ಅಕ್ಕ ಮುಗ್ಗರಿಸಿ ಬಿದ್ದರೆ.... ಚಿನ್ ತಪಕ್ ಡಂಡಂ; ಭವ್ಯಾ ಗೌಡ ಕಾಲೆಳೆದ ನೆಟ್ಟಿಗರು ಚಿಕ್ಕಮಗಳೂರಿನಲ್ಲಿ ಭವ್ಯಾ ಗೌಡ.....ವಾವಾ ಎಂಜಾಯ್ ಮಾಡುತ್ತಿರುವ ಫೋಸ್ ನೋಡಿ ನಟ್ಟಿಗರು ಕಾಲೆಳೆದು ಬಿಟ್ಟುರ..... ಚಿಕ್ಕಮಗಳೂರಿನಲ್ಲಿ ಭವ್ಯಾ ಗೌಡ.....ವಾವಾ ಎಂಜಾಯ್ ಮಾಡುತ್ತಿರುವ ಫೋಸ್ ನೋಡಿ ನಟ್ಟಿಗರು ಕಾಲೆಳೆದು ಬಿಟ್ಟುರ..... ಗೀತಾ ಧಾರಾವಾಹಿ ಖ್ಯಾತಿಯ ಭವ್ಯಾ ಗೌಡ ಸದ್ಯ ಜಾಲಿ ಜಾಲಿ ಮೂಡಿನಲ್ಲಿದ್ದಾರೆ. ಚಿಕ್ಕಮಗಳೂರಿನ ಕಡೆ ಪ್ರಯಾಣ ಮಾಡಿರುವ ಸುಂದರಿ ಚಂದ ಚಂದ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಗೀತಾ ಧಾರಾವಾಹಿ ನಂತರ ಭವ್ಯಾ ಗೌಡ ಯಾವ ಸೀರಿಯಲ್ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ. ಕಳೆದ ವರ್ಷ ಸಿನಿಮಾ ಪ್ರಾಜೆಕ್ಟ್‌ಗೆ ಸಹಿ ಹಾಕಿದ್ದರು..ಈವರೆಗೂ ಅದರ ಬಗ್ಗೆ ಸುಳಿವು ಕೊಟ್ಟಿಲ್ಲ. ಸೀರಿಯಲ್ ಸಿನಿಮಾ ಜೊತೆಯಲ್ಲಿ ಸೋಷಿಯಲ್ ಮೀಡಿಯಾದಲ್ಲೂ ಭವ್ಯಾ ಗೌಡ ಹೆಸರು ಮಾಡಿದ್ದಾರೆ. ಇತ್ತೀಚಿಗೆ ಆರಂಭಿಸಿದ ಯೂಟ್ಯೂಬ್ ಚಾನೆಲ್‌ ಕೂಡ ಸೂಪರ್ ಆಗಿ ನಡೆಯುತ್ತಿದೆ. ಇನ್ನು ಚಿಕ್ಕಮಗಳೂರಿನ ಕಡೆ ಪ್ರಯಾಣ ಮಾಡಿರುವ ಭವ್ಯಾ ಗೌಡ ಅಲ್ಲಿ ಹರಿಯುತ್ತಿದ್ದ ನೀರಿನ ನಡುವೆ ಕುಳಿತು ಪೋಸ್ ಕೊಟ್ಟಿದ್ದಾರೆ. ಈ ಲುಕ್ ಸಖತ್ ವೈರಲ್ ಆಗುತ್ತಿದೆ. ಹಸಿರು ಟೀ-ಶರ್ಟ್‌, ಪಿಂಚ್ ಚಡ್ಡಿ ಧರಿಸಿರುವ ಭವ್ಯಾ ಗೌಡ ಅಲ್ಲಿ ಹರಿಯುತ್ತಿದ್ದ ನೀರಿನ ನಡುವೆ ಇದ್ದ ಬಂಡೆಯ ಮೇಲೆ ಕುಳಿತುಕೊಂಡು ಕಿವಿಗೆ ಹೂವು ಇಟ್ಟು ಪೋಸ್ ಕೊಟ್ಟಿದ್ದಾರೆ. ಅಕ್ಕಾ ಪೋಸ್ ಕೊಟ್ಟು ಮೊದಲು ಎದ್ದು ನಡೆ ಇಲ್ಲ ಅಂದ್ರೆ ಚಿನ್ ತಪಕ್ ಡಂಡಂ ವಿಡಿಯೋ ನೀನು ಮಾಡಲ್ಲ ನಿನ್ನ ನೋಡಿಕೊಂಡು ಅಲ್ಲಿದ್ದ ಜನರು ಮಾಡುತ್ತಾರೆ ಎಂದು ಕಾಲೆಳೆದಿದ್ದಾರೆ.