ಶಾರ್ಕ್ ಟ್ಯಾಂಕ್ ಇಂಡಿಯಾ 3 ಜಡ್ಜ್ ಕ್ವಾಲಿಫಿಕೇಶನ್ ಏನು? ಭಾರತದ ಜನಪ್ರಿಯ ಸ್ಟಾರ್ಟ್ ಅಪ್ ಗಳಿಗೆ ಬೆಂಬಲ ನೀಡುವಂತಹ ಕಾರ್ಯಕ್ರಮವಾದ ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ಒಟ್ಟು 12 ಜನ ಜಡ್ಜ್ ಗಳಿದ್ದು, ಎಲ್ಲರೂ ಬೇರೆ ಬೇರೆ ಕಂಪನಿಗಳ ಸ್ಥಾಪಕರಾಗಿದ್ದಾರೆ. ಈ ತೀರ್ಪುಗಾರರ ವಿದ್ಯಾಭ್ಯಾಸದ ಬಗ್ಗೆ ತಿಳಿಯೋಣ. ಭಾರತದ ಜನಪ್ರಿಯ ಸ್ಟಾರ್ಟ್ ಅಪ್ ಗಳಿಗೆ ಬೆಂಬಲ ನೀಡುವಂತಹ ಕಾರ್ಯಕ್ರಮವಾದ ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ಒಟ್ಟು 12 ಜನ ಜಡ್ಜ್ ಗಳಿದ್ದು, ಎಲ್ಲರೂ ಬೇರೆ ಬೇರೆ ಕಂಪನಿಗಳ ಸ್ಥಾಪಕರಾಗಿದ್ದಾರೆ. ಈ ತೀರ್ಪುಗಾರರ ವಿದ್ಯಾಭ್ಯಾಸದ ಬಗ್ಗೆ ತಿಳಿಯೋಣ. ಅಮನ್ ಗುಪ್ತಾ ( )ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಅಮನ್ ಗುಪ್ತಾ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್‌ನಿಂದ ಫೈನಾನ್ಸ್ ಮತ್ತು ಸ್ಟ್ರಾಟಜಿಯಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಅಮೆರಿಕದ ಕೆಲ್ಲಾಗ್ ಗ್ರಾಜುಯೇಟ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಜನರಲ್ ಮ್ಯಾನೇಜ್ಮೆಂಟ್ ಮತ್ತು ಮಾರ್ಕೆಟಿಂಗ್‌ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಪಿಯುಷ್ ಬನ್ಸಾಲ್ ( )ಪಿಯುಶ್ ಬನ್ಸಾಲ್ ಮೆಕ್ಗಿಲ್ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದವರು. ಅವರು ಐಐಎಂ ಬೆಂಗಳೂರಿನಿಂದ ಎಂಟರ್ ಪ್ರಿನ್ಯುರ್ ಮತ್ತು ಫ್ಯಾಮಿಲಿ ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ಕೋರ್ಸ್ ಕೂಡ ಮಾಡಿದ್ದಾರೆ. ರಾಧಿಕಾ ಗುಪ್ತಾ ( )ರಾಧಿಕಾ ಗುಪ್ತಾ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ನಲ್ಲಿ ಬಿಎಸ್ಇ ಅಧ್ಯಯನ ಮಾಡಿದರು. ನಂತರ ಅವರು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪ್ರತಿಷ್ಠಿತ ವಾರ್ಟನ್ ಸ್ಕೂಲ್‌ನಿಂದ ಬಿಎಸ್ಸಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದ್ದಾರೆ. ವಿನೀತಾ ಸಿಂಗ್ ( )ಶುಗರ್ ಕಾಸ್ಮೆಟಿಕ್ಸ್ ಸಹ ಸಂಸ್ಥಾಪಕಿ ವಿನೀತಾ ಸಿಂಗ್ ಐಐಟಿ ಮದ್ರಾಸ್‌ನಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ . ಮತ್ತು ಐಐಎಂ ಅಹಮದಾಬಾದ್‌ನಿಂದ ಎಂಬಿಎ ಪದವಿ ಪಡೆದಿದ್ದಾರೆ. ನಮಿತಾ ಥಾಪರ್ ( )ನಮಿತಾ ಥಾಪರ್ ಕೂಡ ಚಾರ್ಟರ್ಡ್ ಅಕೌಂಟೆಂಟ್. ಅವರು ನಾರ್ತ್ ಕೆರೊಲಿನಾದ ಡರ್ಹಾಮ್ ವಿಶ್ವವಿದ್ಯಾಲಯದ ಫುಕ್ವಾ ಸ್ಕೂಲ್ ಆಫ್ ಬಿಸಿನೆಸ್‌ನಿಂದ ಎಂಬಿಎ ಮಾಡಿದರು. ಅನುಪಮ್ ಮಿತ್ತಲ್ ( ). ಸ್ಥಾಪಕ ಅನುಪಮ್ ಮಿತ್ತಲ್ ಮ್ಯಾಸಚೂಸೆಟ್ಸ್‌ನ ಬೋಸ್ಟನ್ ಕಾಲೇಜಿನಿಂದ ಆಪರೇಶನ್ ಮತ್ತು ಸ್ಟ್ರಾಟೆಜಿಕ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ರಿತೇಶ್ ಅಗರ್ವಾಲ್ ( )ಕಾಲೇಜಿನಿಂದ ಹೊರಬಂದ ನಂತರ, ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ಥೀಲ್ ಫೌಂಡೇಶನ್‌ನಿಂದ ಪ್ರತಿಷ್ಠಿತ ಫೆಲೋಶಿಪ್ ಪಡೆದರು, 100,000 ಡಾಲರ್ ಅನುದಾನವನ್ನು ಪಡೆದ ಮೊದಲ ಏಷ್ಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ದೀಪಿಂದರ್ ಗೋಯಲ್ ( )ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ಐಐಟಿ ದೆಹಲಿಯಿಂದ ಗಣಿತ ಮತ್ತು ಕಂಪ್ಯೂಟಿಂಗ್‌ನಲ್ಲಿ . ಪಡೆದಿದ್ದಾರೆ. ಅಮಿತ್ ಜೈನ್ ( )ಕಾರ್ ದೇಖೋ ಸಹ ಸಂಸ್ಥಾಪಕ ಮತ್ತು ಸಿಇಒ ಅಮಿತ್ ಜೈನ್ ಪ್ರತಿಷ್ಠಿತ ಐಐಟಿ ದೆಹಲಿಯಿಂದ . ಪದವಿ ಪಡೆದಿದ್ದಾರೆ. ರೋನಿ ಸ್ಕ್ರೂವಾಲಾ ( )ಅಪ್ ಗ್ರಾಡ್ ನ ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷ ರೋನಿ ಸ್ಕ್ರೂವಾಲಾ ಅವರು ಸಿಡೆನ್ ಹ್ಯಾಮ್ ಕಾಲೇಜ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್ ನಿಂದ . ಪದವಿ ಪಡೆದರು. ಅಜರ್ ಇಕ್ಬಾಲ್ ( )ಸುದ್ದಿ ಪ್ಲಾಟ್ಫಾರ್ಮ್ ಇನ್ ಶಾರ್ಟ್ ಸಹ ಸಂಸ್ಥಾಪಕ ಮತ್ತು ಸಿಇಒ ಅಜರ್ ಇಕ್ಬಾಲ್ ದೆಹಲಿಯ ಐಐಟಿ ಯಲ್ಲಿ ವ್ಯಾಸಂಗ ಮಾಡಿದ್ದು, ಅದನ್ನು ಅರ್ಧದಲ್ಲೇ ಬಿಟ್ಟಿದ್ದರು. ವರುಣ್ ದುವಾ ( )ಅಕೊ ಸ್ಥಾಪಕ ಮತ್ತು ಸಿಇಒ ವರುಣ್ ದುವಾ ಅವರು ಮುಂಬೈ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಪದವಿ ಪಡೆದರು ಮತ್ತು ಅಹಮದಾಬಾದ್ನ ಎಂಐಸಿಎಯಿಂದ ಸ್ನಾತಕೋತ್ತರ ಪದವಿ ಪಡೆದರು.