರ ಸೂಪರ್‌ನ್ಯಾಚುರಲ್ ಮಿಸ್ಟರಿ ಸಿನಿಮಾವಾಗಿದ್ದು, ಇವರಿಬ್ಬರೂ ನಟಿಸಿದ್ದಾರೆ. ನಿರ್ದೇಶಕ ಶಂಕರ್ ನಿರ್ಮಾಣದ ಈ ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆ ಹೆಚ್ಚು ಸಿಕ್ಕಿತ್ತು. ಈ ಸಿನಿಮಾದಲ್ಲಿ ಛಾಯಾ ಅವರು ನಾಯಕಿ ಪಾತ್ರ ಮಾಡಿದ್ದರೆ ಕೃಷ್ಣ () ಅವರು ನೆಗೆಟಿವ್ ಪಾತ್ರ ಮಾಡಿದ್ದರು. ಇನ್ನು ರನ್ ಎನ್ನುವ ಧಾರಾವಾಹಿಯಲ್ಲಿ ಕೃಷ್ಣ, ಛಾಯಾ ಸಿಂಗ್ ಒಟ್ಟಿಗೆ ನಟಿಸಿದ್ದರು. 2019ರಲ್ಲಿ ಈ ಧಾರಾವಾಹಿ ಪ್ರಸಾರ ಆಗಿ 197 ಎಪಿಸೋಡ್ ಪ್ರಸಾರ ಆಗಿತ್ತು. ಟಿಆರ್‌ಪಿ ಕಾರಣದಿಂದವೋ ಅಥವಾ ಇನ್ಯಾವುದೋ ಕಾರಣಕ್ಕೋ ಏನೋ ಈ ಸೀರಿಯಲ್ ಬಹುಬೇಗ ಅಂತ್ಯ ಆಗಿತ್ತು. ಇದೀಗ ಪತಿಯ ಜೊತೆಗಿನ ಈ ಕ್ಯೂಟ್​ ವಿಡಿಯೋ ನೋಡಿ ಅಭಿಮಾನಿಗಳು ಛಾಯಾ ಅವರ ಕಾಲೆಳೆಯುತ್ತಿದ್ದಾರೆ. ಅತ್ತ ಅಮೃತಧಾರೆಯಲ್ಲಿ ಗುಲಾಬಿ ಹೂವು ಹಿಡಿದು ಪ್ರೀತಿ ನಿವೇದನೆ ಮಾಡಿಕೊಳ್ಳಲು ನಿಮ್ಮ ಪತಿ ಗೌತಮ್​ ಕಾಯುತ್ತಿದ್ದರೆ, ಇಲ್ಲಿ ಇವರ ಜೊತೆ ರೊಮ್ಯಾನ್ಸ್​ ಮಾಡ್ತಾ ಇದ್ದೀರಾ? ಅವರ ಹೂವು ಪಡೆಯುವ ಬದಲು ಇವರು ಕೊಟ್ಟ ಹೂಗುಚ್ಛ ಪಡೀತಿದ್ದೀರಾ ಎಂದು ತಮಾಷೆಯ ಕಮೆಂಟ್​ ಹಾಕುತ್ತಿದ್ದಾರೆ. (@chaya_singh_fp)