ಆಫ್ ಶೋಲ್ಡರ್ ಡ್ರೆಸ್‌ನಲ್ಲಿ ತಮನ್ನಾ ಹಾಟ್ ಲುಕ್; ಹೊಳೆವ ತ್ವಚೆಗೆ ಫ್ಯಾನ್ಸ್ ಫಿದಾ ಮಿಲ್ಕಿ ಬ್ಯೂಟಿ ತಮನ್ನಾ ರೆಡ್ ಹಾಟ್ ಅವತಾರದಲ್ಲಿ ತಮ್ಮ ಅಭಿಮಾನಿಗಳ ನಿದ್ದೆಗೆಡಿಸುವಂಥ ಫೋಟೋಗಳನ್ನು ಹರಿಬಿಟ್ಟಿದ್ದಾರೆ. ಮಿಲ್ಕಿ ಬ್ಯೂಟಿ ತಮನ್ನಾ ರೆಡ್ ಹಾಟ್ ಅವತಾರದಲ್ಲಿ ತಮ್ಮ ಅಭಿಮಾನಿಗಳ ನಿದ್ದೆಗೆಡಿಸುವಂಥ ಫೋಟೋಗಳನ್ನು ಹರಿಬಿಟ್ಟಿದ್ದಾರೆ. ಸ್ವೀಟ್ ಬ್ಯೂಟಿ ತಮನ್ನಾ ಭಾಟಿಯಾಗೆ ಉತ್ತಮ ಫ್ಯಾಶನ್ ಸೆನ್ಸ್ ಇದೆ. ತಮ್ಮ ಲುಕ್‌ಗಳಿಂದ ಜನರನ್ನು ಹೇಗೆ ತಮ್ಮೆಡೆಗೆ ತಿರುಗುವಂತೆ ಮಾಡಬೇಕೆಂದು ಆಕೆಗೆ ಚೆನ್ನಾಗಿ ಗೊತ್ತಿದೆ. ಈ ಬಾರಿ ತಮನ್ನಾ ಆಫ್ ಶೋಲ್ಡರ್ ಡ್ರೆಸ್‌ನಲ್ಲಿ ಹೊಸ ಫೋಟೋಗಳನ್ನು ಹಾಕಿದ್ದಾರೆ. ಈ ಲುಕ್‌ನಲ್ಲಿ ತಮನ್ನಾ ಇಂಟರರ್ನೆಟ್‌ಗೇ ಕಿಚ್ಚು ಹತ್ತಿಸುವಷ್ಟು ಹಾಟ್ ಆಗಿ ಕಾಣಿಸುತ್ತಿದ್ದಾರೆ. ಬಟ್ಟೆ ಕೆಂಪು ಬಣ್ಣದಂತೆ ಕಾಣುತ್ತಿದೆ. ಆದರೆ, 'ಈ ಬಟ್ಟೆಯ ಬಣ್ಣ ಕೇಸರಿಯಲ್ಲ, ಕೆಂಪು ಎಂದುಕೊಂಡವರಿಗೆ 2 ನಿಮಿಷ ಮೌನ' ಎಂದು ಕ್ಯಾಪ್ಶನ್ ನೀಡಿದ್ದಾರೆ. ಆದರೆ ಫ್ಯಾನ್‌ಗಳು ಮಾತ್ರ ಬಟ್ಟೆಯ ಬಣ್ಣದ ಬಗ್ಗೆ ತಲೆ ಕೆಡಿಸಿಕೊಳ್ಳಲು ನಿಮ್ಮ ಬ್ಯೂಟಿ ಅವಕಾಶವನ್ನೇ ನೀಡುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. 'ಕಾವಾಲಯ್ಯ' ಬೆಡಗಿಯ ಸೆಕ್ಸೀ ಹಾಟ್ ಲುಕ್ ನೆಟ್ಟಿಗರ ನಿದ್ದೆ ಕದಿವಷ್ಟು ಅದ್ಭುತವಾಗಿದೆ. ಅದರಲ್ಲೂ ಮಿಲ್ಕೀ ಬ್ಯೂಟಿಯ ಸಣ್ಣ ಮಚ್ಚೆಯೂ ಇಲ್ಲದ ಹೊಳೆವ ತ್ವಚೆ ಕಣ್ಣು ಕುಕ್ಕುತ್ತಿದೆ ಎಂತಿದಾರೆ ಫ್ಯಾನ್ಸ್. ಇನ್ಸ್ಟಾಗ್ರಾಂನಲ್ಲಿ 25 ಮಿಲಿಯನ್ ಫಾಲೋವರ್ಸ್ ಹೊಂದಿರುವ ಚೆಲುವೆಯ ಫೋಟೋ ಹಾಕುತ್ತಿದ್ದಂತೆಯೇ ಸಲೀಸಾಗಿ 2 ಲಕ್ಷ ಲೈಕ್‌ಗಳನ್ನು ಪಡೆದಿದೆ. ವಯಸ್ಸಾದಂತೆಲ್ಲ ತಮನ್ನಾ ಕೂಡಾ ಓಲ್ಡ್ ವೈನ್‌ನಂತೆ ಹೆಚ್ಚು ಆಕರ್ಷಕವಾಗುತ್ತಿದ್ದಾಳೆ ಎನ್ನುತ್ತಿರುವ ಅಭಿಮಾನಿಗಳು 'ತಮ್ಮು ಎಲ್ದಂಗಾಯ್ತು ದಮ್ಮು' ಅಂತಿದಾರೆ.