ವಾಪಸ್​ ಬಂದಿರುವೆ, ಪ್ಲೀಸ್​ ಕೆಲ್ಸ ಕೊಡಿ: ಇಂಚಿಂಚು ದೇಹ ತೋರಿಸಿ ಹಲ್​ಚಲ್​ ಸೃಷ್ಟಿಸಿರೋ ನಟಿ ಪೂಜಾ ಮನವಿ ಒಂದು ಕಾಲದಲ್ಲಿ ಬಾಲಿವುಡ್​​ ಆಳಿದ ನಟಿ ಪೂಜಾ ಭಾತ್ರಾ ಉದ್ಯಮ ತೊರೆದ ಬಳಿಕ ವಾಪಸಾಗಿದ್ದಾರೆ. ತಮಗೆ ಯಾರೂ ಕೆಲಸವೇ ಕೊಡುತ್ತಿಲ್ಲ ಎಂದು ಗೋಳು ತೋಡಿಕೊಂಡಿದ್ದಾರೆ. ಈಗೀಗ ಚಿತ್ರತಾರೆಯರು ಅದರಲ್ಲಿಯೂ ಬಾಲಿವುಡ್​ () ಬೆಡಗಿಯರು ತಮ್ಮ ಅಂಗಾಂಗ ಪ್ರದರ್ಶನ ಮಾಡಲು ಯಾವುದೇ ಮುಜುಗರ ಪಟ್ಟುಕೊಳ್ಳುತ್ತಿಲ್ಲ ಎನ್ನುವುದು ತಿಳಿದಿರುವ ವಿಷಯವೇ. ಪೈಪೋಟಿಗೆ ಬಿದ್ದವರಂತೆ ನಟಿಯರು ಅಂಗ ಪ್ರದರ್ಶನ ಮಾಡಿಕೊಂಡು ಫೋಟೋಶೂಟ್​, ವಿಡಿಯೋಶೂಟ್​ ಮಾಡಿಸಿಕೊಳ್ಳುತ್ತಿದ್ದಾರೆ. ಅನಿಮಲ್​ ಚಿತ್ರದಲ್ಲಿ ನಟಿ ತೃಪ್ತಿ ಡಿಮ್ರಿ ಸಂಪೂರ್ಣ ಬೆತ್ತಲಾದ ಮೇಲಂತೂ ನಟಿಯರ ಬಗ್ಗೆ ಮಾತನಾಡುವುದೇ ಬೇಡ ಎನ್ನುತ್ತಿದ್ದಾರೆ ಹಲವರು. ನಟಿ ಪೂಜಾ ಭಾತ್ರಾ ( ) ಕೂಡ ಇದೇ ಸಾಲಿಗೆ ಸೇರಿದವರು. ಭಾರತೀಯ ಅಮೆರಿಕನ್​ ನಟಿ ಮತ್ತು ರೂಪದರ್ಶಿಯಾಗಿರುವ ಪೂಜಾ ಕೆಲ ಹಿಂದಿ ಚಲನಚಿತ್ರಗಳಲ್ಲಿ ನಟಿಸಿದವರು. ಸದ್ಯ ಇವುಗಳಿಂದ ದೂರವಿದ್ದರೂ ಮಾಡೆಲಿಂಗ್​ನಲ್ಲಿ ಮಿಂಚುತ್ತಿದ್ದಾರೆ. 1993 ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ರನ್ನರ್ ಅಪ್ ಆದ ಮೇಲೆ ಹೆಚ್ಚು ಪ್ರಚಾರ ಗಿಟ್ಟಿಸಿಕೊಂಡಿರೋ ಈ ಬೆಡಗಿಗೆ ಈಗ ವಯಸ್ಸು 48. ಇಷ್ಟು ವಯಸ್ಸಿನಲ್ಲಿ ಸಾಮಾನ್ಯವಾಗಿ ಮಹಿಳೆಯರು ಎಲ್ಲಾ ಮುಗಿದು ಹೋಯ್ತು ಅಂದುಕೊಳ್ಳುವುದೇ ಹೆಚ್ಚು. ಆದರೆ ಪೂಜಾ ಮಾತ್ರ ಇತ್ತೀಚಿನ ನಟಿಯರನ್ನೂ ಹಿಂದಕ್ಕೆ ಸರಿಸಿ, ಅವರೂ ನಾಚುವಂತೆ ಆಗಾಗ್ಗೆ ಫೋಟೋಶೂಟ್​ ಮಾಡಿಸಿಕೊಳ್ಳುತ್ತಲೇ ಇರುತ್ತಾರೆ. ಕೆಲ ತಿಂಗಳ ಹಿಂದೆ ಮಾಡಿಸಿಕೊಂಡಿರುವ ಫೋಟೋಶೂಟ್​ () ನೋಡಿ ಮಡಿವಂತರು ಅಕ್ಷರಶಃ ಕಣ್ಣುಮುಚ್ಚಿಕೊಂಡಿದ್ದರು. ನಟಿಯರು ತಮ್ಮ ಅಂಗಾಗ ಪ್ರದರ್ಶನ ಮಾಡುವಾಗ ಸ್ವಲ್ಪ ಮಾನ ಮರ್ಯಾದೆ ಮುಚ್ಚಿಕೊಳ್ಳುತ್ತಾರೆ. ಆದರೆ ಪೂಜಾ ಹಾಗೆಮಾಡಲಿಲ್ಲ. ತಮ್ಮ ಇಂಚಿಂಚು ದೇಹವನ್ನೂ ಪಾರದರ್ಶಕ ಉಡುಪಿನಲ್ಲಿ ತೋರಿಸಿದ್ದರು. ತಮ್ಮ ಡ್ರೆಸ್​ ಸೆನ್ಸ್​ನಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಸೆನ್​ಸೇಷನಲ್​ ಸೃಷ್ಟಿಸಿರೋ ಉರ್ಫಿ ಜಾವೇದ್​ ಅವರನ್ನೂ ಎಲ್ಲಾ ರೀತಿಯಲ್ಲಿ ಮೀರಿ ಪೂಜಾ ಫೋಟೋಶೂಟ್​ ಮಾಡಿಸಿಕೊಂಡಿದ್ದರು. ಆಗಾಗ್ಗೆ ಬೋಲ್ಡ್​ ಡ್ರೆಸ್​ನಿಂದ ಪೂಜಾ ಭಾರಿ ಸುದ್ದಿಯಾಗುತ್ತಲೇ ಇರುತ್ತಾರೆಯಾದರೂ ಈಗಿನ ಚಿತ್ರದಿಂದ ಸೋಶಿಯಲ್‌ ಮೀಡಿಯಾದಲ್ಲಿ ಕಿಡಿ ಹಚ್ಚಿದ್ದರು. ಡಿವೋರ್ಸ್​ ಬಳಿಕ ನಿಹಾರಿಕಾಗೆ ಶುರುವಾಗಿದೆ ಮಕ್ಕಳ ಬಯಕೆ: ಮರುಮದ್ವೆ ಕುರಿತು ನಟಿ ಹೇಳಿದ್ದೇನು? ನಟಿ ಹಲವಾರು ಬಾಲಿವುಡ್​ ಸಿನಿಮಾಗಳಲ್ಲಿ ಕಾಣಿಸಿಕೊಂಡರೂ ಇದ್ದಕ್ಕಿದ್ದಂತೆ ಬಾಲಿವುಡ್​ನಲ್ಲಿ ಅವರ ವೃತ್ತಿಜೀವನವು ಕುಸಿಯಿತು. ಚಂದ್ರಲೇಖಾ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗ ಸೇರಿದರು. ತನ್ನ ಕೆರಿಯರ್​ನ ಉತ್ತುಂಗದಲ್ಲಿದ್ದಾಗ ಅವರು ಮದುವೆಯಾಗಲು ನಿರ್ಧರಿಸಿದರು. ಸುಮಾರು 30 ಚಿತ್ರಗಳನ್ನು ಮಾಡಿದ ನಂತರ, ಪೂಜಾ 2002 ರಲ್ಲಿ ಅಮೇರಿಕಾದಲ್ಲಿ ವಾಸಿಸುವ ಡಾ. ಸೋನು ಅಹ್ಲುವಾಲಿಯಾ ಅವರನ್ನು ವಿವಾಹವಾಗಿ ಅಮೆರಿಕಕ್ಕೆ ಹೋದರು. 9 ವರ್ಷಗಳ ಮದುವೆಯ ನಂತರ ದಂಪತಿ 2011 ರಲ್ಲಿ ವಿಚ್ಛೇದನ ಪಡೆದುಕೊಂಡರು. ಇದಾದ ಬಳಿಕ 2019 ಜುಲೈನಲ್ಲಿ ನಟ ನವಾಬ್ ಷಾ ಅವರನ್ನು ವಿವಾಹವಾದರು. ನವಾಬ್ ಮತ್ತು ನಾನು ದೆಹಲಿಯಲ್ಲಿ ಪ್ರತಿಜ್ಞೆ ವಿನಿಮಯ ಮಾಡಿಕೊಂಡೆವು, ನಮ್ಮ ಕುಟುಂಬಗಳು ಮಾತ್ರ ಹಾಜರಿದ್ದರು. ನಮ್ಮಮನಸ್ಸು ಒಂದಾದ ಮೇಲೆ ವಿಳಂಬ ಮಾಡುವುದು ಸರಿಯಲ್ಲ ಎಂದು ಸರಳವಾಗಿ ವಿವಾಹವಾಗಿದ್ದೇವೆ ಎಂದು ನಟಿ ಹೇಳಿದ್ದರು. ಇದೀಗ ನಟಿ ಭಾರತಕ್ಕೆ ಮರಳಿ ಮತ್ತೆ ಬಣ್ಣ ಹಚ್ಚುವ ಆಸೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ತಮಗೆ ಇದೀಗ ಯಾರೂ ಕೆಲಸವೇ ಕೊಡುತ್ತಿಲ್ಲ ಎಂದು ನಟಿ ಬೇಸರ ಹೊರಹಾಕಿದ್ದಾರೆ. ನಾನು ಭಾರತಕ್ಕೆ ವಾಪಸಾಗಿದ್ದೇನೆ. ನಟನೆಗೆ ಸಿದ್ಧಳಾಗಿದ್ದೇನೆ. ಆದರೆ ಯಾರೂ ನನಗೆ ಅವಕಾಶ ಕೊಡುತ್ತಿಲ್ಲ ಎಂದು ನಟಿ ಹೇಳಿದ್ದಾರೆ. ನಟನೆ ಎನ್ನುವುದು ತುಂಬಾ ಕಷ್ಟ. ಅದರಲ್ಲಿಯೂ ಕಮ್​ಬ್ಯಾಕ್​ ಮಾಡಿದ ಮೇಲೆ ಚಾನ್ಸ್​ ಸಿಗುವುದು ತುಂಬಾ ಕಷ್ಟ. ಆದರೂ ಎಲ್ಲರಲ್ಲಿಯೂ ಕೇಳಿಕೊಳ್ಳುವುದು ಇಷ್ಟೇ. ನಾನು ವಾಪಸಾಗಿದ್ದೇನೆ. ನನಗೂ ಅವಕಾಶ ಕೊಡಿ ಎಂದು ನಟಿ ಕೋರಿಕೊಂಡಿದ್ದಾರೆ. ಯಾವುದಾದರೂ ಉದ್ಯೋಗ ಮೇಳದಲ್ಲಿ ಅರ್ಜಿ ಸಲ್ಲಿಸಿ ಎಂದು ನೆಟ್ಟಿಗರು ನಟಿಯ ಕಾಲೆಳೆಯುತ್ತಿದ್ದಾರೆ. ಆಲಿಯಾಗೆ ಹುಟ್ಟುಹಬ್ಬದ ಸಂಭ್ರಮ: 30 ವರ್ಷಕ್ಕೇ 550 ಕೋಟಿ ರೂ. ಒಡತಿಯ ಇಂಟರೆಸ್ಟಿಂಗ್​ ಕಹಾನಿ.... (@)