ಯಶ್ ಬಾಡಿಗಾರ್ಡ್‌ ಹುಟ್ಟುಹಬ್ಬ; ಸೆಲೆಬ್ರೆಷನ್‌ ಫೋಟೋ ಹಂಚಿಕೊಂಡ ಶ್ರೀನಿವಾಸ್ ಕೇಕ್ ಕತ್ತರಿಸಿ ಬಾಡಿ ಗಾರ್ಡ್‌ ಹುಟ್ಟುಹಬ್ಬ ಆಚರಿಸಿದ ಯಶ್. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್.... ಕೇಕ್ ಕತ್ತರಿಸಿ ಬಾಡಿ ಗಾರ್ಡ್‌ ಹುಟ್ಟುಹಬ್ಬ ಆಚರಿಸಿದ ಯಶ್. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್.... ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್‌ ಚಿತ್ರದ ಮೂಲಕ ಹಿಸ್ಟರಿ ಕ್ರಿಯೇಟ್ ಮಾಡಿದ ಪ್ಯಾನ್ ಇಂಡಿಯಾ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ (). ಹಲವು ವರ್ಷಗಳಿಂದ ಯಶ್ ಬಾಡಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿರುವ ಶ್ರೀನಿವಾಸ್‌ ಎಂಬುವವರು ಇಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಯಶ್ ತಮ್ಮ ನಿವಾಸದಲ್ಲಿ ಶ್ರೀನಿವಾಸ್‌ ಸ್ನೇಹಿತರು ಮತ್ತು ಕುಟುಂಬಸ್ಥರ ಜೊತೆ ಕೇಕ್ ಕಟ್ ಮಾಡಿಸಿದ್ದಾರೆ. ಶ್ರೀನಿವಾಸ್ ಫೋಟೋ ಅಪ್ಲೋಡ್ ಮಾಡಿದ್ದಾರೆ. 'ಇಂದು ನನ್ನ ಹುಟ್ಟುಹಬ್ಬ ಅತ್ಯಂತ ಆನಂದದಿಂದ ಕೂಡಿತ್ತು. ಯಶ್ ಅಣ್ಣ, ಸ್ನೇಹಿತರಯ ಹಾಗೂ ಕುಟುಂಬ ಸದಸ್ಯರು ನನಗೆ ಅನೇಕರ ಹಾರೈಕೆಗಳನ್ನು ಹಂಚಿದ್ದಾರೆ' ಇದು ನನ್ನ ಜೀವನದ ಅಮೂಲ್ಯ ದಿನ. ನಿಮ್ಮ ಪ್ರೇಮ ಮತ್ತು ಆಶೀರ್ವಾದಗಳು ನನಗೆ ಅತ್ಯಂತ ಸುಖಕರ. ನನ್ನ ಆತ್ಮೀಯ ಹಾರೈಕೆಗಳನ್ನು ನೀಡಿ ನನ್ನ ಹೃತ್ಪೂರ್ವಕ ಧನ್ಯವಾಗಳನ್ನು ಹಂಚಿಕೊಳ್ಳುತ್ತೇನೆ' ಎಂದು ಶ್ರೀನಿವಾಸ್ ಬರೆದುಕೊಂಡಿದ್ದಾರೆ. ಪ್ರತಿ ವರ್ಷವೂ ಶ್ರೀನಿವಾಸ್ ಹುಟ್ಟುಹಬ್ಬವನ್ನು ಯಶ್ ಫ್ಯಾಮಿಲಿ ಕೇಕ್ ಕಟ್ ಮಾಡುವ ಮೂಲಕ ಆಚರಿಸುತ್ತಾರೆ. ಯಶ್ ದೇಶ ವಿದೇಶ ಪ್ರಯಾಣಗಳಲ್ಲಿ ಶ್ರೀನಿವಾಸ್ ಸದಾ ಜೊತೆಯಾಗಿರುತ್ತಾರೆ.