ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಸೋನು ಪಾಟೀಲ್; ಫೋಟೋ ವೈಲರ್! ಇನ್‌ಸ್ಟಾಗ್ರಾಂನಲ್ಲಿ ಮದುವೆ ಫೋಟೋ ಅಪ್ಲೋಡ್ ಮಾಡಿದ ಸೋನು ಪಾಟೀಲ್. ಸದ್ದಿಲ್ಲದೆ ಮದುವೆಯಾಗಲು ಕಾರಣವೇನು? ಇನ್‌ಸ್ಟಾಗ್ರಾಂನಲ್ಲಿ ಮದುವೆ ಫೋಟೋ ಅಪ್ಲೋಡ್ ಮಾಡಿದ ಸೋನು ಪಾಟೀಲ್. ಸದ್ದಿಲ್ಲದೆ ಮದುವೆಯಾಗಲು ಕಾರಣವೇನು? ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಸೀಸನ್ 6ರ ಸ್ಪರ್ಧಿ ಸೋನು ಪಾಟೀಲ್ ಮತ್ತು ಸಂಕೇತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಸೋನು ಮದುವೆ ಫೋಟೋ ಅಪ್ಲೋಡ್ ಮಾಡಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಕೊಂಚ ಶಾಕ್ ಆಗಿದ್ದಾರೆ. ಸೋನು ಪಾಟೀಲ್ ಮದುವೆಯಾಗಿರುವ ಸಂಕೇತ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಆದರೆ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಮಾಹಿತಿ ಪ್ರಕಾರ ಅವರು ರೈಡರ್, ಕಾರ್ ಲವರ್, ಪ್ರಯಾಣ ಇಷ್ಟ ಪಡುವ ವ್ಯಕ್ತಿ ಅಲ್ಲದೆ ಆರ್‌ಸಿಬಿ ಫ್ಯಾನ್‌ ಎಂದು. 'ಹ್ಯಾಪಿಲಿ ಮ್ಯಾರಿಡ್. ಆಶೀರ್ವಾದ ಇರಲಿ' ಎಂದು ಸೋನು ಪಾಟೀಲ್ ಬರೆದುಕೊಂಡಿದ್ದಾರೆ. ಅತಿಥಿ ಡಿಸೈನರ್ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಸೋನು ಪಾಟೀಲ್ ಮೂಲತಃ ಉತ್ತರ ಕರ್ನಾಟಕದವರು. ಬಾಗಲಕೋಟೆ ಜಿಲ್ಲೆಯವರು. ಬಿಗ್ ಬಾಸ್‌ ಶೋಗೂ ಮುನ್ನ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೊಗ್ಗಿನ ಮನಸು, ಗಾಂಧಾರಿ, ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಟಿಸಿದ್ದು, ಧರ್ಮಸ್ಥಳ ಮತ್ತು ಗೋಪಿ ಗ್ಯಾಂಗ್ ಸಿನಿಮಾದಲ್ಲಿ ನಟಿಸಿದ್ದಾರೆ.