ಸ್ಟಾರ್ ನಟಿ ಸಿನಿಮಾ ನಟನೆಗೂ ಮೊದಲು ಯಾಕೆ ನೆಲದ ಮೇಲಿನ ವಾಂತಿ ಒರೆಸಿದ್ದರು, ಕಸ ಗುಡಿಸಿದ್ದರು? ತಾವು ಸಿನಿಮಾರಂಗದಲ್ಲಿ, ಅದರಲ್ಲೂ ಮುಖ್ಯವಾಗಿ ಬಾಲಿವುಡ್‌ನಲ್ಲಿ ಶುರುವಿನಲ್ಲಿ ಪಡೆದ ಅವಕಾಶಗಳ ಬಗ್ಗೆ ನಟಿ ರವೀನಾ ಟಂಡನ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. 'ಸಿನಿಮಾ ಉದ್ಯಮದ ಯಾವುದೇ ಹಿನ್ನೆಲೆಯಿಲ್ಲದ ನಾನು ಸಿನಿಮಾಕ್ಕೆ ಅವಕಾಶ ಪಡೆದಿದ್ದು ನನ್ನ.. ಸ್ಟಾರ್ ಆಗಿ ಮೆರೆದಿರುವ ಬಾಲಿವುಡ್ ನಟಿಯೊಬ್ಬರ ಜೀವನದಲ್ಲಿ ನಡೆದಿದ್ದ ಘಟನೆಯೊಂದು ಹಾಗೇ ಅನಾವರಣ ಆಗದೇ ಉಳಿದಿತ್ತು. ಆದರೆ, ಸತ್ಯ ಮುಚ್ಚಿಡಲು ಸಾಧ್ಯವಿಲ್ಲ ಅಂತಾರಲ್ಲ, ಹಾಗೇ ನಟಿಯ ಜೀವನಗಾಥೆ ಹೊರಜಗತ್ತಿಗೆ ಗೊತ್ತಾಗಿದೆ. 80-90ರ ದಶಕದಲ್ಲಿ ಫೇಮಸ್ ನಟಿಯಾಗಿದ್ದ ಆಕೆ, ಈಗಲೂ ಸಿನಿಮಾ ನಟನೆ ಮುಂದುವರೆಸಿದ್ದಾರೆ. ಅನಿಲ್ ತಡಾನಿ ( ) ಪತ್ನಿಯೂ ಆಗಿರುವ ಈ ನಟಿ, ಈಗಲೂ ಸಾಕಷ್ಟು ಸ್ಟಾರ್‌ಡಮ್ ಉಳಿಸಿಕೊಂಡಿರುವುದು ಅಚ್ಚರಿಯಾದರೂ ಸತ್ಯ. ಹಾಗಿದ್ದರೆ ಆ ನಟಿ ಯಾರಿರಬಹುದು ಎಂದು ನೀವು ಊಹಿಸಿರಬಹುದು. ಹೌದು, ಯಾವುದೇ ಸಿನಿಮಾ ಬ್ಯಾಕ್‌ಗ್ರೌಂಡ್‌ ಇಲ್ಲದೇ ಬಾಲಿವುಡ್ ಇಂಡಸ್ಟ್ರಿಯಲ್ಲಿ ಸ್ಟಾರ್ ನಟಿಯಾಗಿ ಮೆರೆದವರು 'ರವೀನಾ ಟಂಡನ್‌'. ನಟಿಯಾಗುವ ಕನಸನ್ನು ಕೂಡ ಕಾಣದೇ ಇದ್ದ ರವೀನಾ ಟಂಡನ್‌ ( ), ಹೊಟ್ಟೆಪಾಡಿಗಾಗಿ ಸ್ಟೂಡಿಯೋ ಒಂದರಲ್ಲಿ ಕಸ ಗುಡಿಸುವ, ನೆಲ ಒರೆಸುವ ಕೆಲಸ ಮಾಡುತ್ತಿದ್ದರು. ಅಲ್ಲಿ ಅದೆಷ್ಟೋ ವೇಳೆ ನೆಲದ ಮೇಲೆ ಬಿದ್ದಿದ್ದ ಗುರುತು ಪರಿಚಯವೂ ಇಲ್ಲದವರ ವಾಂತಿಯನ್ನು ಕೂಡ ಒರೆಸಿದ್ದಾರೆ ರವೀನಾ ಟಂಡನ್. ಕನ್ನಡ ಸಿನಿರಂಗದ ಒಗಟು ರೂಪದ 'ಮರ್ಯಾದೆ ಪ್ರಶ್ನೆ'ಗೆ ಎಂಥ ಉತ್ತರ ಸಿಕ್ತು ನೋಡಿ! ಹತ್ತು ವರ್ಷದವಳಾದಾಗಿನಿಂದ ಹೊಟ್ಟೆಪಾಡಿಗಾಗಿ ಈ ಕೆಲಸ ಮಾಡುತ್ತಿದ್ದ ರವೀನಾ, ಕಾಲಾನಂತರದಲ್ಲಿ ನಟಿಯಾಗಿ ಅವಕಾಶ ಗಿಟ್ಟಿಸಿಕೊಂಡು ಬೆಳೆದರು. ತಾವು ಸಿನಿಮಾರಂಗದಲ್ಲಿ, ಅದರಲ್ಲೂ ಮುಖ್ಯವಾಗಿ ಬಾಲಿವುಡ್‌ನಲ್ಲಿ ಶುರುವಿನಲ್ಲಿ ಪಡೆದ ಅವಕಾಶಗಳ ಬಗ್ಗೆ ನಟಿ ರವೀನಾ ಟಂಡನ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. 'ಸಿನಿಮಾ ಉದ್ಯಮದ ಯಾವುದೇ ಹಿನ್ನೆಲೆಯಿಲ್ಲದ ನಾನು ಸಿನಿಮಾಕ್ಕೆ ಅವಕಾಶ ಪಡೆದಿದ್ದು ನನ್ನ ಹಣೆಬರಹ ಅಥವಾ ಅದೃಷ್ಟದಿಂದ ಎನ್ನಬೇಕಷ್ಟೇ. ಬಾಹುಬಲಿ ಸಿನಿಮಾದ ಮಹಾ ಸೀಕ್ರೆಟ್ ಹೇಳಿಬಿಟ್ರು ರಾಣಾ ದಗ್ಗುಬಾಟಿ; ರಾಜಮೌಳಿ ಸುಮ್ಮನಿರ್ತಾರಾ? ನನಗೆ ಸಿನಿಮಾ ನಟಿಯಾಗುವ ಯಾವುದೇ ಆಸೆ, ಕನಸುಗಳಿರಲಿಲ್ಲ. ಆದರೆ ಸ್ಟೂಡಿಯೋ ಕೆಲಸ ಮಾಡುತ್ತಿದ್ದ ನನ್ನನ್ನು ನೋಡಿದವರೆಲ್ಲರೂ ನೀನು ಕ್ಯಾಮೆರಾ ಮುಂದೆ ಇರಬೇಕು. ಹೀಗೆ ತೆರೆಯ ಹಿಂದೆ ಇರುವುದು ನಿನ್ನ ಕೆಲಸವಲ್ಲ' ಎನ್ನುತ್ತಿದ್ದರು. ನಟಿ ರವೀನಾ ಟಂಡನ್ ಮೊದಲು ನಟಿಸಿದ ಸಿನಿಮಾ ಪತ್ಥರ್ ಕೆ ಪೂಲ್ ( ).ನಟ ಸಲ್ಮಾನ್ ಖಾನ್ ಮತ್ತು ರವೀನಾ ಟಂಡನ್‌ ಜೋಡಿಯ ಈ ಸಿನಿಮಾ ಕಮರ್ಷಿಯಲ್ ಹಿಟ್ ಆಗಿ ಭಾರೀ ಹೆಸರು ಮಾಡಿತು. ಪೋಷಕರಿಗೆ ಥ್ಯಾಂಕ್ಸ್ ಹೇಳಿದ ಪ್ರಿಯಾಂಕಾ ಚೋಪ್ರಾ ಭಾರತದ ಬಗ್ಗೆ ಹಾಗ್ಯಾಕೆ ಹೇಳಿದ್ರೋ ಏನೋ! ಒಂದೇ ರಾತ್ರಿಯಲ್ಲಿ ರವೀನಾ ಟಂಡನ್ ಸ್ಟಾರ್ ನಟಿಯಾಗಿಬಿಟ್ಟರು. ಆ ಬಳಿಕ ರವೀನಾ ಟಂಡನ್‌ ಅವರಿಗೆ ಸಾಲುಸಾಲು ಅವಕಾಶಗಳು ಹುಡುಕಿಕೊಂಡು ಬಂದವು. ಬಳಿಕ ಬಾಲಿವುಡ್‌ನಲ್ಲಿ ನಟಿ ರವೀನಾ ನಟಿಸಿದ ಸಿನಿಮಾಗಳು ಅವರೇಜ್ ಹಿಟ್ ಎನಿಸಿದವು. ಆದರೆ, ರವೀನಾ ನಟಿಸಿದ ತೆಲುಗು ಸಿನಿಮಾ 'ಬಂಗಾರು ಬುಲ್ಲೋಡು ( )'ಸೂಪರ್ ಹಿಟ್ ಆಗಿ ಅವರಿಗೆ ಸೌತ್ ಇಂಡಸ್ಟ್ರಿಯಲ್ಲಿ ಕೂಡ ಚಾನ್ಸ್ ಸಿಗತೊಡಗಿದವು. ಮೆಯೋಸಿಟಿಸ್ ಬಗ್ಗೆ ನಾನು ಬಹಿರಂಗವಾಗಿ ಹೇಳಿಕೊಳ್ಳುವ ಅನಿವಾರ್ಯತೆ ಇತ್ತು; ನಟಿ ಸಮಂತಾ ಕನ್ನಡದಲ್ಲಿ ಉಪೇಂದ್ರ ಜತೆ 'ಉಪೇಂದ್ರ' ಸಿನಿಮಾದಲ್ಲಿ ಕೂಡ ನಟಿ ರವೀನಾ ನಟಿಸಿದ್ದಾರೆ. ಮದುವೆ ಬಳಿಕ ಸಿನಿಮಾ ನಟನೆಯಿಂದ ಸ್ವಲ್ಪ ಕಾಲ ದೂರವಿದ್ದ ರವೀನಾ ಟಂಡನ್‌, 2021ರಲ್ಲಿ ಒಟಿಟಿಯಲ್ಲಿ ಬಂದ ವೆಬ್ ಸಿರೀಸ್ ಮೂಲಕ ಮತ್ತೆ ಬಣ್ಣ ಹಚ್ಚಿಕೊಂಡು ಕ್ಯಾಮೆರಾ ಮುಂದೆ ನಿಲ್ಲತೊಡಗಿದ್ದಾರೆ. ಕನ್ನಡದ ನಟ ರಾಕಿಂಗ್ ಸ್ಟಾರ್ ನಟನೆಯ 'ಕೆಜಿಎಫ್ 2' ಚಿತ್ರದಲ್ಲೂ ರವೀನಾ ಟಂಡನ್ ಮಿಂಚಿದ್ದಾರೆ. ಸದ್ಯ ಮತ್ತೊಂದು ವೆಬ್‌ ಸಿರೀಸ್‌ನಲ್ಲಿ ನಟಿಸುತ್ತಿದ್ದಾರೆ ರವೀನಾ ಟಂಡನ್‌. ಅಮ್ಮನ ವಿರುದ್ಧವೇ ಹೋಗಿದ್ದೇಕೆ ಪ್ರಭಾಸ್; ಅತಿರೇಕಕ್ಕೆ ಹೋಗುವುದು ನನಗಿಷ್ಟ ಅಂದ್ಬಿಟ್ರು ಯಾಕೋ!