ತಿರುಪತಿ- ಶ್ರೀಕಾಳಹಸ್ತಿಗೆ ಭೇಟಿ ನೀಡಿದ ದರ್ಶನ್ ಮತ್ತು ವಿಜಯಲಕ್ಷ್ಮಿ; ಫ್ಯಾಮಿಲಿ ಫೋಟೋ ನೋಡಿ ನೆಟ್ಟಿಗರು ಹ್ಯಾಪಿ! ಹೊಸ ಸಿನಿಮಾ ಪ್ರಾಜೆಕ್ಟ್ ಶುರು ಮಾಡುವ ಮುನ್ನ ತಿಮ್ಮಪನ ದರ್ಶನ ಮಾಡಿದ ದರ್ಶನ್. ಫ್ಯಾಮಿಲಿ ಫೋಟೋ ನೋಡಿ ನೆಟ್ಟಿಗರು ಖುಷಿ... ಹೊಸ ಸಿನಿಮಾ ಪ್ರಾಜೆಕ್ಟ್ ಶುರು ಮಾಡುವ ಮುನ್ನ ತಿಮ್ಮಪನ ದರ್ಶನ ಮಾಡಿದ ದರ್ಶನ್. ಫ್ಯಾಮಿಲಿ ಫೋಟೋ ನೋಡಿ ನೆಟ್ಟಿಗರು ಖುಷಿ... 'ಕಾಟೇರ' ಸಿನಿಮಾ ಯಶಸ್ಸಿನ ನಂತರ ನಟ ದರ್ಶನ್ ಮತ್ತೊಂದು ಸಿನಿಮಾ ಪ್ರಾಜೆಕ್ಟ್ ಶುರು ಮಾಡುವ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಡೆವಿಲ್‌ ದಿ ಹೀರೋ ಸಿನಿಮಾ ಚಿತ್ರೀಕರಣ ಶುರು ಮಾಡು ಮುನ್ನ ನಟ ದರ್ಶನ್ ತಿರುಪತಿಗೆ ಭೇಟಿ ನೀಡಿದ್ದಾರೆ. ಈ ಸಿನಿಮಾದಲ್ಲಿ ಪ್ರಕಾಶ್‌ ವೀರ್‌ ಜೊತೆ ಕೈ ಜೋಡಿಸಿದ್ದಾರೆ. ತಿರುಪತಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ದರ್ಶನ್ ಕಾಳಹಸ್ತಿಗೆ ಭೇಟಿ ನೀಡಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ ವಿನೀಶ್‌ ಕೂಡ ಪೂಜೆಯಲ್ಲಿ ಭಾಗಿಯಾಗಿದ್ದರು. ವಿನೀಶ್ ದರ್ಶನ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಖಾಸಗಿ ಹೊಂದಿದ್ದು, ತಂದೆ ಅಷ್ಟೆ ಅಭಿಮಾನಿಗಳ ಪ್ರೀತಿ ಗಳಿಸಿದ್ದಾರೆ. ಸಿನಿಮಾ ಮಾಡಲಿ ಎಂದು ಫ್ಯಾನ್ಸ್‌ ಒತ್ತಾಯಿಸುತ್ತಾರೆ. ಇನ್ನು ವಿಜಯಲಕ್ಷ್ಮಿ ವೈಯಕ್ತಿಕ ವಿಚಾರವಾಗಿ ಪವಿತ್ರ ಗೌಡ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಸಣ್ಣ ಮಾತಿನ ಚಕಾಮಕಿ ಶುರುವಾಗಿತ್ತು. ನೂರಾರು ರೀತಿ ತಿರುವುಗಳನ್ನು ನೆಟ್ಟಿಗರು ನೀಡಿದ್ದರು. ವಿವಾದಗಳ ನಡುವೆಯೂ ಇಡೀ ಫ್ಯಾಮಿಲಿಯನ್ನು ಒಟ್ಟಿಗೆ ನೋಡಿರುವುದಕ್ಕೆ ಅಭಿಮಾನಿಗಳು ಖುಷಿಯಾಗಿದ್ದಾರೆ. ನಮ್ಮ ಬಾಸ್‌ ಮತ್ತು ಅತ್ತೆಗೆ ಸೂಪರ್ ಆಗಿದ್ದಾರೆ ಯಾರೂ ಕಣ್ಣು ಹಾಕಬೇಡಿ. ತಿರುಪತಿ ತಿಮ್ಮಪ್ಪನ ಕೃಪೆಯಿಂದ ಇನ್ನು ಚೆನ್ನಾಗಿರುತ್ತಾರೆ ಅಂತ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.