ಪ್ರಭಾಸ್‌ಗೆ ಶ್ರದ್ಧಾ ಕಪೂರ್‌ ಮೇಲೆ ಲವ್ ಆಗಿದ್ಯಾ; ಡೌಟ್‌ಗೆ ಸಾಕ್ಷಿ ಕೊಡ್ತೀವಿ ಅಂತಿದಾರಲ್ಲ ನೆಟ್ಟಿಗರು! ಸುಜೀತ್ ನಿರ್ದೇಶನದಲ್ಲಿ ()ಮೂಡಿಬಂದಿದ್ದ ಸಾಹೋ ಚಿತ್ರದ ಪತ್ರಿಕಾಗೋಷ್ಠಿಗಳು ಹಾಗೂ ಸಂದರ್ಶನಗಳಲ್ಲಿ ನಟ ಪ್ರಭಾಸ್ ಶ್ರದ್ಧಾ ಕಪೂರ್ ಬಗ್ಗೆ ತುಂಬಾ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅವರಿಬ್ಬರ ಮಧ್ಯೆ ಸ್ನೇಹಕ್ಕೆ ಮೀರಿದ ಬಾಂಧವ್ಯ ಇದೆ, ಲವ್ ಇದೆ ಎಂದೆಲ್ಲಾ ಸಾಕಷ್ಟು ಸುದ್ದಿಗಳು ಹಬ್ಬಿತ್ತು. ಪ್ಯಾನ್ ಇಂಡಿಯಾ ಸ್ಟಾರ್ ನಟ ಪ್ರಭಾಸ್ ()ತಮ್ಮ 'ಸಾಹೋ' ಸಿನಿಮಾದ ಸಹನಟಿ ಶ್ರದ್ಧಾ ಕಪೂರ್ ( )ಬಗ್ಗೆ ಮಾತನಾಡಿದ್ದಾರೆ. 'ನಟಿ ಶ್ರದ್ಧಾ ಕಪೂರ್ ಒಬ್ಬರು ಒಳ್ಳೆಯ ನಟಿ. ಅವರು ಅಗತ್ಯಕ್ಕೆ ತಕ್ಕಂತೆ ಫೀಲ್ ಕೊಡುವುದರಲ್ಲಿ ಸಿದ್ದಹಸ್ತರು. ಯಾವುದೇ ಸೀನ್ ಇರಲಿ, ಅವರು ಅದಕ್ಕೆ ಸರಿಯಾಗಿಯೇ ಪ್ರಿಪೇರ್ ಆಗಿ ಕ್ಯಾಮೆರಾ ಮುಂದೆ ಬರುತ್ತಾರೆ. ಅದರಲ್ಲೂ ಲವ್, ರೊಮ್ಯಾಂಟಿಕ್ ಭಾವ ತುಂಬುವುದರಲ್ಲಿ ಶ್ರದ್ಧಾ ಕಪೂರ್ ಅವರದು ಎತ್ತಿದ ಕೈ. ಶ್ರದ್ಧಾ ನಟನೆಯ 'ಆಶಿಕಿ 2' ಚಿತ್ರವನ್ನು ನೀವೆಲ್ಲರೂ ನೋಡಿಯೇ ಇರುತ್ತೀರಿ. ಆಕೆಯ ಬಗ್ಗೆ ನಾನು ಹೇಳುವುದಕ್ಕಿಂತ ಅವರು ನಟಿಸಿದ್ ಸಿನಿಮಾಗಳೇ ಹೇಳುತ್ತವೆ' ಎಂದಿದ್ದಾರೆ ನಟ ಪ್ರಭಾಸ್. ಪ್ರಭಾಸ್ ಹಾಗು ನಟ ಶ್ರದ್ಧಾ ಕಪೂರ್ ನಟನೆಯ 'ಸಾಹೋ ()'ಚಿತ್ರವು 30 ಆಗಸ್ಟ್ 2019ರಲ್ಲಿ (30 2019) ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ (ಡಬಿಂಗ್) ಭಾಷೆಗಳಲ್ಲಿ ಬಿಡುಗಡೆ ಕಂಡಿದ್ದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸೋಲು ಕಂಡಿತ್ತು. ಪ್ರಭಾಸ್-ಶ್ರದ್ಧಾ ಕಪೂರ್ ಜೋಡಿಯ ಲವ್-ರೊಮ್ಯಾಂಟಿಕ್ ಸೀನ್‌ಗಳ ಕೆಮೆಸ್ಟ್ರಿ ತುಂಬಾ ಚೆನ್ನಾಗಿ ಇತ್ತಾದರೂ, ಪ್ರೇಕ್ಷಕರಿಗೆ ಚಿತ್ರದ ಕಥೆಯೇ ಇಷ್ಟವಾಗಲಿಲ್ಲ ಎನ್ನಬಹುದು. ಯಶ್ ರಾಜ್ ಹಾಗೂ ಫರಾಸ್ ಫಿಲಂಸ್‌ ಲಾಂಚ್ ( ) ಮಾಡಿದ್ದ ಸಾಹೋ ಚಿತ್ರವನ್ನು ಎಲ್ಲಾ ಭಾಷೆಯ ಪ್ರೇಕ್ಷಕರು ಸಾರಾಸಗಟಾಗಿ ತಳ್ಳಿಬಿಟ್ಟಿದ್ದರು. ಬಹಳಷ್ಟು ಸ್ಟಾರ್ ನಟರ ಜೊತೆ ನಟಿಸಿದ್ದ ಮಾಲಾಶ್ರೀ ನಟ ವಿಷ್ಣುವರ್ಧನ್‌ಗೆ ಯಾಕೆ ಜೋಡಿಯಾಗಲಿಲ್ಲ? ಸುಜೀತ್ ನಿರ್ದೇಶನದಲ್ಲಿ ()ಮೂಡಿಬಂದಿದ್ದ ಸಾಹೋ ಚಿತ್ರದ ಪತ್ರಿಕಾಗೋಷ್ಠಿಗಳು ಹಾಗೂ ಸಂದರ್ಶನಗಳಲ್ಲಿ ನಟ ಪ್ರಭಾಸ್ ಶ್ರದ್ಧಾ ಕಪೂರ್ ಬಗ್ಗೆ ತುಂಬಾ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅವರಿಬ್ಬರ ಮಧ್ಯೆ ಸ್ನೇಹಕ್ಕೆ ಮೀರಿದ ಬಾಂಧವ್ಯ ಇದೆ, ಲವ್ ಇದೆ ಎಂದೆಲ್ಲಾ ಸಾಕಷ್ಟು ಸುದ್ದಿಗಳು ಹಬ್ಬಿತ್ತು. ಶೂಟಿಂಗ್ ಮೀರಿಯೂ ಈ ಇಬ್ಬರು ಯಾವಾಗಲೂ ಮಾತುಕತೆಯಲ್ಲಿ ನಿರತರಾಗಿರುತ್ತಾರೆ ಎನ್ನಲಾಗಿತ್ತು. ಅಷ್ಟಕ್ಕೂ ಈ ಸುದ್ದಿ ಸುಖಾಸುಮ್ಮನೇ ಹುಟ್ಟಿಕೊಂಡಿದ್ದಲ್ಲ. ಪ್ರಭಾಸ್ ಸಂದರ್ಶನಗಳಲ್ಲಿ ನಟಿ ಶ್ರದ್ಧಾ ಕಪೂರ್ ಬಗ್ಗೆ ಮಾತನಾಡಿರುವುದು, ಅವರ ಕಣ್ಣಲ್ಲಿ ವ್ಯಕ್ತವಾಗಿದ್ದ ಭಾವಕ್ಕೆ ಅಲ್ಲಿದ್ದವರು ಸರಿಯಾಗಿ ಅರ್ಥ ಕಲ್ಪಿಸಿದ್ದರು. ನಾಗರಹಾವು ಬಳಿಕ ನಟ ವಿಷ್ಣುವರ್ಧನ್‌ಗೆ ಪುಟ್ಟಣ್ಣ ಕಣಗಾಲ್ ಮತ್ತೊಂದು ಸಿನಿಮಾ ಯಾಕೆ ಮಾಡಲಿಲ್ಲ? ಒಟ್ಟಿನಲ್ಲಿ, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ವೀಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ. ನೆಟ್ಟಿಗರು 'ಪ್ರಭಾಸ್-ಶ್ರದ್ಧಾ ಒಳ್ಳೆಯ ಫೇರ್, ಅವರಿಬ್ಬರ ಮಧ್ಯೆ ಸಿನಿಮಾದಲ್ಲಿಯೂ ಒಳ್ಳೆಯ ಕೆಮೆಸ್ಟ್ರಿ ಇದೆ. ಅವರಬ್ಬರೂ ಸಂದರ್ಶನಗಳಲ್ಲಿ ಪರಸ್ಪರ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅವರಿಬ್ಬರೂ ನಿಜ ಜೀವನದಲ್ಲಿ ಕೂಡ ಜೋಡಿಯಾದರೆ ತುಂಬಾ ಚೆನ್ನಾಗಿರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರಂತೂ ನಮ್ಮ ಕಾಮೆಂಟ್‌ಗಳನ್ನು ಸೀರಿಯಸ್ಸಾಗಿ ತೆಗೆದುಕೊಂಡು ನೀವಿಬ್ಬರೂ ಮದುವೆಯಾಗಿ ಎಂದಿದ್ದಾರೆ. ಸದ್ಯ ನಟ ಪ್ರಭಾಸ್ 'ಸಲಾರ್' ಸಿನಿಮಾ ಸಕ್ಸಸ್ ಮೂಲಕ ಸ್ಟಾರ್ ನಟರಾಗಿ ಉಳಿದುಕೊಂಡಿದ್ದಾರೆ. ಏಳುಬೀಳುಗಳ ನಡುವೆಯೂ ಗಟ್ಟಿ ಬದುಕು ಕಟ್ಟಿಕೊಂಡ ಜಯಮಾಲಾ ಅದೆಂಥ ಸಮಸ್ಯೆಗೆ ಸಿಲುಕಿದ್ದರು?