ನಾನೇ ಬಾಲಿವುಡ್‌ನ ಸೆಕ್ಸಿಯಸ್ಟ್‌ ನಟಿ ಎಂದ ಲೇಡಿ ಸೂಪರ್ ಸ್ಟಾರ್ ಮಗಳು! ಬಾಲಿವುಡ್‌ ನಟಿ ಜಾನ್ವಿ ಕಪೂರ್ ( ) ತಮ್ಮ ಸಹೋದರಿ ಖುಷಿ ಕಪೂರ್ ( ) ಜೊತೆಗೆ ಕರಣ್ ಜೋಹರ್ ( ) ಅವರ 'ಕಾಫಿ ವಿತ್ ಕರಣ್ 8' ನಲ್ಲಿ ಕಾಣಿಸಿಕೊಂಡರು.ಈ ಸಮಯದಲ್ಲಿ ಜಾನ್ವಿ ತಾನು ಬಾಲಿವುಡ್‌ನ ಅತ್ಯಂತ ಸೆಕ್ಸಿ ನಟಿ ಎಂದು ಹೇಳಿದ್ದಾರೆ. ಬಾಲಿವುಡ್‌ ನಟಿ ಜಾನ್ವಿ ಕಪೂರ್ ( ) ತಮ್ಮ ಸಹೋದರಿ ಖುಷಿ ಕಪೂರ್ ( ) ಜೊತೆಗೆ ಕರಣ್ ಜೋಹರ್ ( ) ಅವರ 'ಕಾಫಿ ವಿತ್ ಕರಣ್ 8' ನಲ್ಲಿ ಕಾಣಿಸಿಕೊಂಡರು.ಈ ಸಮಯದಲ್ಲಿ ಜಾನ್ವಿ ತಾನು ಬಾಲಿವುಡ್‌ನ ಅತ್ಯಂತ ಸೆಕ್ಸಿ ನಟಿ ಎಂದು ಹೇಳಿದ್ದಾರೆ. ದಿವಂಗತ ಶ್ರೀದೇವಿ ಅವರ ಮಕ್ಕಳಾದ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಕರಣ್ ಜೋಹರ್ ಅವರ ಫೇಮಸ್‌ ಟಾಕ್‌ ಶೋ 'ಕಾಫಿ ವಿತ್ ಕರಣ್ 8' ರಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಶೋನ ರ್ಯಾಪಿಡ್-ಫೈರ್ ರೌಂಡ್ ಸಮಯದಲ್ಲಿ, ಕರಣ್‌ ಜೋಹರ್‌ ಈಗ ಬಾಲಿವುಡ್‌ನಲ್ಲಿ ಹಾಟೆಸ್ಟ್ ನಟಿ ಯಾರು ಎಂದು ಜಾನ್ವಿಯನ್ನು ಕೇಳಿದರು. 'ಬಾಲಿವುಡ್‌ನಲ್ಲಿ ಪ್ರಸ್ತುತ ಸೆಕ್ಸಿಯಸ್ಟ್‌ ನಟಿ ನಾನೇ, ಜನ ನನ್ನ ಸೌಂದರ್ಯವನ್ನು ಹೆಚ್ಚು ನೋಡುತ್ತಾರೆ' ಎಂದು ಜಾನ್ವಿ ಕರಣ್‌ ಜೋಹರ್‌ ಅವರ ಪ್ರಶ್ನಗೆ ಉತ್ತರ ನೀಡಿದ್ದರು. ಇದೇ ಎಪಿಸೋಡ್‌ನಲ್ಲಿ ಜಾನ್ವಿ ತನ್ನ ಸ್ಪೀಡ್ ಡಯಲ್ ಲಿಸ್ಟ್‌ನಲ್ಲಿ ಶಿಖರ್ ಪಹಾರಿಯಾ ಅವರ ಹೆಸರಿರುವ ಬಗ್ಗೆ ಬಾಯಿಬಿಟ್ಟು, ತಮ್ಮ ಸಂಬಂಧದ ಸುಳಿವು ಕೂಡ ನೀಡಿದ್ದರು. ಜಾನ್ವಿ ಇದುವರೆಗೂ ತಮ್ಮ ಲವ್‌ ಲೈಫ್‌ ( ) ಬಗ್ಗೆ ಬಾಯಿಬಿಟ್ಟಿಲ್ಲ, ಆದರೆ ನಟಿ ಆಗಾಗ ರೂಮರ್ಡ್‌ ಬಾಯ್‌ಫ್ರೆಂಡ್‌ ಶಿಖರ್ ಪಹಾರಿಯಾ ಅವರ ಜೊತೆ ಕಾಣಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ತಮ್ಮ ಹುಟ್ಟಿದಬ್ಬದಂದು ಜಾನ್ವಿ ಶಿಖರ್ ಪಹಾರಿಯಾ ಅವರ ಜೊತೆ ತಿರುಪತಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಇನ್ನೂ ನಟಿಯ ಕೆಲಸ ಬಗ್ಗೆ ಹೇಳುವುದಾದರೆ, ಜಾನ್ವಿ ಕಪೂರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಸ್ಟಾರ್ ರಾಮ್ ಚರಣ್ ತೇಜಾ ಅವರ ಜೊತೆ ಹೊಸ ಚಿತ್ರವನ್ನೂ ಸಹ ಘೋಷಿಸಲಾಯಿತು. ಚಿತ್ರದ ಶೀರ್ಷಿಕೆ ಇನ್ನೂ ನಿರ್ಧಾರವಾಗಿಲ್ಲ. ಇದಲ್ಲದೆ, ನಟಿ ದೇವರ: ಭಾಗ 1 ರಲ್ಲಿ ಕಾಣಿಸಿಕೊಳ್ಳುತ್ತಾರೆ. ಇದು ಜಾನ್ವಿಯ ತೆಲುಗು ಚೊಚ್ಚಲ ನಚಿತ್ರವಾಗಿದ್ದು ಅವರು ಮೊದಲ ಬಾರಿಗೆ ನಟ ಜೂನಿಯರ್ ಜೊತೆಗೆ ಪರದೆಯನ್ನು ಹಂಚಿಕೊಳ್ಳುತ್ತಾರೆ. ಜೊತೆಗೆ ಜಾನ್ವಿ ಅವರು ಗುಲ್ಶನ್ ದೇವಯ್ಯ ಎದುರು ಉಲಾಜ್ ಮತ್ತು ನಟ ರಾಜ್‌ಕುಮಾರ್ ರಾವ್ ಎದುರು ಮಿಸ್ಟರ್ ಅಂಡ್ ಮಿಸೆಸ್ ಮಾಹಿ ಸಿನಿಮಾ ಕೂಡ ಅವರ ಖಾತೆಯಲ್ಲಿವೆ.