ಯೆಲ್ಲೋ ಪಿಂಕ್‌ ಸ್ಯಾರಿಯಲ್ಲಿ ಮಿಂಚಿದ ಶೋಭಾ ಶೆಟ್ಟಿ, ಪಚ್ಚೆ ಕಲ್ಲಿನ ಗ್ರ್ಯಾಂಡ್ ನೆಕ್ಲೇಸ್ ಮೇಲೆ ಎಲ್ಲರ ಕಣ್ಣು! ತೆಲುಗು ಬಿಗ್‌ಬಾಸ್‌ನಲ್ಲಿ ಹವಾ ಸೃಷ್ಟಿಸಿದ ಕನ್ನಡತಿ ಶೋಭಾ ಶೆಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಾಗ ತಮ್ಮ ಸ್ಟೈಲಿಶ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಯೆಲ್ಲೋ ಪಿಂಕ್‌ ಸ್ಯಾರಿಯಲ್ಲಿ ಮಿಂಚಿದ್ದಾರೆ. ಜನರ ಕಣ್ಣು ಮಾತ್ರ ಪಚ್ಚೆ ಕಲ್ಲಿನ ಗ್ರ್ಯಾಂಡ್ ನೆಕ್ಲೇಸ್ ಮೇಲೆನೆ ನೆಟ್ಟಿದೆ. ತೆಲುಗು ಬಿಗ್‌ಬಾಸ್‌ನಲ್ಲಿ ಹವಾ ಸೃಷ್ಟಿಸಿದ ಕನ್ನಡತಿ ಶೋಭಾ ಶೆಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಾಗ ತಮ್ಮ ಸ್ಟೈಲಿಶ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಯೆಲ್ಲೋ ಪಿಂಕ್‌ ಸ್ಯಾರಿಯಲ್ಲಿ ಮಿಂಚಿದ್ದಾರೆ. ಜನರ ಕಣ್ಣು ಮಾತ್ರ ಪಚ್ಚೆ ಕಲ್ಲಿನ ಗ್ರ್ಯಾಂಡ್ ನೆಕ್ಲೇಸ್ ಮೇಲೆನೆ ನೆಟ್ಟಿದೆ. ತೆಲುಗು ಬಿಗ್‌ಬಾಸ್‌ನಲ್ಲಿ ಹವಾ ಸೃಷ್ಟಿಸಿದ ಕನ್ನಡತಿ ಶೋಭಾ ಶೆಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಾಗ ತಮ್ಮ ಸ್ಟೈಲಿಶ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಯೆಲ್ಲೋ ಪಿಂಕ್‌ ಸ್ಯಾರಿಯಲ್ಲಿ ಮಿಂಚಿದ್ದಾರೆ. ಜನರ ಕಣ್ಣು ಮಾತ್ರ ಪಚ್ಚೆ ಕಲ್ಲಿನ ಗ್ರ್ಯಾಂಡ್ ನೆಕ್ಲೇಸ್ ಮೇಲೆನೆ ನೆಟ್ಟಿದೆ. ಕನ್ನಡತಿ ಶೋಭಾ ಶೆಟ್ಟಿ, ತೆಲುಗು ಬಿಗ್‌ಬಾಸ್‌ 7ರಲ್ಲಿ ಭಾಗವಹಿಸಿದ ನಂತರ ಹೆಚ್ಚು ಫೇಮಸ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಹೆಚ್ಚು ಆಕ್ಟಿವ್ ಆಗಿದ್ದಾರೆ. ಆಗಾಗ ಇನ್‌ಸ್ಟಾಗ್ರಾಂನಲ್ಲಿ ಮಾಡರ್ನ್ ಹಾಗೂ ಟ್ರೆಡಿಶನಲ್‌ ಲುಕ್‌ನಲ್ಲಿ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ. ಹಾಗೆಯೇ ಇತ್ತೀಚಿಗೆ ಪಿಂಕ್ ಬ್ಲೌಸ್‌, ಯೆಲ್ಲೋ ಹಾಫ್ ಸ್ಯಾರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಗ್ರ್ಯಾಂಡ್ ಪಚ್ಚೆ ನೆಕ್ಲೇಸ್ ಸೆಟ್‌ ಸಹ ಧರಿಸಿದ್ದಾರೆ. ಅಭಿಮಾನಿಗಳು ಶೋಭಾ ಶೆಟ್ಟಿಯ ಈ ಗ್ರ್ಯಾಂಡ್ ಲುಕ್‌ಗೆ ಫಿದಾ ಆಗಿದ್ದಾರೆ. ಲೈಕ್ಸ್‌, ಹಾರ್ಟ್‌ ಎಮೋಜಿ ಸೆಂಡ್ ಮಾಡಿದ್ದಾರೆ. ಬ್ಯೂಟಿಫುಲ್, ಕ್ಯೂಟ್, ಏಂಜೆಲ್‌, ನೈಸ್ ಲುಕ್ಕಿಂಗ್‌, ಗಾರ್ಜಿಯಸ್, ಸೂಪರ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಒಬ್ಬ ಅಭಿಮಾನಿ, 'ನೈಸ್ ಆರ್ನಮೆಂಟ್‌ ಕಲೆಕ್ಷನ್‌, ಲುಕ್ಕಿಂಗ್ ಸೋ ಗುಡ್‌' ಎಂದು ಹೊಗಳಿದ್ದಾರೆ. ತೆಲುಗು ಧಾರಾವಾಹಿಗಳಲ್ಲಿ ಸಕ್ರಿಯವಾಗಿರುವ ನಟಿ ಶೋಭಾ ಶೆಟ್ಟಿ ಇತ್ತೀಚಿಗಷ್ಟೇ ತಮ್ಮ ಸಹನಟ ಯಶವಂತ್ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಶೋಭಾ ಶೆಟ್ಟಿ-ಯಶವಂತ್‌ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದರು. ಕನ್ನಡದಲ್ಲಿ ನಟಿ ಮೊದಲು 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಟಿಸಿದ್ದರು. ಇದರಲ್ಲಿ ಶೋಭಾ ಶೆಟ್ಟಿ ಮಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. 6 ವರ್ಷಗಳಿಗೂ ಅಧಿಕ ಕಾಲ ಕಲರ್ಸ್​ ಕನ್ನಡದಲ್ಲಿ 'ಅಗ್ನಿಸಾಕ್ಷಿ' ಪ್ರಸಾರವಾಗಿತ್ತು. ಇದರಲ್ಲಿ ಶೋಭಾ ಶೆಟ್ಟಿ ತನು ಪಾತ್ರದಲ್ಲಿ ನಟಿಸಿದ್ದರು. ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರಾವಗುತ್ತಿದ್ದ ರುಕ್ಕು ಧಾರಾವಾಹಿಯಲ್ಲೂ ಶೋಭಾ ಶೆಟ್ಟಿ ಕೆಲ ತಿಂಗಳ ಕಾಲ ನಟಿಸಿದರು. ಈ ಸೀರಿಯಲ್‌ನ ಟಿಆರ್‌ಪಿ ಚೆನ್ನಾಗಿಲ್ಲವಾದ ಕಾರಣ ಧಾರಾವಾಹಿಯಿಂದ ಹೊರ ನಡೆದರು. ಆ ನಂತರ ನಟಿ ತೆಲುಗು ಧಾರಾವಾಹಿಗಳಲ್ಲಿ ಅಭಿನಯಿಸಲು ಆರಂಭಿಸಿದರು. ಇವರು ಅಭಿನಯಿಸಿದ 'ಕಾರ್ತಿಕ ದೀಪಂ' ಸೀರಿಯಲ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ತೆಲುಗು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಕಾರಣ ಶೋಭಾ ಶೆಟ್ಟಿ ಅವರನ್ನು ಬಿಗ್‌ಬಾಸ್‌ಗೆ ಆಯ್ಕೆ ಮಾಡಲಾಗಿತ್ತು. ಬಿಗ್‌ಬಾಸ್‌ ಮನೆ ಸೇರಿದಾಗಿನಿಂದಲೂ ತಮ್ಮ ಬಾಯಿ ಬೊಂಬಾಯಿಯಿಂದಾಗಿ ಶೋಭಾ ಶೆಟ್ಟಿ, ತೆಲುಗು ಟ್ರೋಲ್ ಪೇಜ್‌ಗಳಲ್ಲಿ ಸಖತ್ ಟ್ರೋಲ್ ಆಗಿದ್ದರು.ಕನ್ನಡದಲ್ಲಿ ಕಿಚ್ಚ ಸುದೀಪ್ ಬಿಗ್ಬಾಸ್ ಕಾರ್ಯಕ್ರಮ ಹೋಸ್ಟ್ ಮಾಡುತ್ತಿದ್ದರೆ, ತೆಲುಗಿನಲ್ಲಿ ನಟ ಅಕ್ಕಿನೇನಿ ನಾಗಾರ್ಜುನ್ ಅವರು ಈ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ. ಇನ್ನು ಶೋಭಾ, ಬಿಗ್‌ಬಾಸ್‌ನಲ್ಲಿ ಎಲ್ಲಾ ಸ್ಪರ್ಧಿಗಳಿಗಿಂತಲೂ ಅತಿ ಹೆಚ್ಚು ಸಂಭಾವನೆ ಪಡೆದುಕೊಂಡಿದ್ದಾರೆ ಎಂದೂ ಹೇಳಲಾಗ್ತಿತ್ತು. ಅಂದರೆ ಒಂದು ವಾರಕ್ಕೆ 1.25 ಲಕ್ಷ ರೂಪಾಯಿಯಿಂದ 1.50 ಲಕ್ಷ ರೂಪಾಯಿ ಸಂಭಾವನೆ ಸಿಗುತ್ತಿದೆ ಎಂದು ಬಹಿರಂಗ ಪಡಿಸಲಾಗಿತ್ತು