ಬೆಡ್‌ರೂಮ್‌ ಸೀನ್‌ ಮಾಡಲ್ಲ, ಲಿಪ್‌ಲಾಕ್‌ ಅಗೋದೆ ಇಲ್ಲ; ಕೋಟಿ ಕೊಟ್ರೂ ಬೇಡ ಅಂತಾರೆ ಪ್ರಿಯಾಂಕಾ ಮೋಹನ್! ಸೂಪರ್ ಹಿಟ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ ಮೋಹನ್ ಬೆಡ್‌ ರೂಮ್‌ ಸೀನ್‌ಗೆ ಬಿಗ್ ಎಂದು ಹೇಳಿದ್ದಾರೆ. ಸೂಪರ್ ಹಿಟ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ ಮೋಹನ್ ಬೆಡ್‌ ರೂಮ್‌ ಸೀನ್‌ಗೆ ಬಿಗ್ ಎಂದು ಹೇಳಿದ್ದಾರೆ. ನಟ ದನುಷ್ ಮತ್ತು ನಟಿ ಪ್ರಿಯಾಂಕಾ ಅರುಲ್ ಮೋಹನ್‌ ನಟನೆಯ ಕ್ಯಾಪ್ಟನ್ ಮಿಲ್ಲರ್ ಬ್ಲಾಕ್ ಬಸ್ಟರ್ ಹಿಟ್‌ ಕಂಡ 2024ನೇ ಮೊದಲ ಚಿತ್ರ. ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ 29 ವರ್ಷದ ಪ್ರಿಯಾಂಕಾ ಆನ್‌ಸ್ಕ್ರೀನ್‌ನಲ್ಲಿ ಕಿಸ್ ಮಾಡಲು ಇಚ್ಚಿಸುತ್ತಾರಾ ಇಲ್ವಾ ಎಂದು ಪ್ರಶ್ನಿಸಲಾಗಿತ್ತು. 'ಈ ವಿಚಾರದ ಬಗ್ಗೆ ಹೇಳಲು ನನಗೆ ಏನೂ ಇಲ್ಲ. ಆದರೆ ಚಿತ್ರಕಥೆ ಎಷ್ಟೇ ಡಿಮ್ಯಾಂಡ್ ಮಾಡಿದರು ನಾನು ಒಪ್ಪಿಕೊಳ್ಳುವುದಿಲ್ಲ. ನನಗೆ ಕಿಸ್ ಮಾಡಲು ಆಗಲ್ಲ' ಎಂದು ಪ್ರಿಯಾಂಕಾ ಹೇಳಿದ್ದಾರೆ. 'ನಿರ್ಮಾಪಕರು ನನಗೆ ಎಷ್ಟೇ ಕೋಟಿ ಕೊಟ್ಟರು ಸಿನಿಮಾದಲ್ಲಿ ಲಿಪ್‌ಲಾಕ್‌ ಮಾಡಲ್ಲ. ಅಷ್ಟೇ ಅಲ್ಲ ಬೆಡ್‌ ರೂಮ್‌ ದೃಶ್ಯಗಳಲ್ಲಿ ಅಭಿನಯಿಸುವುದಿಲ್ಲ' ಎಂದಿದ್ದಾರೆ. ಪ್ರಮುಖವಾಗಿ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿರುವ ಪ್ರಿಯಾಂಕಾ, 2019ರಲ್ಲಿ ಒಂದು ಕಥೆ ಹೇಳಾ ಎಂಬ ಕನ್ನಡ ಸಿನಿಮಾದಲ್ಲಿ ನಟಸಿದ್ದರು. ಸುಮಾರು 250 ಪೋಸ್ಟ್‌ ಅಪ್ಲೋಡ್ ಮಾಡಿರುವ ಪ್ರಿಯಾಂಕಾ ಮೋಹನ್‌ ಇನ್‌ಸ್ಟಾಗ್ರಾಂನಲ್ಲಿ 5 ಮಿಲಿಯನ್ ಫಾಲೋವರ್ಸ್‌ನ ಹೊಂದಿದ್ದಾರೆ.