ಹೊಸ ಫೋಟೋ ಶೂಟ್ ಮಾಡಿಸಿಕೊಂಡ ಚೈತ್ರಾ ಆಚಾರ್, ಏನ್ ಲುಕ್ ಗುರು ಅಂದ್ರು ಫ್ಯಾನ್ಸ್! ಕನ್ನಡ ಸಿನಿಮಾರಂಗದಲ್ಲಿ ಹೊಸ ಸೆನ್ಸೇಶನ್ ಹುಟ್ಟು ಹಾಕಿದ ನಟಿ ಚೈತ್ರ ಆಚಾರ್ ತಮ್ಮ ಹೊಸ ಫೋಟೋ ಶೂಟ್ ಮೂಲಕ ಇದೀಗ ಭಾರಿ ಸದ್ದು ಮಾಡುತ್ತಿದ್ದಾರೆ. ಕನ್ನಡ ಸಿನಿಮಾರಂಗದಲ್ಲಿ ಹೊಸ ಸೆನ್ಸೇಶನ್ ಹುಟ್ಟು ಹಾಕಿದ ನಟಿ ಚೈತ್ರ ಆಚಾರ್ ತಮ್ಮ ಹೊಸ ಫೋಟೋ ಶೂಟ್ ಮೂಲಕ ಇದೀಗ ಭಾರಿ ಸದ್ದು ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹೊಸ ಸೆನ್ಸೇಶನ್ ಕ್ರಿಯೇಟ್ ಮಾಡಿದ ನಟಿ ಚೈತ್ರ ಆಚಾರ್ ( ), ಸದಾ ತಮ್ಮ ಬೋಲ್ಡ್ ಫೊಟೋ ಶೂಟ್ ಮೂಲಕವೇ ಸುದ್ದಿ ಮಾಡುತ್ತಿರುತ್ತಾರೆ. ಇದೀಗ ಮತ್ತೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ ಚೈತ್ರ ಆಚಾರ್. ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ, ಟೋಬಿ, ಮಹಿರಾ, ಆ ದೃಶ್ಯ ಮುಂತಾದ ಸಿನಿಮಾಗಳ ಮೂಲಕ ಕನ್ನಡ ಸಿನಿರಸಿಕರ ನೆಚ್ಚಿನ ನಟಿಯಾಗಿ ರೂಪುಗೊಂಡಿರುವಚೈತ್ರ ಆಚಾರ್,ತಮ್ಮ ಹಾಡು, ಡ್ಯಾನ್ಸ್, ನಟನೆಯ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಕಪ್ಪು ಬಣ್ಣದ ಹೈ ಸ್ಲಿಟ್ ಪ್ಯಾಂಟ್ ಜೊತೆಗೆ, ಕಪ್ಪು ಬಣ್ಣದ ಡೀಪ್ ನೆಕ್ ಬ್ಲೌಸ್, ಜೊತೆಗೆ ಓವರ್ ಕೋಟ್ ಧರಿಸಿದ್ದಾರೆ. ಕಿಹೊಯೊನ ಇಯರಿಂಗ್ಸ್‌ ಧರಿಸಿದ್ದಾರೆ. ಇವರ ಭಾವ ಭಂಗಿ ನೋಡಿದ್ರೆ, ಯಾವುದೇ ಹಾಲಿವುಡ್, ಬಾಲಿವುಡ್ ನಟಿಯರಿಗೆ ಕಮ್ಮಿ ಇಲ್ಲ ಎಂಬಂತೆ ಬೋಲ್ಡ್ ಆಗಿ ಪೋಸ್ ( ) ನೀಡಿದ್ದಾರೆ. ಕಿರಣ್ ನಾಯ್ಡು ಸೆರೆ ಹಿಡಿದ ಈ ಸುಂದರ ಫೋಟೋದಲ್ಲಿ ಚೈತ್ರಾ ಅವರಿಗೆ ಸುಬು ರಾವ್ ಮೇಕಪ್ ಮತ್ತು ಹೇರ್ ಸ್ಟೈಲ್ ಮಾಡಿದ್ದಾರೆ. ಪಾಪಾ ಪ್ಯಾಂಟ್ಸ್ ಸ್ಟೈಲ್ ನಲ್ಲಿ ಚೈತ್ರಾ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಚೈತ್ರ ಆಚಾರ್ ಹೊಸ ಫೊಟೋ ಶೂಟ್ ನೋಡಿ ಕೇವಲ ಅಭಿಮಾನಿಗಳು ಮಾತ್ರವಲ್ಲ ಸೆಲೆಬ್ರಿಟೀಸ್ ಗಳು () ಸಹ ಮೆಚ್ಚಿಕೊಂಡು ಕಾಮೆಂಟ್ ಮಾಡಿದ್ದಾರೆ. ವಾಸುಕಿ ವೈಭವ್ ಹಾರ್ಟ್ ಗಳನ್ನು ನೀಡಿದ್ರೆ, ಹಿತಾ ಚಂದ್ರಶೇಖರ್ ಉಫ್ ಎಂದು ಫೈರ್ ಇಮೋಜಿ ಹಾಕಿದ್ದಾರೆ. ಇನ್ನು ನಟಿ ಶ್ರುತಿ ಹರಿಹರನ್ () ಚೈ ತುಂಬಾನೆ ಸ್ಟನ್ನಿಂಗ್ ಆಗಿ ಕಾಣಿಸ್ತಿದ್ದೀಯಾ. ಈ ಫೋಟೋಗಳ ಎಲ್ಲಾ ಸೀರೀಸ್ ತುಂಬಾನೆ ಅದ್ಭುತವಾಗಿದೆ, ಐ ಲವ್ ಇಟ್ ಎಂದು ಹೇಳಿದ್ರೆ, ಮಲಯಾಲಂ ನಟಿ ಪರ್ಲ್ ಮಾನಿ ಈ ಫೋಟೋಗಳನ್ನು ನೋಡಿದ್ರೆ ಮನು ಪ್ಯಾರಲಲ್ ಪ್ರಪಂಚದಿಂದ ಬಂದು ಬಿಡಬಹುದು ಎಂದಿದ್ದಾರೆ. ಬೆಂಗಳೂರಿನ ಬೆಡಗಿಚೈತ್ರಾ ಆಚಾರ್2019 ರಲ್ಲಿ ಮಾಹಿರಾ () ಸಿನಿಮಾ ಮೂಲಕ ಕನ್ನಡ ಸಿನಿ ಲೋಕ ಪ್ರವೇಶಿಸಿದರು. ಬಳಿಕ, ಗಿಲ್ಕಿ, ತಲೆದಂಡ, ಆ ದೃಶ್ಯ ಸಿನಿಮಾದಲ್ಲಿ ನಟಿಸಿದರು. ಆದರೆ ಇವು ಹೆಚ್ಚು ಲೈಮ್ ಲೈಟ್ ಗೆ ಬಂದದ್ದು, ಟೋಬಿ ಮತ್ತು ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ ಮೂಲಕ. ಬಾಲ್ಯದಲ್ಲೇ ಕರ್ನಾಟಿಕ್ ಸಂಗೀತ ಕಲಿತಿರುವ ಚೈತ್ರ, ಅಪ್ರತಿಮ ಗಾಯಕಿ () ಹೌದು. ಇವರು ರಿಷಭ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ ನಟಿಸಿರುವ ಗರುಡ ಗಮನ ವೃಷಭ ವಾಹನ ಸಿನಿಮಾದ ಸೋಜುಗದ ಸೂಜು ಮಲ್ಲಿಗೆ ಹಾಡು ಹಾಡಿದ್ದರು. ಈ ಹಾಡು ಜನಪ್ರಿಯತೆ ಪಡೆದಿತ್ತು.