ಅಮೃತಧಾರೆ ಆನಂದ್​ಗೆ ಹುಟ್ಟುಹಬ್ಬದ ಸಂಭ್ರಮ: ನೋವನ್ನುಂಡು ಎಲ್ಲರ ನಗಿಸುವ ನಟನ ಒಂದಿಷ್ಟು ಮಾಹಿತಿ... ಅಮೃತಧಾರೆ ಸೀರಿಯಲ್​ ನಟ ಆನಂದ್​ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇವರ ರಿಯಲ್​ ಲೈಫ್​ ಕೆಲವೊಂದು ಇಂಟರೆಸ್ಟಿಂಗ್​ ವಿಷ್ಯಗಳು ಇಲ್ಲಿವೆ... ಗೆಳೆಯ ಆನಂದ್​ ಎಂದರೆ ಸಾಕು, ಸೀರಿಯಲ್​ ಪ್ರಿಯರಿಗೆ ಮೊದಲು ನೆನಪಾಗುವುದೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಅಮೃತಧಾರೆ ಸೀರಿಯಲ್​. ಗೌತಮ್​ ಮತ್ತು ಆನಂದ್​ ಅವರ ಗೆಳೆತನಕ್ಕೆ ಸಾಟಿಯೇ ಇಲ್ಲ. ಇದ್ದರೆ ಇಂಥ ಗೆಳೆಯರು ಇರಬೇಕು ಎನ್ನುವಷ್ಟರ ಮಟ್ಟಿಗೆ ಇವರ ಪ್ರೀತಿ ಬೆಳೆದಿದೆ. ಗೆಳೆಯ ಗೌತಮ್​ ಮತ್ತು ಆತನ ಪತ್ನಿ ಭೂಮಿಕಾ ಇಬ್ಬರನ್ನೂ ಒಂದು ಮಾಡಲು ಆನಂದ್​ ಮಾಡುವ ಪ್ಲ್ಯಾನ್​ಗಳು, ಗೌತಮ್​ಗೆ ಕಾಲೆಳೆಯುವ ರೀತಿ ಎಲ್ಲವೂ ಆನಂದ್​ ಅವರ ಅಪೂರ್ವ ಅಭಿನಯಕ್ಕೆ ಸಾಕ್ಷಿಯಾಗಿದೆ. ಇವರ ನಟನೆಯನ್ನು ನೋಡಿ ಎಲ್ಲರೂ ತಲೆದೂಗುತ್ತಿದ್ದಾರೆ. ಸಿಲ್ಲಿ ಲಲ್ಲಿ' ಧಾರಾವಾಹಿ ಮೂಲಕ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದ ಆನಂದ್, ಇದೀಗ ಅಮೃತಧಾರೆಯಲ್ಲಿಯೂ ಎಲ್ಲರನ್ನೂ ನಗಿಸುತ್ತಿದ್ದಾರೆ. ವಿಶೇಷವೆಂದರೆ ಇವರ ಅಸಲಿ ಹೆಸರು ಕೂಡ ಆನಂದ್​. ಇಂದು ಇವರಿಗೆ ಹುಟ್ಟುಹಬ್ಬದ ಸಂಭ್ರಮ. ಆನಂದ್​ ಅವರು ಪತ್ನಿ ಚೈತ್ರಾ ಜೊತೆಗೆ 'ಜೋಡಿ ನಂ 1 ಸೀಸನ್ 2' ಶೋನಲ್ಲಿ ಭಾಗವಹಿಸಿದ್ದಾರೆ. ತೆರೆ ಮೇಲೆ ಎಲ್ಲರನ್ನೂ ಹಾಸ್ಯದ ಕಡಲಿನಲ್ಲಿ ತೇಲಿಸುವ ಅದೆಷ್ಟೋ ನಟರ ಬಾಳಲ್ಲಿ ನೋವಿನ ಸರಮಾಲೆಗಳೇ ಇರುತ್ತವೆ. ಎಷ್ಟೋ ನಟರು ಹಿಂದೊಮ್ಮೆ ತುತ್ತು ಅನ್ನಕ್ಕೂ ಪರದಾಡಿದ್ದು ಇದೆ. ಇನ್ನು ಕೆಲವರು ಬಾಲ್ಯದಿಂದಲೂ ನೋವನ್ನೇ ಹೊತ್ತು ಬಂದಿದ್ದರೆ, ಮತ್ತೆ ಕೆಲವರಿಗೆ ಕಹಿ ಘಟನೆಗಳಿಂದ ಜೀವನ ತತ್ತರಿಸಿ ಹೋಗಿರುವುದೂ ಉಂಟು. ಬಹುತೇಕ ಎಲ್ಲರ ಬಾಳಿನಲ್ಲಿಯೂ ಈ ಏಳು-ಬೀಳುಗಳು ಸಹಜವೇ. ಸಂತು-ಪಂತು ಬಿಗ್​ಬಾಸ್​​ ಪಯಣ ಹೇಗಿತ್ತು? ತುಕಾಲಿ ಮಾತು ಕೇಳಿದ್ರೆ ಬಿದ್ದೂ ಬಿದ್ದೂ ನಗ್ತೀರಾ! ಅದೇ ರೀತಿ ಎಲ್ಲರನ್ನೂ ನಗಿಸುವ ಆನಂದ್​ ಅವರ ಜೀವನದಲ್ಲಿಯೂ ಬಹು ದೊಡ್ಡ ಆಘಾತವೇ ನಡೆದಿತ್ತು. ಪತ್ನಿ ಕೊರೋನಾ ಸಂದರ್ಭದಲ್ಲಿ ಸಾವು ಬದುಕಿನ ಬಗ್ಗೆ ಹೋರಾಟ ಮಾಡಿದ್ದರು. ಅದನ್ನು ಆನಂದ್​ ಈ ಹಿಂದೆ ನೆನಪಿಸಿಕೊಂಡಿದ್ದರು. ಇದೇ ವೇಳೆ, ನಿಜ ಜೀವನದಲ್ಲಿ ಏಳುಬೀಳು ಕಂಡವರು ಆನಂದ್​ ಮತ್ತು ಚೈತ್ರಾ. ಚೈತ್ರಾ ಅವರು ದಪ್ಪ ಇರುವ ಕಾರಣದಿಂದ ಅವರಿಗೆ ಮಕ್ಕಳಾಗುವುದಿಲ್ಲ ಎಂದು ಆನಂದ್​ ಅವರ ಮನೆಯವರು ಮದುವೆಗೆ ಒಪ್ಪದಿದ್ದರೆ, ಅವರು ಕಲಾವಿದ ಎಂದು ತಮ್ಮ ಮನೆಯಲ್ಲಿ ಮದುವೆಗೆ ಒಪ್ಪದನ್ನು ನೆನೆದು ಚೈತ್ರಾ ಕಣ್ಣೀರು ಹಾಕಿದ್ದರು. ಇದೀಗ ಈ ಜೋಡಿ ಆರು ವರ್ಷಗಳ ದಾಂಪತ್ಯ ಜೀವನವನ್ನು ಪುಟ್ಟ ಕಂದನ ಜೊತೆ ಆನಂದದಿಂದ ಕಳೆಯುತ್ತಿದೆ. ಈ ಹಿಂದೆ ಚೈತ್ರಾ, ಕೊರೋನಾ ಟೈಮ್‌ನಲ್ಲಿ ಸಾವು ಬದುಕಿನ ಬಗ್ಗೆ ಹೋರಾಟ ನಡೆಸಿದ್ದರು. ಆನಂದ್​ ಅವರ ತಾಯಿ ಕೊರೋನಾದಿಂದ ಒಂದೆಡೆ ಆಸ್ಪತ್ರೆಗೆ ದಾಖಲಾಗಿದ್ದರೆ, ಇನ್ನೊಂದೆಡೆ ಪತ್ನಿ ಚೈತ್ರಾ. ಇವರಿಬ್ಬರನ್ನೂ ಉಳಿಸಿಕೊಳ್ಳಲು ಆನಂದ್​ ಹೆಣಗಾಡಿದ್ದರು. ಕೊನೆಗೆ ಇಬ್ಬರೂ ಜೀವಾಪಾಯದಿಂದ ಪಾರಾದಾಗ ಖುದ್ದು ವೈದ್ಯರೂ ಚಕಿತಪಟ್ಟುಕೊಂಡಿದ್ದರಂತೆ. ಇದು ಕೂಡ ಪತ್ನಿಯ ಮರುಜನ್ಮ ಎಂದಿದ್ದರು ಆನಂದ್​. ಜೋಡಿ ನಂಬರ್​ 1 ವೇದಿಕೆಯಲ್ಲಿ ಹಲವು ಟಾಸ್ಕ್​ಗಳಲ್ಲಿ ಈ ಜೋಡಿ ನಕ್ಕು ನಗಿಸಿದ್ದು ಇದೆ. ಅದರಲ್ಲಿ ಒಂದು ಆನಂದ್​ ಅವರು ಪತ್ನಿಯನ್ನು ಮುಟ್ಟದೇ ಐದು ಸಲ್​ ಕಿಸ್​ ಮಾಡಬೇಕು ಎನ್ನುವುದು. ಅದೇ ರೀತಿ ಅವರ ಪತ್ನಿ ಕವಿತಾ ಕೂಡ ಪತಿಗೆ ಇದೇ ರೀತಿ ಕಿಸ್​ ಮಾಡಬೇಕು. ಈ ಟಾಸ್ಕ್​ ಬಗ್ಗೆ ನಿರೂಪಕಿ ಶ್ವೇತಾ ಹೇಳುತ್ತಿದ್ದಂತೆಯೇ ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದ್ದರು. ಕೊನೆಗೆ ಟಾಸ್ಕ್​ನಂತೆ ಆನಂದ್​ ಅವರು ತಮ್ಮ ಪತ್ನಿಯನ್ನು ಮುಟ್ಟದೇ ಕಿಸ್​ ಮಾಡುವಲ್ಲಿ ಸಕ್ಸಸ್​ ಆಗಿದ್ದರೆ, ಅತ್ತ ಕವಿತಾ ಕೂಡ ಈ ಟಾಸ್ಕ್​ ಅನ್ನು ಪೂರೈಸಿದ್ದರು. ಇವರಿಬ್ಬರೂ ಹೀಗೆ ಪರಸ್ಪರ ಪ್ರೀತಿಯಿಂದ ಮುತ್ತಿಕ್ಕುತ್ತಿರುವುದನ್ನು ನೋಡಿ ಅವರ ಪ್ರೀತಿಗೆ ಜಡ್ಜ್​ಸ್​ ಕೂಡ ಭಾವುಕರಾಗಿದ್ದರು.ಕಾರ್ತಿಕ್​ ಲೈಫ್​ ಪಾರ್ಟನರ್​ ಇವ್ರೇನಾ? 'ಎಸ್'​ ಎಂದ ಅಮ್ಮ! ಕುಣಿದು ಕುಪ್ಪಳಿಸ್ತಿರೋ ಫ್ಯಾನ್ಸ್​ (@)