ನಟಿ ರಾಗಿಣಿ ಇ-ಮೇಲ್ ಬಿಡುಗಡೆ; ಶಾಕ್ ಆದ ನೆಟ್ಟಿಗರು! ಸಿನಿಮಾ ಟೈಟಲ್ ಕೇಳಿ ಶಾಕ್ ಆದ ಫ್ಯಾನ್ಸ್‌. ಸಲಹೆ ಕೊಡುವ ಮುನ್ನ ಸುದ್ದಿ ಓದಲೇ ಬೇಕು.... ಸಿನಿಮಾ ಟೈಟಲ್ ಕೇಳಿ ಶಾಕ್ ಆದ ಫ್ಯಾನ್ಸ್‌. ಸಲಹೆ ಕೊಡುವ ಮುನ್ನ ಸುದ್ದಿ ಓದಲೇ ಬೇಕು.... ಕನ್ನಡ ಚಿತ್ರರಂಗದ ತುಪ್ಪದ ಹುಡುಗಿ, ಬೋಲ್ಡ್‌ ಚೆಲುವೆ ರಾಗಿಣಿ ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾ ಪ್ರಾಜೆಕ್ಟ್‌ಗಳಿಗೆ ಸಹಿ ಹಾಕಿ ಬ್ಯುಸಿಯಾಗಿದ್ದಾರೆ. ರಾಗಿಣಿ ದ್ವಿವೇದಿ ನಾಯಕಿಯಾಗಿ ನಟಿಸಿರುವ ‘ಇ-ಮೇಲ್‌’ ಚಿತ್ರದ ಟ್ರೇಲರ್ ಬಂದಿದೆ. ಎಸ್‌ ಆರ್‌ ರಾಜನ್‌ ನಿರ್ದೇಶಿಸಿ, ನಿರ್ಮಿಸಿರುವ ಚಿತ್ರವಿದು. ಸಿರಿ ಮ್ಯೂಸಿಕ್‌ ಯೂಟ್ಯೂಬ್‌ನಲ್ಲಿ ಚಿತ್ರದ ಟ್ರೇಲರ್‌ ನೋಡಬಹುದು. ಫೆ.9ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಈ ಕುರಿತು ರಾಗಿಣಿ, ‘ಇದು ಮಹಿಳಾ ಪ್ರಧಾನ ಸಿನಿಮಾ. '‘ಇ-ಮೇಲ್‌’ ಮೂಲಕ ನಡೆಯುವ ಸ್ಕ್ಯಾಮ್‌ ಕತೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ತಾಂತ್ರಿಕವಾಗಿ ತುಂಬಾ ಚೆನ್ನಾಗಿದೆ’ ಎಂದು ರಾಗಿಣಿ ಹೇಳಿದ್ದಾರೆ. ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಮುರುಗ ಅಶೋಕ್‌ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ‘ನನಗೆ ಇದು ಮೊದಲ ಕನ್ನಡ ಸಿನಿಮಾ. ನಾನು ಯಾವ ಭಾಷೆಯಲ್ಲಿ ಸಿನಿಮಾ ಮಾಡಿದರೂ ಆ ಭಾಷೆಯನ್ನು ಕಲಿಯುತ್ತೇನೆ. ಕನ್ನಡ ಕಲಿಯುತ್ತಿದ್ದೇನೆ’ ಎಂದರು ಮುರುಗ ಅಶೋಕ್‌. ನಿರ್ದೇಶಕ ಎಸ್‌ ಆರ್‌ ರಾಜನ್‌, ‘ಸಿನಿಮಾ ಕನ್ನಡ ಹಾಗೂ ಮಲಯಾಳಂನಲ್ಲಿ ತೆರೆಗೆ ಬರಲಿದ್ದು, ಸಕತ್‌ ಥ್ರಿಲ್ಲಿಂಗ್‌ ಅನುಭವ ನೀಡುತ್ತದೆ’ ಎಂದರು. ಸಿರಿ ಮ್ಯೂಸಿಕ್‌ನ ಸುರೇಶ್‌ ಚಿಕ್ಕಣ್ಣ ಹಾಜರಿದ್ದರು.