ಸಂಗೀತ ಆಲ್ಬಂ ಮೂಲಕ ಪಡ್ಡೆ ಹುಡುಗರ ನಿದ್ದೆಕದ್ದ 'ಸೂಪರ್​ ಸ್ಟಾರ್'​ ನಟಿ! ಮಾದಕ ಚೆಲುವಿಗೆ ಉಫ್​ ಎಂದ ಫ್ಯಾನ್ಸ್​ ಮಾದಕ ಸಂಗೀತ ಆಲ್ಬಂ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ ಕನ್ನಡದ 'ಸೂಪರ್​ ಸ್ಟಾರ್'​ ನಟಿ ಝಾರಾ ಯಾಸ್ಮಿನ್​​. ಇದರ ವಿಡಿಯೋ ವೈರಲ್​ ಆಗಿದೆ. ನಟ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಅವರ 2020ನೇ ಸಾಲಿನಲ್ಲಿ ಬಿಡುಗಡೆಯಾದ ಸೂಪರ್​ ಸ್ಟಾರ್​ ಚಿತ್ರವನ್ನು ನೋಡಿದವರಿಗೆ ನಟಿ ಝರಾ ಯಾಸ್ಮಿನ್​ ಮುದ್ದಾದ ಮೊಗ ನೆನಪಿರಬಹುದು. ನೃತ್ಯಪಟುವೊಬ್ಬನ ಕತೆಯನ್ನು ಸ್ಟೈಲಿಷ್ ಆಗಿ ಹೇಳುವ ಪ್ರಯತ್ನ ಮಾಡಿರುವ, ನಿರ್ದೇಶಕ ರಮೇಶ್ ಬಾಬು ಅವರ ಈ ಚಿತ್ರ ಸಕತ್​ ಸೌಂಡ್​ ಮಾಡಿತ್ತು. ನಿರಂಜನ್ ಸುಧೀಂದ್ರ ಹೀರೋ ಆಗಿ ಸಿನಿಮಾ ರಂಗಕ್ಕೆ ಕಾಲಿಟ್ಟರೆ, ಬಾಲಿವುಡ್​ನ ಝರಾ ಅವರ ಬ್ಯೂಟಿಗೆ ಜನರು ಮರುಳಾಗಿದ್ದರು. ಮಾಡೆಲಿಂಗ್‌ನಲ್ಲಿ ಗುರುತಿಸಿಕೊಂಡಿರುವ ಝರಾ ನಟಿಯ ಹಾಟ್ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದ ಬೆನ್ನಲ್ಲೇ ನಟಿಯನ್ನು ಸ್ಯಾಂಡಲ್​ವುಡ್​ಗೆ ಕರೆ ತರಲಾಗಿತ್ತು. ಹಲವು ಮ್ಯೂಸಿಕ್ ವಿಡಿಯೋ, ಪ್ರತಿಷ್ಟಿತ ಸಂಸ್ಥೆಯ ಜಾಹೀರಾತುಗಳು, ಸಿನಿಮಾಗಳಲ್ಲಿ ನಟಿಸಿರುವ ಝಾರಾ ಯಸ್ಮಿನ್ ಸೂಪರ್ ಸ್ಟಾರ್ ಸಿನಿಮಾ ಮೂಲಕ ಕನ್ನಡಕ್ಕೆ ಬಂದಿದ್ದರು.ಇದೀಗ ನಟಿಯ ಹೊಸ ಸಂಗೀತ ಆಲ್ಬಂ ಯಾರಾ ದಿಲ್​ದಾರಾ ಬಿಡುಗಡೆಯಾಗಿದೆ. ಇದರಲ್ಲಿ ಮಾದಕ ಡ್ರೆಸ್​ ಮೂಲಕ ಯಾರಾ ದಿಲ್​ದಾರಾ ಹಾಡಿನ ಮೂಲಕ ಪಡ್ಡೆ ಹುಡುಗರ ನಿದ್ದೆಕೆಡಿಸಿದ್ದಾರೆ. ಇದರ ವಿಡಿಯೋ ಸಕತ್​ ಸೌಂಡ್​​ ಮಾಡುತ್ತಿದೆ. ಅಂದಹಾಗೆ ಝಾರಾ ಅವರ ಬಗ್ಗೆ ಹೇಳುವುದಾದರೆ, ಇವರು ಪ್ರತಿಭಾವಂತ ರೂಪದರ್ಶಿ ಮತ್ತು ನಟಿ. ಸಲ್ಮಾನ್ ಯೂಸುಫ್ ಖಾನ್ ಜೊತೆಗೆ ನಟಿಸಿದ ಸಂಗೀತ ಆಲ್ಬಂ 'ಕಂಧೆ ಕಾ ಟಿಲ್' ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಈ ಮ್ಯೂಸಿಕ್ ವೀಡಿಯೋದಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಹಂಗಾಮಾ ಸೃಷ್ಟಿಸಿತ್ತು. ‘ಆಯುರ್’ ಜಾಹೀರಾತು ಮೂಲಕ ಮಾಡೆಲಿಂಗ್ ಜಗತ್ತಿನಲ್ಲಿ ಝಾರಾ ಪದಾರ್ಪಣೆ ಮಾಡಿದರು. ಇದರ ನಂತರ, ಇವರು, ಹರ್ಬಲ್, ಹೋಂಡಾ, ನೋಕಿಯಾ, ಬಿಟಿಡಬ್ಲ್ಯೂ, ಹಮ್ದರ್ದ್, ಮೈಕ್ರೋಟೆಕ್ ಮತ್ತು ಜಿಯೋ ಮುಂತಾದ ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು. ಇವರನ್ನು ಮಾಡೆಲಿಂಗ್ ಜಗತ್ತಿನಲ್ಲಿ ರುಖ್ಸಾರ್ ಯಾಸ್ಮಿನ್ ಎಂದೂ ಕರೆಯುತ್ತಾರೆ. ಇವರ ಬಗ್ಗೆ ಇಷ್ಟೇ ಮುಗಿಯುವುದಿಲ್ಲ. ಝಾರಾ ಅವರ ಕೆಲಸವು ಡಿಜಿಟಲ್ ಮಾಧ್ಯಮಕ್ಕೆ ಸೀಮಿತವಾಗಿಲ್ಲ, ಅವರು , , , & , , , , ಸೇರಿದಂತೆ 30 ಕ್ಕೂ ಹೆಚ್ಚು ಬ್ರಾಂಡ್‌ಗಳಿಗೆ ಮುದ್ರಣ ಪ್ರಚಾರದ ಭಾಗವಾಗಿದ್ದಾರೆ. ಬಾಲಿವುಡ್​ ನಟಿಯ ಮದ್ವೆಯಲ್ಲಿ ವೇದಿಕೆ ಮೇಲೆ ಕಿಚ್ಚು ಹೊತ್ತಿಸಿದ ಶಿಲ್ಪಾ-ರಾಜ್​ ಕುಂದ್ರಾ: ವಿಡಿಯೋ ವೈರಲ್​ (@) ಇಷ್ಟೇ ಅಲ್ಲದೇ, ನಟಿ ತರುಣ್ ತಹಿಲಿಯಾನಿ, ಪಾಯಲ್ ಚಡ್ಡಾ, ರೋಹಿತ್ ಮತ್ತು ರಾಹುಲ್ ಮತ್ತು ಪಾಯಲ್ ಸಿಂಘಾಲ್ ಅವರಂತಹ ಪ್ರಸಿದ್ಧ ಫ್ಯಾಷನ್ ವಿನ್ಯಾಸಕರಿಗೆ ರ‍್ಯಾಂಪ್ ವಾಕ್ ಮಾಡಿದ್ದಾರೆ. ಕಾಸ್ಮೋಪಾಲಿಟನ್ ಮತ್ತು ಎಥ್ನಿಸಿಟಿಯಂತಹ ಅನೇಕ ಪ್ರಸಿದ್ಧ ನಿಯತಕಾಲಿಕೆಗಳ ಮುಖಪುಟದಲ್ಲಿ ಕಾಣಿಸಿಕೊಂಡಿದ್ದಾರೆ. ಝಾರಾ '2016 ಫೆಮಿನಾ ಸ್ಟೈಲ್ ದಿವಾ ಈಸ್ಟ್' ಪ್ರಶಸ್ತಿಯನ್ನು ಗೆದ್ದುಕೊಂಡವರು. ಇದಾಗಲೇ ಹಲವಾರು ಸಂಗೀತ ಆಲ್ಬಂಗಳಲ್ಲಿ ಕಾಣಿಸಿಕೊಂಡಿದ್ದಾರೆ. 2016 ರಲ್ಲಿ ಫಾಲಾಕ್ ಶಬ್ಬೀರ್ ಅವರ 'ಏಕ್ ಬಾರ್' ಹಾಡಿನೊಂದಿಗೆ ಝಾರಾ ಪಂಜಾಬಿ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡು ಸಕತ್​ ಸುದ್ದಿ ಮಾಡಿದರು. ಅದಾದ ಬಳಿಕ ಗುರು ರಾಂಧವಾ, ದರ್ಶನ್ ರಾವಲ್, ವಡಾಲಿ ಬ್ರದರ್ಸ್, ಪ್ರೀತ್ ಹರ್ಪಾಲ್ ಮತ್ತು ಮಾಸ್ಟರ್ ಸಲೀಂ ಅವರಂತಹ ಅನೇಕ ಗಾಯಕರ ಸಂಗೀತ ವೀಡಿಯೊಗಳಲ್ಲಿ ಕಾಣಿಸಿಕೊಂಡರು. ಮಾಡೆಲಿಂಗ್ ಮತ್ತು ನಟನೆಯ ಹೊರತಾಗಿ, ಝಾರಾ ಉದ್ಯಮಿ ಕೂಡ. ಅವರು ಸಾಫ್ಟ್‌ವೇರ್ ಸೇವಾ ಪೂರೈಕೆದಾರ ಕಂಪನಿಯಾದ ಪ್ಯಾಂಟೊಕ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಸಹ-ಸ್ಥಾಪಕಿ ಮತ್ತು ಸಹ-ಮಾಲೀಕರಾಗಿದ್ದಾರೆ. ಇದಲ್ಲದೇ ಇವರು ತಮ್ಮದೇ ಆದ ಬಟ್ಟೆ ಬ್ರಾಂಡ್ ಪ್ರೆಟಿ ರಾಕ್ ಅನ್ನು ಹೊಂದಿದ್ದಾರೆ. ಕಂಗನಾ ರಣಾವತ್​ರ 10 ಕೋಟಿಯ ಆಸ್ತಿಯ ಒಡತಿಯಾದ ನಟಿ ಮೃಣಾಲ್​ ಠಾಕೂರ್​! ಏನಿದು ವಿಷ್ಯ?