ನೋಡ್ರಪ್ಪ!! ನಟಿ ಮಾಧುರಿ ದೀಕ್ಷಿತ್‌ ಕೂದಲು ಫಳ ಫಳ ಹೊಳೆಯಲು ಇದೇ ಎಣ್ಣೆ ಹಾಕೋದಂತೆ! ಕೊನೆಗೂ ಕೂದಲಿನ ಆರೋಗ್ಯದ ಸೀಕ್ರೆಟ್‌ ಬಿಚ್ಚಿಟ್ಟ ಮಾಧುರಿ ದೀಕ್ಷಿತ್. ಎಣ್ಣೆ ಮತ್ತು ಮಾಸ್ಕ್‌ ತಯಾರಿಸೋದು ಹೀಗೆ.... ಕೊನೆಗೂ ಕೂದಲಿನ ಆರೋಗ್ಯದ ಸೀಕ್ರೆಟ್‌ ಬಿಚ್ಚಿಟ್ಟ ಮಾಧುರಿ ದೀಕ್ಷಿತ್. ಎಣ್ಣೆ ಮತ್ತು ಮಾಸ್ಕ್‌ ತಯಾರಿಸೋದು ಹೀಗೆ.... ಪರ್ಫೆಕ್ಟ್‌ ಲೈಫ್‌ಸ್ಟೈಲ್ ಹಾಗೂ ಸಾಕಷ್ಟು ನೀರು ಸೇವಿಸುವುದರಿಂದ ಹೇಗೆ ನಮ್ಮ ಕೂದಲಿಗೆ ಪ್ರಯೋಜನಕಾರಿಯಾಗುತ್ತದೆ ಎಂದು ಮಾಧುರಿ ದೀಕ್ಷಿತ್ ರಿವೀಲ್ ಮಾಡಿದ್ದಾರೆ. 'ದಿನದಲ್ಲಿ ಸಾಕಷ್ಟು ನೀರು ಕುಡಿಯಿರಿ ( ) ಮತ್ತು ಆರೋಗ್ಯಕರ ಜೀವನಶೈಲಿಯನ್ನು ಹೊಂದಿರಿ, ಇದು ಆರೋಗ್ಯಕರ ಕೂದಲಿಗೆ ಬಹಳಷ್ಟು ಕೊಡುಗೆ ನೀಡುತ್ತದೆ' ಎಂದು ಹೇಳಿದ್ದಾರೆ. ಅರ್ಧ ಕಪ್ ತೆಂಗಿನ ಎಣ್ಣೆ ( ), 15-20 ಕರಿಬೇವಿನ ಎಲೆಗಳು, 1 ಟೀ ಚಮಚ ಮೆಂತ್ಯದ ಬೀಜಗಳು ಹಾಗೂ 1 ಸಣ್ಣ ತುರಿದ ಈರುಳ್ಳಿ ಇವುಗಳನ್ನು ಎಲ್ಲವನ್ನೂ ಮಿಕ್ಸ್​ ಮಾಡಿ ಸಣ್ಣ ಉರಿಯಲ್ಲಿ ಬೇಯಿಸಬೇಕು ಎಂದು ಎಣ್ಣೆ ಮಾಡುವ ವಿಧಾನ ರಿವೀಲ್ ಮಾಡಿದ್ದಾರೆ. ಕುದಿ ಬಂದ ನಂತರ ಅದನ್ನು ತಣ್ಣಗೆ ಮಾಡಲು ಇಡಬೇಕು. ಸಂಪೂರ್ಣವಾಗಿ ಆರಿದ ಮೇಲೆ ಒಂದು ಬಾಟಲಿಯಲ್ಲಿ ಇದನ್ನು ಶೋಧಿಸಿ ಇಟ್ಟುಕೊಳ್ಳಬೇಕು. 2 ದಿನಗಳವರೆಗೆ ಹಾಗೆಯೇ ಬಿಡಬೇಕು. ಎರಡು ದಿನಗಳ ನಂತರ ಅದನ್ನು ಉಪಯೋಗಿಸ ಬೇಕಂತೆ. ಮೂರು ದಿನಕ್ಕೊಮ್ಮೆ ಇಲ್ಲವೇ ಕೊನೆಯ ಪಕ್ಷ ವಾರಕ್ಕೆ ಒಮ್ಮೆಯಾದರೂ ರಾತ್ರಿ ಇದನ್ನು ಚೆನ್ನಾಗಿ ತಲೆಗೆ ಮಸಾಜ್​ ಮಾಡಿಕೊಂಡು ಮರುದಿನ ಬೆಳಗ್ಗೆ ತಲೆ ಸ್ನಾನ ಮಾಡಬೇಕಂತೆ. 1 ಕತ್ತರಿಸಿದ ಬಾಳೆಹಣ್ಣು, 2 ಚಮಚ ಕಪ್​ ಮೊಸರು, 2 ಚಮಚ ಸ್ವಲ್ಪ ಜೇನುತುಪ್ಪ. ಎಲ್ಲವನ್ನೂ ಮಿಕ್ಸ್ ಮಾಡಿಕೊಳ್ಳಬೇಕು. ಇದನ್ನು ತಲೆಸ್ನಾನ ಮಾಡುವ 30-40 ನಿಮಿಷಗಳ ಮೊದಲು ತಲೆಗೆ ಚೆನ್ನಾಗಿ ಅಪ್ಲೈ ಮಾಡಿಕೊಳ್ಳಬೇಕು. 30-40 ನಿಮಿಷಗಳ ಬಳಿಕ ನೀವು ಬಳಸುವ ಶ್ಯಾಂಪೂವನ್ನು ಹಾಕಿ ತಲೆಗೂದಲನ್ನು ತೊಳೆದುಕೊಳ್ಳಬೇಕು. ಇದಾದ ಮೇಲೆ ಕಂಡೀಷನರ್​ ಹಾಕದೇ ಇದ್ದರೆ ಒಳ್ಳೆಯದು. ಈ ಹೇರ್​ ಮಾಸ್ಕ್​ ಉಪಯೋಗಿಸುತ್ತಿದ್ದರೆ ಕೂದಲು ಸಾಫ್ಟ್​ ಆಗಿ ಹೊಳೆಯುತ್ತಲಿರುತ್ತದೆ. ಮಾಧುರಿ ದೀಕ್ಷಿತ್ ಕೊಡುವ ಟಿಪ್ಸ್‌ಗಳನ್ನು ಈಗಾಗಲೆ ಅನೇಕರು ಫಾಲೋ ಮಾಡಿದ್ದಾರೆ. ಸ್ಟಾರ್ ನಟಿಯರ ಜೀವನ ಎಷ್ಟು ಸಿಂಪಲ್ ಎಂದು ಮೆಚ್ಚಿಕೊಂಡಿದ್ದಾರೆ.