ಕೊರೆಯುವ ಚಳಿಯಲ್ಲಿ ಕ್ಯಾಂಪ್‌ ಫಯರ್, ; ಡಿವೋರ್ಸ್‌ ವದಂತಿ ಬೆನ್ನಲೆ ಸೂರ್ಯ- ಜ್ಯೋತಿಕಾ ಟ್ರಿಪ್! ಫಿನ್‌ಲ್ಯಾಂಡ್‌ಗೆ ವರ್ಷದ ಮೊದಲ ಟ್ರಿಪ್ ಮಾಡಿದ ಸೂರ್ಯ-ಜ್ಯೋತಿಕಾ. ಬೆಸ್ಟ್‌ ಕ್ಷಣಗಳನ್ನು ಹಂಚಿಕೊಂಡ ನಟಿ.... ಫಿನ್‌ಲ್ಯಾಂಡ್‌ಗೆ ವರ್ಷದ ಮೊದಲ ಟ್ರಿಪ್ ಮಾಡಿದ ಸೂರ್ಯ-ಜ್ಯೋತಿಕಾ. ಬೆಸ್ಟ್‌ ಕ್ಷಣಗಳನ್ನು ಹಂಚಿಕೊಂಡ ನಟಿ.... ಕಾಲಿವುಡ್ ಸೂಪರ್ ಕಪಲ್ ಸೂರ್ಯ ಮತ್ತು ಜ್ಯೋತಿಕಾ ವರ್ಷದ ಮೊದಲ ರಜೆಯನ್ನು ಫಿನ್‌ಲ್ಯಾಂಡ್‌ನಲ್ಲಿರುವ ಅರ್ಟಿಕ್‌ ಸರ್ಕಲ್‌ನಲ್ಲಿ ಕಳೆದಿದ್ದಾರೆ. ಪ್ರವಾಸಿಗರು ನೋಡಲು ಹೆಚ್ಚು ಇಷ್ಟ ಪಡುವ ನಾರ್ಥನ್ ಲೈಟ್ಸ್ ( ) ನೋಡಿದ್ದಾರೆ. ಮಂಜಿನ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಹೆಚ್ಚಿಗೆ ಮಂಜು ಇರುವ ಸ್ಥಳದಲ್ಲಿ ಫಾಕ್ಸ್‌/ ಹಸ್ಕಿ (/) ಬಳಸಿ ಚ್ಯಾರಿಯಟ್‌ ರೀತಿಯಲ್ಲಿ ಪ್ರಯಾಣ ಮಾಡುತ್ತಾರೆ, ಈ ಕ್ಷಣವನ್ನು ಜೋ-ಸೂರ್ಯ ಎಂಜಾಯ್ ಮಾಡಿದ್ದಾರೆ. ಪ್ರತಿ ವರ್ಷ ಮಕ್ಕಳಾದ ದಿಯಾ ಮತ್ತು ದೇವ್‌ ಜೊತೆ ಪ್ರಯಾಣ ಮಾಡುತ್ತಾರೆ ಆದರೆ ಈ ಸಲ ಇವರಿಬ್ಬರೇ ಪ್ರಯಾಣಿಸಿ ಎಂಜಾಯ್ ಮಾಡಿದ್ದಾರೆ. '2024 - ಈ ವರ್ಷ ಪೂರ್ತಿ ಪ್ರಯಾಣ ಮಾಡುವುದು. ಜನವರಿಯಲ್ಲಿ ಫಿನ್‌ಲ್ಯಾಂಡ್‌ಗೆ ಭೇಟಿ (ಆರ್ಟಿಕ್ ಸರ್ಕಲ್)' ಎಂದು ಜ್ಯೋತಿಕಾ ಬರೆದುಕೊಂಡಿದ್ದಾರೆ. 'ಗಂಡ ಆದವರು ಬೆಸ್ಟ್‌ ಫ್ರೆಂಡ್‌ ಮಾತ್ರವಲ್ಲದೆ ಒಳ್ಳೆಯ ಟ್ರ್ಯಾವಲ್ ಪಾರ್ಟನರ್‌ ಆಗಿದ್ದರೆ. ಈ ಗೋಲ್‌...ಕನಸು ನನಸಾಗುತ್ತದೆ' ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಡಿವೋರ್ಸ್‌ ವದಂತಿ ಬೆನ್ನಲೆ ಜ್ಯೋತಿಕಾ ಮತ್ತು ಸೂರ್ಯ ಪ್ರಯಾಣ ಮಾಡಿದ್ದಾರೆ. ಗಾಸಿಪ್‌ಗಳಿಗೆ ಯಾವುದೇ ರೀತಿಯಲ್ಲಿ ರಿಯಾಕ್ಟ್‌ ಮಾಡದೇ ಇದ್ದರೂ ಈ ಕ್ಯೂಟ್ ರೊಮ್ಯಾಂಟಿಕ್ ವಿಡಿಯೋ ಉತ್ತರ ಕೊಡುತ್ತದೆ.