ಗ್ರೀನ್‌ ಡ್ರೆಸ್‌ನಲ್ಲಿ ಮಿಂಚಿದ ನವಾಬನ ಮಗಳು, ಕ್ಯಾಬೇಜ್‌ನಂತೆ ಕಾಣ್ತಿದ್ದೀರಿ ಅನ್ನೋದಾ ನೆಟ್ಟಿಗರು! ಬಾಲಿವುಡ್ ನಟಿ ಸಾರಾ ಆಲಿ ಖಾನ್ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ನಟಿ ಗ್ರೀನ್ ಕಲರ್‌ನ ಸ್ಟೈಲಿಶ್‌ ಡ್ರೆಸ್‌ನಲ್ಲಿ ಫೋಸ್ ನೀಡಿದ್ದಾರೆ. ನೆಟ್ಟಿಗರು ಮಾತ್ರ ಕ್ಯಾಬೇಜ್‌ನಂತೆ ಕಾಣ್ತಿದ್ದೀರಿ ಅಂತ ಟೀಕಿಸಿದ್ದಾರೆ. ಬಾಲಿವುಡ್ ನಟಿ ಸಾರಾ ಆಲಿ ಖಾನ್ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ನಟಿ ಗ್ರೀನ್ ಕಲರ್‌ನ ಸ್ಟೈಲಿಶ್‌ ಡ್ರೆಸ್‌ನಲ್ಲಿ ಫೋಸ್ ನೀಡಿದ್ದಾರೆ. ನೆಟ್ಟಿಗರು ಮಾತ್ರ ಕ್ಯಾಬೇಜ್‌ನಂತೆ ಕಾಣ್ತಿದ್ದೀರಿ ಅಂತ ಟೀಕಿಸಿದ್ದಾರೆ. ಬಾಲಿವುಡ್ ನಟಿ ಸಾರಾ ಆಲಿ ಖಾನ್ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಟ್ರೆಡಿಶನಲ್ ಹಾಗೂ ಮಾಡರ್ನ್‌ ಡ್ರೆಸ್ ಹಾಕ್ಕೊಂಡು ಸಖತ್ ಕ್ಯೂಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಸೆಲೆಬ್ರಿಟಿಯಾಗಿದ್ರೂ ಸಿಂಪಲ್ ಆಗಿರೋ ಸಾರಾಗೆ ಕೋಟ್ಯಾಂತರ ಅಭಿಮಾನಿಗಳೂ ಇದ್ದಾರೆ. ಇತ್ತೀಚಿಗೆ ನಟಿ ಗ್ರೀನ್ ಕಲರ್‌ನ ಸ್ಟೈಲಿಶ್‌ ಡ್ರೆಸ್‌ನಲ್ಲಿ ಫೋಸ್ ನೀಡಿದ್ದಾರೆ. ಡಿಫರೆಂಟ್ ಆಗಿರೋ ಸ್ಲೀವ್ಸ್‌ ಡಿಸೈನ್, ಹೈ ಸ್ಲಿಟ್‌ ಇರೋ ಗ್ರೀನ್‌ ಕಲರ್‌ ಗೌನ್‌ನಲ್ಲಿ ಮಿಂಚಿದ್ದಾರೆ. ನೆಟ್ಟಿಗರು ಬಾಲಿವುಡ್‌ನ ನವಾಬ ಸೈಫ್ ಆಲಿಖಾನ್ ಮಗಳ ಲುಕ್‌ಗೆ ಫಿದಾ ಆಗಿದ್ದಾರೆ. ಬ್ಯೂಟಿಫುಲ್‌, ಗಾರ್ಜಿಯಸ್‌, ಪ್ರೆಟ್ಟೀ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ನನ್ನ ಸ್ಕ್ರೀನ್‌ಗೆ ಪಾಲಕ್ ಎಲ್ಲಿಂದ ಬಂತು ಎಂದು ಗಾಬರಿಯಾದೆ, ಕ್ಯಾಬೇಜ್‌ನಂತೆ ಕಾಣುತ್ತಿದ್ದೀರಿ ಎಂದೆಲ್ಲಾ ಟೀಕಿಸಿದ್ದಾರೆ. ಮತ್ತೆ ಕೆಲವು ಅಭಿಮಾನಿಗಳು, ಹಾಲಿವುಡ್ ಸ್ಟಾರ್‌ನಂತೆ ಕಾಣುತ್ತಿದ್ದೀರಿ. ಸ್ಟನಿಂಗ್‌, ಗಾರ್ಜಿಯಸ್‌, ಕಣ್ಣುಗಳೇ ಮಾತನಾಡುತ್ತಿವೆ ಎಂದೆಲ್ಲಾ ಹೊಗಳಿದ್ದಾರೆ. ಸಿನಿಮಾರಂಗದ ದೊಡ್ಡ ಯಶಸ್ಸಿಗಾಗಿ ಎದುರು ನೋಡುತ್ತಿರುವ ಸಾರಾ ಅಲಿ ಖಾನ್ ಆಗಾಗ ಸ್ಟೈಲಿಶ್ ಆಗಿ ಫೋಟೋಶೂಟ್ ಮಾಡಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಸಾರಾ ಹಲವು ಗ್ಲಾಮರಸ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯವಾಗಿರುವ ಸಾರಾ ಆಲಿ ಖಾನ್‌, 43 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಫೋಟೋ ಶೇರ್ ಮಾಡುತ್ತಿದ್ದಂತೆ ಸಿಕ್ಕಾಪಟ್ಟೆ ಲೈಕ್ಸ್ ಹರಿದು ಬಂದಿದೆ. ಸಿನಿಮಾ ವಿಚಾರಕ್ಕೆ ಬರುವುದಾರೆ ಸಾರಾ ಬಳಿ ಅನೇಕ ಸಿನಿಮಾಗಳಿವೆ. ಜರಾ ಹತ್ಕೆ ಜರಾ ಬಚ್ ಕೆ, ಅತ್ರಂಗಿ ರೇ, ಕೇದಾರ್‌ನಾಥ್‌, ಸಿಂಬಾ, ಲವ್ ಆಜ್‌ ಕಲ್‌, ಏ ವತನ್ ಮೇರೆ ವತನ್, ಮರ್ಡರ್ ಮುಬಾರಕ್, ಲುಕಾ ಚುಪ್ಪಿ ಸಿನಿಮಾಗಳಲ್ಲಿ ಸಾರಾ ಅಲಿ ಖಾನ್ ನಟಿಸಿದ್ದಾರೆ. ಸಾರಾ ಕುಟುಂಬದ ಬಗ್ಗೆ ಹೇಳುವುದಾದರೆ ಹಿಂದೂ-ಮುಸ್ಲಿಂ ಧರ್ಮೀಯರಿಂದ ಮೇಳೈಸಿದ ಬಾಲಿವುಡ್ ಕುಟುಂಬವಿದು. ಇಲ್ಲಿ ಸಾರಾ ಅಲಿ ಖಾನ್​ ಅಜ್ಜ ಮತ್ತು ಅಪ್ಪ ಇಬ್ಬರೂ ಮುಸ್ಲಿಂ ಆದರೆ ಅಜ್ಜಿ ಮತ್ತು ತಾಯಿ ಹಿಂದೂ. ಸಾರಾ ಅಲಿ ಖಾನ್ ಹಿಂದೂ ಧರ್ಮವನ್ನು ಫಾಲೋ ಮಾಡುತ್ತಿದ್ದು, ದೇಗುಲಗಳಿಗೆ ಭೇಟಿ ನೀಡುವ ಮೂಲಕ ಅವರು ಆಗಾಗ ಸುದ್ದಿಯಾಗುತ್ತಿರುತ್ತಾರೆ.