ರೆಡ್‌ ಗೌನ್‌ನಲ್ಲಿ ಕಂಗೊಳಿಸಿದ ಐರಾವತ ಬೆಡಗಿ: ಫೋಟೋಗ್ರಾಫರ್ಸ್‌ಗೆ ಊರ್ವಶಿ ಹೀಗಾ ಆಶೀರ್ವಾದ ಮಾಡೋದು..! ಕನ್ನಡದ ಐರಾವತ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ಬಾಲಿವುಡ್‌ ನಟಿ ಊರ್ವಶಿ ರೌಟೇಲಾ ಇತ್ತೀಚೆಗೆ ಏರ್‌ಪೋರ್ಟ್‌ನಲ್ಲಿ ರೆಡ್ ಗೌನ್ ಧರಿಸಿ ಕ್ಯಾಮೆರಾಗೆ ಭರ್ಜರಿಯಾಗಿ ಪೋಸ್‌ ನೀಡಿದ್ದಾರೆ. ಹಾಗೆಯೇ ವ್ಯಾಲೆಂಟೈನ್ಸ್ ಡೇ ಬಗ್ಗೆಯೂ ಮಾತನಾಡಿದ್ದಾರೆ. ಕನ್ನಡದ ಐರಾವತ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ಬಾಲಿವುಡ್‌ ನಟಿ ಊರ್ವಶಿ ರೌಟೇಲಾ ಇತ್ತೀಚೆಗೆ ಏರ್‌ಪೋರ್ಟ್‌ನಲ್ಲಿ ರೆಡ್ ಗೌನ್ ಧರಿಸಿ ಕ್ಯಾಮೆರಾಗೆ ಭರ್ಜರಿಯಾಗಿ ಪೋಸ್‌ ನೀಡಿದ್ದಾರೆ. ಹಾಗೆಯೇ ವ್ಯಾಲೆಂಟೈನ್ಸ್ ಡೇ ಬಗ್ಗೆಯೂ ಮಾತನಾಡಿದ್ದಾರೆ. ಬಾಲಿವುಡ್‌ ನಟಿ ಊರ್ವಶಿ ರೌಟೇಲಾ ಇತ್ತೀಚೆಗೆ ಆಕರ್ಷಕವಾದ ಮಿನುಗುವ ರೆಡ್ ಗೌನ್ ಧರಿಸಿಕೊಂಡು ಫೋಟೋಶೂಟ್‌ ಮಾಡಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಟಿ ಊರ್ವಶಿ ರೆಡ್ ಗೌನ್‌ನಲ್ಲಿ ಏರ್‌ಪೋರ್ಟ್‌ನಲ್ಲಿ ತೆಗೆಸಿಕೊಂಡಿರುವ ಫೋಟೋಗಳಲ್ಲಿ ಆಕರ್ಷಕವಾಗಿ ಹಾಗೂ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಐರಾವತ ಬೆಡಗಿ ಊರ್ವಶಿಯ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದು, ಸದ್ಯ ವೈರಲ್‌ ಆಗಿ ಒಂದೂವರೆ ಲಕ್ಷಕ್ಕೂ ಹೆಚ್ಚು ಲೈಕ್ಸ್‌ ಪಡೆದಿದ್ದಾರೆ. ನಟಿ ಊರ್ವಶಿ ತಮ್ಮ ಇನ್‌ಸ್ಟಾಗ್ರಾಮ್‌ನ ಪೋಸ್ಟ್‌ ನೋಡುತ್ತಾಯಿದ್ದರೇ ಸುಂದರವಾದ ಕೆಂಬಣ್ಣದ ಉಡುಪಿನಲ್ಲಿಯೇ ಪ್ರೇಮಿಗಳ ದಿನದ ಸಿದ್ಧತೆಯಲ್ಲಿರುವಂತೆ ಕಂಡುಬಂದಿದೆ. ಊರ್ವಶಿ ರೌಟೇಲಾ ಇತ್ತೀಚೆಗೆ ಏರ್‌ಪೋರ್ಟ್‌ನಲ್ಲಿ ಕಾಣಿಸಿದ್ದು ಆ ಸಮಯದಲ್ಲಿ ಪಾಪ್ಪರಾಜಿಗಳ ಜೊತೆ ಮಾತನಾಡಿದ್ದು, ಹಾಗೆಯೇ ನಟಿ ವ್ಯಾಲೆಂಟೈನ್ಸ್ ಡೇ ಬಗ್ಗೆಯೂ ಮಾತನಾಡಿದ್ದಾರೆ. ಬಹುಭಾಷಾ ನಟಿ ಊರ್ವಶಿ ಏರ್‌ಪೋರ್ಟ್‌ನಲ್ಲಿ ಪಾಪ್ಪರಾಜಿಗಳ ಜೊತೆಗೆ ಟೆಡ್ಡಿ ಡೇ, ರೋಸ್ ಡೇ ಬಗ್ಗೆಯೂ ಮಾತನಾಡುತ್ತಾ ಆಗ ಫೋಟೋಗ್ರಾಫರ್ಸ್‌ ತಮಗೆ ಗರ್ಲ್‌ಫ್ರೆಂಡ್ಸ್‌ ಇಲ್ಲವೆಂದು ಹೇಳಿದ್ದಾರೆ. ನಟಿ ಊರ್ವಶಿ ಫೋಟೋಗ್ರಾಫರ್ಸ್‌ಗೆ ಈ ಸಲ ನಿಮಗೆ ಗರ್ಲ್​ಫ್ರೆಂಡ್ ಸಿಗುತ್ತಾಳೆ. ನನ್ನ ಆಶೀರ್ವಾದ ನಿಮಗಿದೆ ಎಂದು ಹೇಳಿದ್ದಾರೆ. ಆಗ ನಟಿಯ ಮಾತನ್ನು ಕೇಳಿ ಎಲ್ಲರೂ ಜೋರಾಗಿ ನಕ್ಕಿದ್ದಾರೆ. ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅಪಾರ ಅಭಿಮಾನಿಗಳನ್ನು ಹೊಂದಿರುವ ಚೆಲುವೆ, ಭಾರತ ಮಾತ್ರವಲ್ಲ ವಿದೇಶದಲ್ಲಿಯೂ ಈ ನಟಿ ಅಭಿಮಾನಿಗಳನ್ನು ಹೊಂದಿದ್ದಾರೆ. ಸ್ಪೆಷಲ್ ಸಾಂಗ್​ಗಳಲ್ಲಿಯೂ ಅವರು ನಟಿಸಿದ್ದಾರೆ.