ಡಿವೋರ್ಸ್​ ಪಡೆದ ಬಳಿಕ ಮೊದಲ ಬಾರಿಗೆ ಒಟ್ಟಿಗೇ ಕಾಣಿಸಿಕೊಂಡ ಸಮಂತಾ- ನಾಗಚೈತನ್ಯ! ಏನಿದು ವಿಷ್ಯ? ಡಿವೋರ್ಸ್​ ಪಡೆದ ಬಳಿಕ ಮೊದಲ ಬಾರಿಗೆ ಒಟ್ಟಿಗೇ ಕಾಣಿಸಿಕೊಂಡಿದ್ದಾರೆ ಸಮಂತಾ ರುತ್​ ಪ್ರಭಯ ಮತ್ತು ನಾಗಚೈತನ್ಯ! ಏನಿದು ವಿಷ್ಯ? ಹಿಂದೊಮ್ಮೆ ಇದ್ದರೆ ಇಂಥ ಜೋಡಿ ಇರಬೇಕು ಎಂದು ಹೇಳಿದ್ದು ನಟ ನಾಗ ಚೈತನ್ಯ ( ) ಹಾಗೂ ಸಮಂತಾ ರುತ್​ ಪ್ರಭು ಸ್ಟಾರ್​ ಜೋಡಿಗಳ ಕುರಿತು. ಆದರೆ ಮದುವೆಯಾಗಿ ನಾಲ್ಕೇ ವರ್ಷಕ್ಕೆ ದಾಂಪತ್ಯ ಜೀವನ ಕೊನೆಗೊಳಿಸಿತು ಈ ಜೋಡಿ. 2020ರಲ್ಲಿ ಇಬ್ಬರೂ ವಿಚ್ಛೇದನ ಪಡೆದಿದ್ದು ಇದಾಗಲೇ ನಾಲ್ಕು ವರ್ಷಗಳಾಗುತ್ತಾ ಬಂದಿದೆ. ಆದರೆ ಇವರ ಡಿವೋರ್ಸ್​ ಸುದ್ದಿ ಮಾತ್ರ ಇಂದಿಗೂ ಸದ್ದು ಮಾಡುತ್ತಲೇ ಇದೆ. ಟಾಲಿವುಡ್ ಸ್ಟಾರ್ ನಾಗಚೈತನ್ಯ, ಸಮಂತಾ ಅವರಿಂದ ದೂರ ಆದ ಬಳಿಕ ಡೇಟಿಂಗ್ () ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಸಮಂತಾ ಅವರಿಂದ ವಿಚ್ಛೇದನ ಪಡೆದ ಬಳಿಕ ನಾಗ ಚೈತನ್ಯ ಮತ್ತೋರ್ವ ನಟಿ ಶೋಭಿತಾ ಜೊತೆ ಪ್ರೀತಿಯಲ್ಲಿ ಬಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ತಿಂಗಳಿಂದ ಹರಿದಾಡುತ್ತಿದೆ. ಇಬ್ಬರೂ ಆಗಾಗ ಪ್ರವಾಸ, ಔಟಿಂಗ್ ಅಂತ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ. ಒಂದೆರಡು ಬಾರಿ ಕ್ಯಾಮರಾ ಕಣ್ಣಿಗೂ ಸೆರೆಯಾಗಿದ್ದರು. ಇಬ್ಬರೂ ಲಂಡನ್ ಹೋಟೆಲ್‌ ಒಂದರಲ್ಲಿ ಸಿಕ್ಕಿ ಕೂಡ ಬಿದ್ದಿದ್ದರು. ಇದೇ ಕಾರಣಕ್ಕೆ ನಾಗಚೈತನ್ಯ ವಿಚ್ಛೇದನದ ಬಳಿಕ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಅದೇ ಇನ್ನೊಂದೆಡೆ, ಸಮಂತಾ ( ) ಕೆಲ ತಿಂಗಳ ಹಿಂದೆ ಮಾಜಿ ಪತಿ ನಾಗ ಚೈತನ್ಯ ಅವರ ಬಗ್ಗೆ ಮಾತನಾಡಿದ್ದರು. ಅವರಿಂದ ತಾವು ದೂರ ಆದ ಬಳಿಕ ಎದುರಿಸಿದ ಕಷ್ಟಗಳ ಬಗ್ಗೆ ಹೇಳಿಕೊಂಡಿದ್ದ ನಟಿ, ನನ್ನ ಜೀವನದಲ್ಲಿ ಏನನ್ನು ಬದಲಾಯಿಸಿಕೊಳ್ಳಲು ಬಯಸುವುದಿಲ್ಲ ಅಲ್ಲದೇ ತೊಂದರೆಗೆ ಸಿಲುಕಿಕೊಳ್ಳಲು ಬಯಸಲ್ಲ ಎಂದಿದ್ದರು. ನಾನು ಏನನ್ನೂ ಮರೆಯಲು ಬಯಸುವುದಿಲ್ಲ ಏಕೆಂದರೆ ಎಲ್ಲವೂ ನನಗೆ ಜೀವನದಲ್ಲಿ ಏನನ್ನಾದರೂ ಕಲಿಸಿದೆ, ಆದ್ದರಿಂದ ನಾನು ಮರೆಯಲು ಬಯಸುವುದಿಲ್ಲ ಎನ್ನುವ ಮೂಲಕ ನಾಗ ಚೈತನ್ಯ ಅವರ ಮೇಲೆ ಇನ್ನೂ ಇರುವ ಪ್ರೀತಿಯನ್ನು ತೋರಿಸಿದ್ದರು. ನಾನು ಸೆಕ್ಸಿಯಲ್ಲ, ಲೈಂಗಿಕತೆ, ಮಾದಕತೆಯಲ್ಲಿ ತುಂಬಾ ಹಿಂದೆ ಎನ್ನುತ್ತ ಮಹತ್ವದ ಘೋಷಣೆ ಮಾಡಿದ ಸಮಂತಾ! ಇಂತಿಪ್ಪ ಜೋಡಿ, ಇದೀಗ ಒಟ್ಟಾಗಿ ಕಾಣಿಸಿಕೊಂಡಿದೆ. ಅದೂ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜೋಡಿ ಒಟ್ಟಾಗಿ ವೇದಿಕೆಯ ಮೇಲೆ ಕಾಣಿಸಿಕೊಂಡಿದೆ. ಇವರಿಬ್ಬರೂ ಒಂದಾದರಾ ಎಂದು ಫ್ಯಾನ್ಸ್​ ಖುಷಿಪಟ್ಟಿದ್ದಾರೆ. ಆದರೆ ಅಸಲಿಗೆ ಇವರಿಬ್ಬರೂ ಒಟ್ಟಿಗೇ ಕಾಣಿಸಿಕೊಂಡಿದ್ದು, ಒಂದಾದ ಕಾರಣಕ್ಕೆ ಅಲ್ಲ. ಬದಲಿಗೆ, ಅಮೆಜಾನ್ ಪ್ರೈಮ್​ನಲ್ಲಿ ­­ಮುಂಬರುವ ಸೀರಿಸ್ ಹಾಗೂ ಸಿನಿಮಾಗಳ ಅನಾವರಣ ಮಾಡುವ ಸಂಬಂಧ ನಡೆದ ಕಾರ್ಯಕ್ರಮದ ಸಂದರ್ಭದಲ್ಲಿ ಅಮೆಜಾನ್ ಪ್ರೈಮ್​ ವಿಡಿಯೋ 2024 ಶೀರ್ಷಿಕೆಯಡಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬಾಲಿವುಡ್‌ನಿಂದ ಹಿಡಿದು ದಕ್ಷಿಣದ ತಾರೆಯರೂ ಭಾಗವಹಿಸಿದ್ದರು. ಅವರಲ್ಲಿ ಹೈಲೈಟ್​ ಆಗಿದ್ದು ಸಮಂತಾ ಮತ್ತು ನಾಗ ಚೈತನ್ಯ ಜೋಡಿ. ಅಮೆಜಾನ್ ಪ್ರೈಮ್ ದಿ ಫ್ಯಾಮಿಲಿ ಮ್ಯಾನ್ ಸೀರಿಸ್ ಮೂಲಕ ಸಮಂತಾ ಭಾರೀ ಜನಪ್ರಿಯತೆ ಪಡೆದಿದ್ದಾರೆ. ರಾಜ್ ಮತ್ತು ಡಿಕೆ ನಿರ್ದೇಶನದ ‘ಸಿಟಾಡೆಲ್-ಹನಿ ಬನಿ’ ಎಂಬ ಆ್ಯಕ್ಷನ್ ಸೀರಿಸ್ ಕೂಡ ಇದರಲ್ಲಿಯೇ ಬಿಡುಗಡೆ ಆಗಲಿದೆ. ಈ ಹಿನ್ನೆಲೆಯಲ್ಲಿ ಸಮಂತಾರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಇದೇ ಕಾರ್ಯಕ್ರಮಕ್ಕೆ ನಾಗ ಚೈತನ್ಯ ಅವರನ್ನೂ ಆಹ್ವಾನಿಸಲಾಗಿತ್ತು. ಇದಕ್ಕೆ ಕಾರಣ, ಇವರ ಇತ್ತೀಚಿನ ವೆಬ್ ಸರಣಿ ‘ಧೂತ್​’ನಿಂದಾಗಿ. ಇದೇ ಕಾರಣದ ಹಿನ್ನೆಲೆಯಲ್ಲಿ ಇಬ್ಬರೂ ಒಂದೇ ವೇಈಕೆ ಮೇಲೆ ಕಾಣಿಸಿಕೊಂಡರು. ಇದೇ ಕಾರಣಕ್ಕೆ ಸಹಜವಾಗಿ ಎಲ್ಲರ ಕಣ್ಣು ಈ ಜೋಡಿಯ ಮೇಲೆ ನೆಟ್ಟಿತ್ತು. ಆದರೆ ಈ ಜೋಡಿ ಮಾತ್ರ ಪರಸ್ಪರ ನೋಡಿಕೊಳ್ಳಲಿಲ್ಲ. ಒಂದೇ ವೇದಿಕೆಯ ಮೇಲೆ ಇದ್ದರೂ ಹತ್ತಿರ ಬರಲಿಲ್ಲ. ಇಬ್ಬರೂ ಮಾತು ಕೂಡ ಆಡಲಿಲ್ಲ. ಇವೆಲ್ಲವುಗಳ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸೌಂಡ್​ ಮಾಡುತ್ತಿದೆ. ಸದ್ಯ ಸಮಂತಾ ಮತ್ತು ನಾಗ ಚೈತನ್ಯ ಇಬ್ಬರೂ ಬೇರೆ ಬೇರೆ ಚಿತ್ರಗಳ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಮಯೋಸಿಟಿಸ್​ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ಸಿನಿಮಾ ಕೆಲಸಕ್ಕೆ ಬ್ರೇಕ್ ತೆಗೆದುಕೊಂಡ ಸ್ಯಾಮ್ ಮತ್ತೆ ಕೆಲಸ ಆರಂಭಿಸಿದ್ದಾರೆ. ಇಬ್ಬರೂ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ನಾಗ ಚೈತನ್ಯ ಸಾಯಿ ಪಲ್ಲವಿಯೊಂದಿಗೆ ತಮ್ಮ ಮುಂದಿನ ಚಿತ್ರ ‘ತಾಂಡೇಲ್’ಗೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಅಮೆರಿಕದಿಂದ ಅಯೋಧ್ಯೆಗೆ ಬಂದ ನಟಿ ಪ್ರಿಯಾಂಕಾ ಚೋಪ್ರಾ: ಪತಿ, ಮಗಳ ಜೊತೆ ವಿಶೇಷ ಪೂಜೆ