ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್ ಪ್ರಿ-ವೆಡ್ಡಿಂಗ್‌ ಸಮಾರಂಭದಲ್ಲಿ ಸೆಲೆಬ್ರಿಟಿಗಳ ರಾಯಲ್‌ ಲುಕ್‌ ಗುಜರಾತ್‌ನ ಜಾಮ್ನಾನಗರದಲ್ಲಿ ಬಿಲಿಯನೇರ್‌ ಮುಕೇಶ್ ಅಂಬಾನಿ ಕಿರಿ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ನಡೀತಿದೆ. ದೇಶ-ವಿದೇಶದಿಂದ ಗಣ್ಯಾತಿಗಣ್ಯರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಬಾಲಿವುಡ್‌ ಸಲೆಬ್ರಿಟಿಗಳ ಗ್ರ್ಯಾಂಡ್ ಲುಕ್ ಎಲ್ಲರ ಗಮನ ಸೆಳೀತಿದೆ. ಗುಜರಾತ್‌ನ ಜಾಮ್ನಾನಗರದಲ್ಲಿ ಬಿಲಿಯನೇರ್‌ ಮುಕೇಶ್ ಅಂಬಾನಿ ಕಿರಿ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ನಡೀತಿದೆ. ದೇಶ-ವಿದೇಶದಿಂದ ಗಣ್ಯಾತಿಗಣ್ಯರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಬಾಲಿವುಡ್‌ ಸಲೆಬ್ರಿಟಿಗಳ ಗ್ರ್ಯಾಂಡ್ ಲುಕ್ ಎಲ್ಲರ ಗಮನ ಸೆಳೀತಿದೆ. ಗುಜರಾತ್‌ನ ಜಾಮ್ನಾನಗರದಲ್ಲಿ ಬಿಲಿಯನೇರ್‌ ಮುಕೇಶ್ ಅಂಬಾನಿ ಕಿರಿ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ನಡೀತಿದೆ. ದೇಶ-ವಿದೇಶದಿಂದ ಗಣ್ಯಾತಿಗಣ್ಯರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಸಲೆಬ್ರಿಟಿಗಳ ಲುಕ್ ಎಲ್ಲರ ಗಮನ ಸೆಳೀತಿದೆ. ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಪ್ರಿ-ವೆಡ್ಡಿಂಗ್ ಕಾರ್ಯಕ್ರಮದಲ್ಲಿ ರಣವೀರ್ ಸಿಂಗ್‌-ದೀಪಿಕಾ ಪಡುಕೋಣೆ, ವಿಕ್ಕಿ ಕೌಶಲ್‌-ಕತ್ರೀನಾ ಕೈಫ್ ಜೊತೆಯಾಗಿ ಕಾಣಿಸಿಕೊಂಡರು. ಜಂಗಲ್‌ ಥೀಮ್‌ ಡ್ರೆಸ್‌ನಲ್ಲಿ ಎಲ್ಲರ ಗಮನ ಸೆಳೆದ್ರು. ಬಾಲಿವುಡ್ ನಟ ಸೈಫ್ ಅಲಿ ಖಾನ್ ಬ್ಲ್ಯಾಕ್ ಡ್ರೆಸ್‌ನಲ್ಲಿ, ಕರೀನಾ ಕಪೂರ್ ಗೋಲ್ಡನ್‌ ಶೈನಿಂಗ್ ಡ್ರೆಸ್‌ನಲ್ಲಿ ಮಿಂಚಿದರು. ಇನ್ನು ನಟಿ ಜಾಹ್ನವಿ ಕಪೂರ್‌ ಪಿಂಕ್ ಲೆಹಂಗಾದಲ್ಲಿ ಗಾರ್ಜಿಯಸ್ ಆಗಿ ಕಾಣಿಸಿಕೊಂಡರು. ಅಣ್ಣ ಅರ್ಜುನ್ ಕಪೂರ್ ಜೊತೆ ಫೋಟೋಸ್‌ಗೆ ಫೋಸ್ ನೀಡಿದರು. ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಸಹ ತಮ್ಮ ಪತ್ನಿ ಜೊತೆ ಅಂಬಾನಿ ಮನೆ ಮದುವೆಯಲ್ಲಿ ಭಾಗಿಯಾಗಿದ್ದರು. ಮಿರ ಮಿರ ಮಿಂಚೋ ಬ್ಲ್ಯಾಕ್‌ ಡ್ರೆಸ್‌ನಲ್ಲಿ ಎಲ್ಲರ ಗಮನ ಸೆಳೆದರು. ಸಚಿನ್ ತೆಂಡುಲ್ಕರ್ ಮಗಳು ಸಾರಾ ತೆಂಡುಲ್ಕರ್ ರೆಡ್ ಲೆಹಂಗಾದಲ್ಲಿ ತುಂಬಾ ಮುದ್ದಾಗಿ ಕಾಣುತ್ತಿದ್ದರು. ಇದಕ್ಕೆ ಬೀಡೆಡ್‌ ನೆಕ್ಲೇಸ್‌ನ್ನು ಸಹ ಧರಿಸಿದ್ದರು. ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಸಹ ಪ್ರಿ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬ್ಲೂ ಕಲರ್ ಡ್ರೆಸ್‌ನಲ್ಲಿ ಸೈನಾ ಮಿಂಚಿದರು. ಶಾರೂಕ್‌ ಖಾನ್ ಮಗಳು ಸುಹಾನ ಖಾನ್‌ ಸಹ ಪ್ರಿ ವೆಡ್ಡಿಂಗ್ ಪಾರ್ಟಿಯಲ್ಲಿ ರಾಯಲ್ ಆಗಿ ಕಾಣಿಸಿಕೊಂಡರು.ಸ್ಕೈ ಬ್ಲೂ ಕಲರ್‌ನ ಸೀಕ್ವೆನ್ಸ್ ವರ್ಕ್ ಇರೋ ಸ್ಯಾರಿಯಲ್ಲಿ ಸುಹಾನಾ ಎಲಿಗೆಂಟ್ ಲುಕ್ ಕೊಟ್ಟರು. ಬಾಲಿವುಡ್‌ನ ಸೂಪರ್‌ ಹಿಟ್ ಸಿನಿಮಾ 'ಜವಾನ್‌' ನಿರ್ದೇಶಕ ಅಟ್ಲಿ ಸಹ ತಮ್ಮ ಪತ್ನಿ ಪ್ರಿಯಾಜೊತೆ ಮದುವೆಯಲ್ಲಿ ಭಾಗಿಯಾಗಿದ್ದರು. ಅಟ್ಲಿ ಬ್ಲ್ಯಾಕ್ ಮತ್ತು ಪ್ರಿಯಾ ವೈಟ್ ಲೆಹಂಗಾದಲ್ಲಿ ಮಿಂಚಿದರು. ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್ ಪ್ರಿ ವೆಡ್ಡಿಂಗ್‌ನ ಎರಡನೇ ದಿನದಂದು ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ರಾಯಲ್‌ ಲುಕ್‌ನಲ್ಲಿ ಮಿಂಚಿದರು. ರಣವೀರ್ ಬ್ಲೂ ಹಾಗೂ ದೀಪಿಕಾ ವೈಟ್‌ ಗೋಲ್ಡನ್ ವರ್ಕ್‌ನ ಲೆಹಂಗಾ ಧರಿಸಿದ್ದರು.