ಯಶ್‌ ಮುಂದಿನ ಸಿನ್ಮಾದ ಹೀರೋಯಿನ್‌ ಸಂಯುಕ್ತಾ ಮೆನನ್‌, ಸಖತ್‌ ಬೋಲ್ಡ್‌ & ಬ್ಯೂಟಿಫುಲ್ ಕೆಜಿಎಫ್ ಸಿನಿಮಾದ ನಂತರ ಜಗತ್ತಿನಾದ್ಯಂತ ಯಶ್‌ ಕ್ರೇಜ್ ಹೆಚ್ಚಾಗಿದೆ. ರಾಕಿಂಗ್‌ ಸ್ಟಾರ್‌ ಮುಂದಿನ ಸಿನಿಮಾ ಹೀರೋಯಿನ್ ಯಾರು ಅನ್ನೋ ಬಗ್ಗೆ ಸಾಕಷ್ಟು ಚರ್ಚೆ ನಡೀತಿದೆ. 19 ಸಿನಿಮಾದ ನಾಯಕಿ ಅಂತಾನೇ ಸುದ್ದಿಯಲ್ಲಿರೋ ಮಲಯಾಳಂ ನಟಿ ಸಂಯುಕ್ತಾ ಮೆನನ್ ಎಷ್ಟು ಕ್ಯೂಟ್ ಆಂಡ್ ಹಾಟಾಗಿದ್ದಾರೆ ನೋಡಿ.. ಕೆಜಿಎಫ್ ಸಿನಿಮಾದ ನಂತರ ಜಗತ್ತಿನಾದ್ಯಂತ ಯಶ್‌ ಕ್ರೇಜ್ ಹೆಚ್ಚಾಗಿದೆ. ರಾಕಿಂಗ್‌ ಸ್ಟಾರ್‌ ಮುಂದಿನ ಸಿನಿಮಾ ಹೀರೋಯಿನ್ ಯಾರು ಅನ್ನೋ ಬಗ್ಗೆ ಸಾಕಷ್ಟು ಚರ್ಚೆ ನಡೀತಿದೆ. 19 ಸಿನಿಮಾದ ನಾಯಕಿ ಅಂತಾನೇ ಸುದ್ದಿಯಲ್ಲಿರೋ ಮಲಯಾಳಂ ನಟಿ ಸಂಯುಕ್ತಾ ಮೆನನ್ ಎಷ್ಟು ಕ್ಯೂಟ್ ಆಂಡ್ ಹಾಟಾಗಿದ್ದಾರೆ ನೋಡಿ.. ಕೆಜಿಎಫ್ ಸಿನಿಮಾದ ನಂತರ ಜಗತ್ತಿನಾದ್ಯಂತ ಯಶ್‌ ಕ್ರೇಜ್ ಹೆಚ್ಚಾಗಿದೆ. ರಾಕಿಂಗ್‌ ಸ್ಟಾರ್‌ ಮುಂದಿನ ಸಿನಿಮಾದ ಬಗ್ಗೆ ಫ್ಯಾನ್ಸ್‌ ವಲಯದಲ್ಲಿ ಚರ್ಚೆ ಜೋರಾಗಿದೆ. ಬಾಲಿವುಡ್‌ನ ಟಾಪ್ ಹೀರೋಯಿನ್ಸ್, ತೆಲುಗಿನ ಹಾಟ್ ಹೀರೋಯಿನ್ಸ್‌ಗಳೆಲ್ಲಾ ಯಶ್ ಸಿನಿಮಾದಲ್ಲಿ ಅಭಿನಯಿಸೋಕೆ ಆಸೆ ಪಡ್ತಿದ್ದಾರೆ. ರಾಕಿ 19ನೇ ಸಿನಿಮಾಕ್ಕೆ ನಾಯಕಿ, ಮಲಯಾಳಂ ನಟಿ ಸಂಯುಕ್ತಾ ಮೆನನ್ ಎಂದು ತಿಳಿದುಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ಸಂಯುಕ್ತಾ ಮೆನನ್. ಯಾವಾಗಲೂ ತಮ್ಮ ಟ್ರೆಡಿಶನಲ್ ಹಾಗೂ ಮಾಡರ್ನ್‌ ಡ್ರೆಸ್‌ನಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಹಾಗೆಯೇ ಇತ್ತೀಚಿಗೆ ಸಖತ್ ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಸಂಯುಕ್ತಾ ಮೆನನ್ ಸದ್ಯ ದಕ್ಷಿಣಭಾರತದ ಸಿನಿಮಾಗಳಲ್ಲಿ ಟ್ರೆಂಡಿಂಗ್‌ಲ್ಲಿರೋ ಚೆಲುವೆ. 2016ರಿಂದ ಮಲೆಯಾಳಂ ಸಿನಿ ರಂಗದಲ್ಲಿ ಅಭಿನಯಿಸುತ್ತಿದ್ದಾರೆ. ಸಂಯುಕ್ತಾ ತೆಲುಗು, ತಮಿಳು ಚಿತ್ರರಂಗಕ್ಕೆ ಚಿರಪರಿಚಿತ ಹೆಸರು. ಕ್ಯಾರೆಕ್ಟರ್ ಬೇಸ್ಟ್ ಸಿನಿಮಾಗಳಲ್ಲೇ ಆಯ್ಕೆ ಮಾಡುತ್ತಾ ಬಂದಿದ್ದಾರೆ. ಸಿನಿಮಾದಲ್ಲಿ ಮಾತ್ರವಲ್ಲದೆ ರಿಯಲ್ ಲೈಫ್​ನಲ್ಲಿ ಕೂಡಾ ತುಂಬಾ ಸಿಂಪಲ್ ಆಗಿರುವ ಸಂಯುಕ್ತಾ ಅವರು ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಸಂಯುಕ್ತಾ ಮೆನನ್‌, ಕೇರಳದ ಪಾಲಕ್ಕಾಡ್‌ ಜಿಲ್ಲೆಯವರು. ಮಲಯಾಳಂನ ಪಾಪ್‌ಕಾರ್ನ್‌ ಚಿತ್ರದ ಮೂಲಕ ನಟನೆ ಆರಂಭಿಸಿದರು. ನಂತರ ತೀವಂಡಿ, ಒರು ಯಮಂದನ್ ಪ್ರೇಮಕಥಾ, ಕಲ್ಕಿ, ವೆಲ್ಲಂ, ಕಡುವ ಸೇರಿದಂತೆ ಹಲವಾರು ಯಶಸ್ವೀ ಚಿತ್ರದಲ್ಲಿ ನಟಿಸಿದ್ದಾರೆ. ವಾತಿ ಸಿನಿಮಾದಲ್ಲಿ ಧನುಷ್​ಗೆ ಜೋಡಿಯಾಗಿ ಹಳ್ಳಿಯ ಟೀಚರ್ ಪಾತ್ರದಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಭೀಮ್ಲಾ ನಾಯಕ್ (2022) ಚಿತ್ರದ ಮೂಲಕ ತೆಲುಗು ಚೊಚ್ಚಲ ಪ್ರವೇಶದ ನಂತರ , ಬಿಂಬಿಸಾರದಲ್ಲಿ ಸಬ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ನಟಿಸಿದ್ದಕ್ಕಾಗಿ ಅವರು ಪ್ರಶಂಸೆಯನ್ನು ಪಡೆದರು.(2022). ಸೌತ್​ನಲ್ಲಿ ನಟಿಗೆ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಈ ವರ್ಷದ ಆರಂಭದಲ್ಲಿ, ಸಂಯುಕ್ತಾ ತಮ್ಮ ಹೆಸರಿನಿಂದ ಮೆನನ್ ಎಂಬ ಉಪನಾಮವನ್ನು ಕೈಬಿಟ್ಟರು. 'ನಾನು ಸಮಾನತೆ, ಮಾನವೀಯತೆ ಮತ್ತು ಪ್ರೀತಿಯನ್ನು ಸುತ್ತಲೂ ನೋಡಲು ಬಯಸುತ್ತೇನೆ. ಹೀಗಾಗಿ ಉಪನಾಮವನ್ನು ಇಟ್ಟುಕೊಳ್ಳುವುದು ನಾನು ಬಯಸಿದ್ದಕ್ಕೆ ಬಹಳ ವಿರೋಧಾತ್ಮಕವಾಗಿದೆ' ಎಂದು ಹೇಳಿದ್ದರು. ಗೀತು ಮೋಹನ್‌ ದಾಸ್‌ ಅವರ ಯಶ್‌ 19 ಸಿನಿಮಾದಲ್ಲಿ ಟೊವಿನೋ ಥಾಮಸ್‌, ಆಸಿಫ್ ಅಲಿ, ರಾಣಾ ದಗ್ಗುಬಾಟಿ ಮತ್ತು ಜಾನ್ ಅಬ್ರಹಾಂ ಸಹ ಅಭಿನಯಿಸಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಆದರೆ ಈ ಎಲ್ಲದರ ಬಗ್ಗೆ ಚಿತ್ರತಂಡವೇ ಅಧಿಕೃತ ಮಾಹಿತಿ ನೀಡಬೇಕಿದೆ. ಶೀಘ್ರದಲ್ಲಿ ಚಿತ್ರದ ಬಗ್ಗೆ ಅಪ್ಡೇಡ್‌ ಸಿಗುವ ಸಾಧ್ಯತೆಯಿದೆ.