ಖ್ಯಾತ ನಟನನ್ನು ಮಂಚಕ್ಕೆ ಕರೆದ ನಿರ್ದೇಶಕ; ಹುಡುಗಿಯರ ಗತಿ ಏನು ಎಂದ ರಾಜೀವ್? ಹೆಣ್ಣುಮಕ್ಕಳ ರಕ್ಷಣೆ ಬಗ್ಗೆ ಧ್ವನಿ ಎತ್ತುವ ಜನರು ಯಾಕೆ ನಾಯಕರ ಕಾಸ್ಟಿಂಗ್ ಕೌಚ್‌ ಬಗ್ಗೆ ಏನೂ ಹೇಳುವುದಿಲ್ಲ ಎಂದಿದ್ದಾರೆ ರಾಜೀವ್.... ಹೆಣ್ಣುಮಕ್ಕಳ ರಕ್ಷಣೆ ಬಗ್ಗೆ ಧ್ವನಿ ಎತ್ತುವ ಜನರು ಯಾಕೆ ನಾಯಕರ ಕಾಸ್ಟಿಂಗ್ ಕೌಚ್‌ ಬಗ್ಗೆ ಏನೂ ಹೇಳುವುದಿಲ್ಲ ಎಂದಿದ್ದಾರೆ ರಾಜೀವ್.... ಗಾಯಕನಾಗಿ ಗುರುತಿಸಿಕೊಂಡಿರುವ ರಾಜೀವ್‌ರೊಂದಿಗೆ ನಿರ್ದೇಶಕನರಬೊಬ್ಬರು ಅಸಭ್ಯವಾಗಿ ವರ್ತಿಸಿ ಮಂಚಕ್ಕೆ ಕರೆದಿರುವ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. ಒಂದು ದಿನ ನಿರ್ದೇಶಕರೊಬ್ಬರು ರಾಜೀವ್‌ರನ್ನು ಮಂಚಕ್ಕೆ ಕರೆದಿದ್ದರಂತೆ ಅಲ್ಲದೆ ಅಸಭ್ಯವಾಗಿ ಮಾತನಾಡಿಸಿದ್ದಾರೆ. ಅವರಿಗೆ ಸರಿಯಾಗಿ ಬೈದು ರಾಜೀಬ್ ಹೊರ ಬಂದಿದ್ದಾರೆ. ಜೀವನದಲ್ಲಿ ಎಂದೂ ಅದನ್ನು ಮರೆಯುವುದಿಲ್ಲ ಬೈದು ಹೊರ ಬರುವಾಗ ಯಾವ ಹಿಂಜರಿಕೆ ಇರಲಿಲ್ಲ ತುಂಬಾ ಸಿಂಪಲ್ ಆಗಿ ಉತ್ತರ ಕೊಟ್ಟ ಹೊರ ಬಂದರಂತೆ. ಸಾರಿ ಬಾಸ್ ನೀವು ಹೇಳಿರುವ ಕೆಲಸವನ್ನು ನನಗೆ ಮಾಡಲು ಆಗಲ್ಲ ಎಂದು ಸರಳವಾಗಿ ಹೇಳಿ ರಾಜೀವ್ ಹೊಂದಿದ್ದಾರೆ. ಈ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳಿದ್ದರೆ ಹೇಗೆ ಅನ್ನೋ ಯೋಚನೆ ಮಾಡಿದ್ದಾರೆ. ಪುರುಷರು ಧೈರ್ಯದಿಂದ ಇದನ್ನು ಎದುರಿಸಬಹುದು ಆದರೆ ಮಹಿಳೆಯರಿಗೆ ಸಾಧ್ಯವಿಲ್ಲ. ಹಲವು ಹೆಣ್ಣುಮಕ್ಕಳು ಈ ರೀತಿ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಹೆಣ್ಣುಮಕ್ಕಳು ಎಲ್ಲಿಯೂ ಹೇಳಿಕೊಳ್ಳಲ್ಲ. ಹೆಣ್ಣುಮಕ್ಕಳ ರಕ್ಷಣೆ ಬಗ್ಗೆ ಮಾತನಾಡುವ ಜನರು ಎಂದೂ ಗಂಡು ಮಕ್ಕಳ ರಕ್ಷಣೆ ಬಗ್ಗೆ ಧ್ವನಿ ಎತ್ತುವುದಿಲ್ಲ.