ಸ್ಲೀವ್‌ಲೆಸ್ ಬ್ಲೌಸ್, ಸಖತ್ ಪೋಸ್! ಕಪ್ಪು ಸೀರೆಯಲ್ಲಿ ಮಿಂಚಿದ ಆರಾಧನಾ ರಾಮ್: ಒನ್ ಮೋರ್​..ಒನ್​ ಮೋರ್ ಎಂದ ಫ್ಯಾನ್ಸ್‌! ಸ್ಯಾಂಡಲ್‌ವುಡ್‌ನ ನಟಿಯರಲ್ಲಿ ದೊಡ್ಡ ಹೆಸರು ಮಾಡಿದವರು ನಟಿ ಮಾಲಾಶ್ರೀ. ಕನಸಿನ ರಾಣಿಗೆ ಮುದ್ದಾದ ಹೆಣ್ಣು ಮಗುವಿದ್ದು, ಈಗ ಚಿತ್ರರಂಗವ್ನನು ಆಳಲು ಶುರು ಮಾಡಿದ್ದು, ಇದೀಗ ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಸ್ಯಾಂಡಲ್‌ವುಡ್‌ನ ನಟಿಯರಲ್ಲಿ ದೊಡ್ಡ ಹೆಸರು ಮಾಡಿದವರು ನಟಿ ಮಾಲಾಶ್ರೀ. ಕನಸಿನ ರಾಣಿಗೆ ಮುದ್ದಾದ ಹೆಣ್ಣು ಮಗುವಿದ್ದು, ಈಗ ಚಿತ್ರರಂಗವ್ನನು ಆಳಲು ಶುರು ಮಾಡಿದ್ದು, ಇದೀಗ ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಆರಾಧನಾ ರಾಮ್ ಅವರು ಸುಂದರವಾದ ಕಪ್ಪು ಬಣ್ಣದ ಸೀರೆಯುಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಮಹಿಳಾ ದಿನಾಚರಣೆಯ ದಿನ ನಟಿ ಆಕರ್ಷಕವಾದ ಟ್ರಾನ್ಪರೆಂಟ್ ಬ್ಲ್ಯಾಕ್ ಸೀರೆಯನ್ನುಟ್ಟು ಸಖತ್ತಾಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಆರಾಧನಾ ಸ್ಲೀವ್‌ಲೆಸ್ ಬ್ಲೌಸ್, ಕಪ್ಪು ಸೀರೆಯಲ್ಲಿ ಸಿಕ್ಕಾಪಟ್ಟೆ ಆಕರ್ಷಕವಾಗಿ ಕಾಣಿಸಿದ್ದಾರೆ. ಸಿಂಪಲ್ ಇಯರಿಂಗ್ಸ್ ಧರಿಸಿದಲ್ಲದೇ ಸಿಂಪಲ್ ಮೇಕಪ್ ಮಾಡಿಕೊಂಡಿದ್ದರು. ಜೊತೆಗೆ ಸುಂದರವಾದ ಕೆಂಪು ಬಿಂದಿ ಇಟ್ಟಿದ್ದರು. ಆಕರ್ಷಕವಾಗಿ ಕೂದಲು ಬಾಚಿಕೊಂಡು ಹೇರ್ ಬನ್ ಮಾಡಿದ್ದರು. ಫೋಟೋಸ್‌ನಲ್ಲಿ ಆರಾಧನಾ ಮುದ್ದಾದ ಸ್ಮೈಲ್ ಕೊಟ್ಟಿದ್ದಾರೆ. ಜೂನಿಯರ್ ಮಾಲಾಶ್ರೀ ಫೋಟೋ ನೋಡಿದ ಫ್ಯಾನ್ಸ್ ಸ್ಯಾಂಡಲ್‌ವುಡ್ ಗೊಂಬೆ, ನೋಡುವುದಕ್ಕೆ ಶಿಮ್ಲಾ ಅಪಲ್ ತರಹ ಕಾಣ್ತೀರಾ, ಒನ್ ಮೋರ್​..ಒನ್​ ಮೋರ್, ಬ್ಯೂಟಿಫುಲ್ ಎಂದು ತರೇಹವಾರಿ ಕಮೆಂಟ್ ಮಾಡಿ ಹೊಗಳಿದ್ದಾರೆ. ಕನ್ನಡ ಚಿತ್ರರಂಗದ ನಿರ್ಮಾಪಕ ರಾಮ್ ಹಾಗೂ ನಟಿ ಮಾಲಾಶ್ರೀ ಮಗಳು ಆರಾಧನಾ ಮೊದಲ ಸಿನಿಮಾ ಮೂಲಕವೇ ಕನ್ನಡದ ಭರವಸೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಅದರ ಜೊತೆಗೆ ತಮ್ಮ ಸ್ಟೈಲ್‌ನಿಂದಾಗಿ ಕೂಡ ಸದಾ ಸುದ್ದಿಯಲ್ಲಿರುತ್ತಾರೆ. ಮುಂಬೈನಲ್ಲಿ ಆ್ಯಕ್ಟಿಂಗ್ ತರಬೇತಿ ಪಡೆದ ಆರಾಧನಾ ರಾಮ್​, ಮೊದಲ ಸಿನಿಮಾದಲ್ಲಿ ಕನ್ನಡಿಗರ ಮನಗೆದ್ದರು ಸೋಶಿಯಲ್​ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಆರಾಧನಾ ರಾಮ್​ ಚೆಂದದ ಫೋಟೋವನ್ನು ಆಗಾಗ ಶೇರ್ ಮಾಡುತ್ತಿರುತ್ತಾರೆ. ಸ್ಯಾಂಡಲ್​ವುಡ್​ನ ಕನಸಿನ ರಾಣಿ ಎಂದೆ ಕರೆಸಿಕೊಳ್ಳುವ ಮಾಲಾಶ್ರೀ ಮಗಳು ಆರಾಧನಾ ಅಂದದಲ್ಲಿ ಅಮ್ಮನನ್ನು ಮೀರಿಸುವಂತಿದ್ದಾರೆ. ಆರಾಧನಾ ಬ್ಯೂಟಿಗೆ ಈಗಾಗಲೇ ಫ್ಯಾನ್ಸ್ ಫಿದಾ ಆಗಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳ ಮೂಲಕ ಅನೇಕ ಹೊಸ ನಟಿಯರು ಸಿನಿಮಾ ಇಂಡಸ್ಟ್ರಿಗೆ ಈಗಾಗಲೇ ಎಂಟ್ರಿ ಕೊಟ್ಟಿದ್ದಾರೆ. ಈ ಲಿಸ್ಟ್​ಗೆ ಇದೀಗ ಆರಾಧನಾ ರಾಮ್​ ಸೇರಿದ್ದಾರೆ. ಡ್ರೀಮ್​ ಗರ್ಲ್​ ನಟಿ ಮಾಲಾಶ್ರೀ ಮಗಳು ಆರಾಧನಾ ಇದೀಗ ಕನ್ನಡದ ಭರವಸೆಯ ನಟಿ ಆಗಿದ್ದಾರೆ.