2 ಗಂಟೆಗೆ 13 ಲಕ್ಷ ಪಡೆದ ಬಹುಭಾಷಾ ನಟಿ ಮೀನಾ? ಸಿನಿ ವಿಮರ್ಶಕ ಹೇಳಿದ್ದೇನು? ಬಹುಭಾಷಾ ತಾರೆ ಮೀನಾ ಅವರು 2 ಗಂಟೆಗೆ 13 ಲಕ್ಷ ಹಣವನ್ನು ಪಡೆದಿದ್ದರು ಎಂಬ ಬಗ್ಗೆ ಸಿನಿ ವಿಮರ್ಶಕ ಬೈಲ್ವಾನ್ ರಂಗನಾಥನ್ ಹೇಳಿದ್ದಾರೆ. ಏನಿದು ವಿಷ್ಯ? ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿರೋ ಬಹುಮುಖ ಪ್ರತಿಭೆ, ಬಹುಭಾಷಾ ನಟಿ ಮೀನಾ. ಇವರ ಪೂರ್ತಿ ಹೆಸರು ಮೀನಾ ದುರೈರಾಜ್ ( ) ಆದರೂ ಮೀನಾ ಎಂದಷ್ಟೇ ಪ್ರಸಿದ್ಧಿ ಪಡೆದಿರುವ ನಟಿ, 90 ರ ದಶಕದಲ್ಲಿ ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರಾಗಿದ್ದರು. ನಟನೆಯ ಜೊತೆಗೆ, ಇವರು ಹಿನ್ನೆಲೆ ಗಾಯಕಿ, ಡಬ್ಬಿಂಗ್ ಕಲಾವಿದೆ ಕೂಡ. ಎರಡು ಫಿಲ್ಮ್‌ಫೇರ್ ಪ್ರಶಸ್ತಿಗಳು ( ), ಮೂರು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ಅತ್ಯುತ್ತಮ ನಟಿಗಾಗಿ ಎರಡು ನಂದಿ ಪ್ರಶಸ್ತಿ ಮತ್ತು ಸಿನಿಮಾ ಎಕ್ಸ್‌ಪ್ರೆಸ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಅವರು ಪಡೆದಿರುವುದು ಮಾತ್ರವಲ್ಲದೇ, ತಮಿಳುನಾಡು ಸರ್ಕಾರದ ಕಲೈಮಾಮಣಿ ಪ್ರಶಸ್ತಿಗೂ ಭಾಜನರಾಗಿದ್ದರು. ಕೆಲ ತಿಂಗಳ ಹಿಂದೆ ಪತಿ ವಿದ್ಯಾಸಾಗರ್ ಅವರನ್ನು ಮೀನಾ ಕಳೆದುಕೊಂಡಿದ್ದರು. ಕೋವಿಡ್ ಸೋಂಕಿನಿಂದ ವಿದ್ಯಾಸಾಗರ್ ( ) ಅವರು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದರು. ಶ್ವಾಸಕೋಶ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾ ಸಾಗರ್ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಇದರ ಬಳಿಕ 46 ವರ್ಷದ ಮೀನಾ ಅವರು ಎರಡನೆಯ ಮದುವೆಯಾಗುತ್ತಿದ್ದಾರೆ ಎಂಬ ವದಂತಿ ಕೂಡ ಹರಡಿತ್ತು.ಕೆಲ ದಿನಗಳ ಹಿಂದೆ ಜೀವನದ ಕೆಲವೊಂದು ಕುತೂಹಲದ ವಿಷಯಗಳನ್ನು ಮೀನಾ ತೆರೆದಿಟ್ಟಿದ್ದರು. ತಮಿಳು ಚಾನೆಲ್ ಸಿನಿ ಉಲಗಂನಲ್ಲಿ ನಟಿ ಸುಹಾಸಿನಿ ನಡೆಸಿಕೊಡುವ ಚಾಟ್ ಷೋಗೆ ಆಗಮಿಸಿದ್ದ ಮೀನಾ ತಮ್ಮ ಕ್ರಷ್​ ಕುರಿತು ಹೇಳಿಕೊಂಡಿದ್ದರು. ವಿದ್ಯಾ ಸಾಗರ್ ( ) ಅವರನ್ನು ಮದುವೆಯಾಗುವ ಮುನ್ನ ತಮ್ಮ ಕ್ರಷ್​ ಯಾರಾಗಿದ್ದರು, ಕೊನೆಗೆ ಏನಾಯ್ತು ಎಂಬ ಕುತೂಹಲದ ವಿಷಯವನ್ನು ಅವರು ಶೇರ್​ ಮಾಡಿಕೊಂಡಿದ್ದರು. ಆ ನಟ ಮದುವೆಯಾದಾಗ ನನ್ನ ಹಾರ್ಟ್ ಬ್ರೇಕ್ ಆಗಿತ್ತು ಎಂದೂ ನಟಿ ಹೇಳಿದ್ದರು. 'ನನಗೆ ಬಾಲಿವುಡ್ ನಟನ ಮೇಲೆ ಕ್ರಷ್​ () ಆಗಿತ್ತು. ಅವರ ಮದುವೆಯ ಸುದ್ದಿ ನನ್ನ ಹಾರ್ಟ್ ಬ್ರೇಕ್ ಮಾಡಿತ್ತು' ಎಂದು ಮೀನಾ ಮುಲಾಜಿಲ್ಲದೇ ಹೇಳಿಕೊಂಡಿದ್ದರು. ಅಷ್ಟಕ್ಕೂ ಮೀನಾ ಅವರಿಗೆ ಕ್ರಷ್​ ಆಗಿದ್ದ ನಟ ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್ ಅಂತೆ! ನನ್ನ ಕ್ರಷ್​ ಆಗಿದ್ದರು ಹೃತಿಕ್​ ಎಂದಿದ್ದಾರೆ ಮೀನಾ. ಅವರ ಮೇಲಿನ ಪ್ರೀತಿಯ ಕುರಿತು ಮಾತನಾಡಿದ ಮೀನಾ, 'ನಾನು ಹೃತಿಕ್ ರೋಷನ್ ( ) ಅವರನ್ನು ತುಂಬಾ ಪ್ರೀತಿಸುತ್ತಿದ್ದೆ. ನನಗೆ ಅವರಂಥ ಹುಡುಗ ಬೇಕು ಎಂದು ಅಮ್ಮನಿಗೆ ಹೇಳುತ್ತಿದ್ದೆ. ನನಗೆ ಅಗಿನ್ನೂ ಮದುವೆಯಾಗಿರಲಿಲ್ಲ. ಮನೆಯಲ್ಲಿ ಮದುವೆಯ ಪ್ರಸ್ತಾಪ ಮಾಡುತ್ತಿದ್ದ ವೇಳೆ, ಅಮ್ಮನಿಗೆ ಇದೇ ವಿಷಯ ಹೇಳುತ್ತಿದ್ದೆ. ಆದರೆ ಈ ಬಗ್ಗೆ ಹೃತಿಕ್​ ಅವರ ಮುಂದೆ ಎಂದಿಗೂ ಹೇಳಿಕೊಂಡಿರಲಿಲ್ಲ.ಆದರೆ ಅವರ ಮೇಲೆ ಪ್ರೀತಿ ಇದದ್ದಂತೂ ನಿಜ' ಎಂದಿರುವ ಮೀನಾ, ಹೃತಿಕ್ ಮದುವೆಯ ದಿನದಂದು ನನ್ನ ಹಾರ್ಟ್ ಬ್ರೇಕ್ ಆಗಿತ್ತು ಎಂದಿದ್ದರು. 21ರ ಹೊಸ ಪತ್ನಿಯ ಪರಿಚಯಿಸಿದ 47ರ ಸಾಹಿಲ್ ಖಾನ್​​: ಪತ್ನಿಯ ಪ್ರಬುದ್ಧತೆ ಶ್ಲಾಘಿಸಿದ ನಟ ಮೀನಾ ಅವರ ಎರಡನೆಯ ಮದ್ವೆಯ ಬಗ್ಗೆ ಸಾಕಷ್ಟು ಹೇಳಿಕೆ ನೀಡಿ ಹಲ್​ಚಲ್​ ಸೃಷ್ಟಿಸಿದ್ದ ಕಾಲಿವುಡ್‌ ವಿಮರ್ಶಕ ಬೈಲ್ವಾನ್‌ ರಂಗನಾಥನ್‌, ಮೀನಾ ವಿರುದ್ಧ ಮತ್ತೆ ಕುಟುಕಿದ್ದು, ಅದೀಗ ಬಹಿರಂಗಗೊಂಡಿದೆ. ಮೀನಾ ಬೇಕೆಂದರೆ 2 ಗಂಟೆಗೆ 13 ಲಕ್ಷ ಹಣ ನೀಡಬೇಕು ಎಂದು ಅವರು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ನೀಡಿರುವುದು ಯೂಟ್ಯೂಬ್​ಗೆ ಸಂಬಂಧಿಸಿದಂತೆ. ಯೂಟ್ಯೂಬ್​ಗಳ ಸಂಖ್ಯೆ ಹೆಚ್ಚುತ್ತಿದ್ದಂತೆಯೇ, ಪೈಪೋಟಿ ಕೂಡ ಜಾಸ್ತಿಯಾಗಿದೆ. ಇದೇ ಕಾರಣಕ್ಕೆ ಸೆಲೆಬ್ರಿಟಿಗಳ ಸಂದರ್ಶನ ಬೇಕು ಎಂದರೆ, ಅವರು ಹೇಳಿದಷ್ಟು ಹಣಕ್ಕೆ ಕೊಡಲೇಬೇಕಾದ ಅನಿವಾರ್ಯತೆ ಇದೆ. ಮೀನಾ ಅವರು 2 ಗಂಟೆಯ ಸಂದರ್ಶನಕ್ಕೆ 13 ಲಕ್ಷದ ಬೇಡಿಕೆ ಒಡ್ಡಿದ್ದರು ಎಂಬ ವಿಷಯವನ್ನು ಬೈಲ್ವಾನ್​ ರಂಗನಾಥನ್​ ಬಹಿರಂಗವಾಗಿ ಹೇಳಿದ್ದಾರೆ. ಇತ್ತೀಚೆಗಷ್ಟೇ ಮೀನಾ ಯೂಟ್ಯೂಬ್‌ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿದ್ದರು. ಅದು ಎರಡು ಗಂಟೆಯ ಸಂದರ್ಶನ. ಮೀನಾ ಇದಕ್ಕಾಗಿ 13 ಲಕ್ಷ ರೂಪಾಯಿ ಪಡೆದಿದ್ದಾರೆ. ಯೂಟ್ಯೂಬ್‌ಗೂ ಪ್ರಚಾರ ಅನಿವಾರ್ಯ ಆಗಿದ್ದರಿಂದ ಅವರು ಹೇಳಿದಷ್ಟು ದುಡ್ಡು ಕೊಟ್ಟಿದ್ದಾರೆ ಎಂದಿದ್ದಾರೆ. ಇದು ಸತ್ಯವೋ, ಸುಳ್ಳೋ ಗೊತ್ತಿಲ್ಲ. ಆದರೆ ಸದ್ಯ ಈ ಪರಿಯ ಹಣ ಪಡೆಯುವ ಬಗ್ಗೆ ಸಾಕಷ್ಟು ಪರ-ವಿರೋಧದ ಅಲೆ ಎದ್ದಿದೆ.ಈ ನಡುವೆಯೇ, ಮೀನಾ ಮಗಳು ನೈನಿಕಾ, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮೀನಾ ಈ ಹಿಂದೆ ಮಾತನಾಡಿದ್ದರು. ಈ ಬಗ್ಗೆ ನನಗೆ ಖುಷಿ ಇದೆ. ವಿಜಯ್ ಅಭಿನಯದ ತೇರಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಯಶಸ್ಸನ್ನು ಕಂಡಿತ್ತು. ನನಗೆ ಇದು ತುಂಬಾ ಹೆಮ್ಮೆ ವಿಷಯವಾಗಿದೆ ಎಂದಿದ್ದರು. ಇದೇ ವೇಳೆ ತಮ್ಮ ಸಿನಿ ಪಯಣದ ಕುರಿತೂ ಮಾತನಾಡಿದ ಅವರು, ಪಡಯಪ್ಪ ಚಿತ್ರದಲ್ಲಿ ರಮ್ಯಾ ಕೃಷ್ಣನ್ ನಿರ್ವಹಿಸಿದ ನೆಗೆಟಿವ್ ಪಾತ್ರಕ್ಕೆ ತನ್ನನ್ನು ಮೊದಲು ಆಯ್ಕೆ ಮಾಡಿದ್ದರು. ಆದರೆ ಆ ಪಾತ್ರ ಮಾಡಬೇಡ ಎಂದು ನನ್ನ ತಾಯಿ ಹೇಳಿದ್ರು ಹೀಗಾಗಿ ಮಾಡಿಲ್ಲ ಎಂದು ಹೇಳಿದರು. ನಾಯಕಿ ಪಾತ್ರಗಳಲ್ಲಿ ಮಿಂಚುತ್ತಿರುವಾಗ ವಿಲನ್ ಆಗಿ ನಟಿಸಿದರೆ ಸಿನಿ ಜರ್ನಿ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ಅಮ್ಮ ಒಪ್ಪಿರಲಿಲ್ಲ. ಆದರೆ ನಂತರ ಆ ಪಾತ್ರ ಮಾಡಬೇಕಿತ್ತು ಎಂದು ನನಗೂ ಅನಿಸಿತ್ತು ಎಂದು ಮೀನಾ ಹೇಳಿದರು. ಪತಿಯಾಗಿ ನನ್ನಲ್ಲಿದ್ದ ಕೊರತೆಯೇನು? ಡಿವೋರ್ಸ್​ ಬಳಿಕ ಆಮೀರ್​ ಕೇಳಿದ ಪ್ರಶ್ನೆಗೆ ಕಿರಣ್​ ಹೇಳಿದ್ದಿಷ್ಟು...