ಸೃಜನ್ ಲೋಕೇಶ್ ಮುದ್ದಾದ ಫ್ಯಾಮಿಲಿ ಫೋಟೋಸ್ ಇಲ್ಲಿವೆ ನೋಡಿ! ಕನ್ನಡ ಚಿತ್ರರಂಗದಲ್ಲಿ ನಟನಾಗಿ, ಕಿರುತೆರೆಯಲ್ಲಿ ನಿರೂಪಕನಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಸೃಜನ್ ಲೋಕೇಶ್ ಅವರ ಪತ್ನಿ ಮತ್ತು ಮಕ್ಕಳ ಮುದ್ದಾದ ಫೋಟೋಗಳು ಇಲ್ಲಿವೆ. ಕನ್ನಡ ಚಿತ್ರರಂಗದಲ್ಲಿ ನಟನಾಗಿ, ಕಿರುತೆರೆಯಲ್ಲಿ ನಿರೂಪಕನಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಸೃಜನ್ ಲೋಕೇಶ್ ಅವರ ಪತ್ನಿ ಮತ್ತು ಮಕ್ಕಳ ಮುದ್ದಾದ ಫೋಟೋಗಳು ಇಲ್ಲಿವೆ. ಕನ್ನಡ ಚಿತ್ರರಂಗದ ಹಿರಿಯ ನಟ ಲೋಕೇಶ್ ಮತ್ತು ಗಿರಿಜಾ ಲೋಕೇಶ್ ಅವರ ಮಗ ಸೃಜನ್ ಲೋಕೇಶ್ ( ) ಹಲವಾರು ವರ್ಷಗಳಿಂದ ಕನ್ನಡ ಸಿನಿಮಾ, ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡವರು. ಸೃಜನ್ ಲೋಕೇಶ್ ಅವರ ಪೂರ್ತಿ ಕುಟುಂಬವೇ ಸಿನಿಮಾ ಹಿನ್ನೆಲೆಯಿಂದ ಬಂದಿದ್ದರಿಂದ ಸೃಜನ್ ಲೋಕೇಶ್ ಗೆ ಬಾಲ್ಯದಲ್ಲೇ ನಟನೆ ಒಲಿದು ಬಂದಿದ್ದು, ಬಾಲನಟನಾಗಿ, ನಾಯಕನಟನಾಗಿ, ಪೋಷಕ ನಟನಾಗಿ ಗುರುತಿಸಿಕೊಂಡ ಸೃಜನ್ ಲೋಕೇಶ್ ಯಶಸ್ವಿಯಾಗಿದ್ದು ತಮ್ಮ ನಗುವಿನ ಮೂಲಕ. ಹೌದು, ಸಿನಿಮಾ ರಂಗದಲ್ಲಿ ಸೃಜನ್ ಯಶಸ್ಸು ಪಡೆಯದಿದ್ದರೂ ಅವರು ಕಿರುತೆರೆಯಲ್ಲಿ ನಿರ್ಮಿಸಿದ ಮಜಾ ಟಾಕೀಸ್ ( ), ಮಜಾ ವಿತ್ ಸೃಜಾ ಕಾರ್ಯಕ್ರಮಗಳು ಭರ್ಜರಿ ಹಿಟ್ ಕೊಟ್ಟಿತ್ತು, ಆ ಮೂಲಕ ಅವರು ಜನರನ್ನು ನಕ್ಕು ನಗಿಸಿದ್ದರು. ಸೃಜನ್ ಲೋಕೇಶ್ ಪರ್ಸನಲ್ ಲೈಫ್ ಬಗ್ಗೆ ಹೇಳೊದಾದ್ರೆ ಇವರ ತಂದೆ, ತಾಯಿ, ಸಹೋದರಿ ಎಲ್ಲರೂ ಇವತ್ತಿನವರೆಗೂ ನಟನೆಯಲ್ಲಿ ಗುರುತಿಸಿಕೊಂಡವರೇ, ಅದೇ ರೀತಿ ಇವರ ಪತ್ನಿ ಗ್ರೀಷ್ಮಾ () ಸಹ ನಟಿಯಾಗಿ ಪ್ರಸಿದ್ದಿ ಪಡೆದಿದ್ದರು. ಹೌದು ಸೃಜನ್ ಲೋಕೇಶ್ ಪತ್ನಿ ಗ್ರೀಷ್ಮಾ ಸಹ ಕಿರುತೆರೆ ನಟಿಯಾಗಿ ಜನಪ್ರಿಯತೆ ಪಡೆದಿದ್ದರು. 2010 ರಲ್ಲಿ ಇವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಬ್ಬರೂ ಇಷ್ಟಪಟ್ಟು ಮದುವೆಯಾಗಿದ್ದಂತೆ. ಗ್ರೀಷ್ಮ ರಂಗಭೂಮಿ ಕಲಾವಿದೆ, ದೂರದರ್ಶನದ ನಟಿ ಹಾಗು ಕಥಕ್ ನೃತ್ಯಗಾರ್ತಿ () ಕೂಡ ಹೌದು. ಇಂದಿಗೂ ಸಹ ಗ್ರೀಷ್ಮ ಹಲವಾರು ಸ್ಟೇಜ್ ಪ್ರೋಗ್ರಾಂಗಳನ್ನು ನೀಡುತ್ತಾರೆ. ಇವರು ನಟಿಸಿದ್ದ ಗುಪ್ತಗಾಮಿನಿ ಸೀರಿಯಲ್ ಇಂದಿಗೂ ಜನ ನೆನಪಿಸಿಕೊಳ್ಳುತ್ತಾರೆ. ಗ್ರೀಷ್ಮ ಮತ್ತು ಸೃಜನ್ ಕಾರ್ಯಕ್ರಮವೊಂದರಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರಂತೆ. ಭೇಟಿಯಾದ 3ನೇ ದಿನಕ್ಕೆ ತನ್ನನ್ನು ಮಾದುವೆಯಾಗ್ತೀಯಾ ಎಂದು ಸೃಜನ್ ಕೇಳಿದ್ರಂತೆ. ಪ್ರಪೋಸ್ ಮಾಡಿದ್ದ ಎರಡೇ ದಿನಕ್ಕೆ ಗ್ರೀಷ್ಮ ಒಪ್ಪಿಗೆಯನ್ನೂ ನೀಡಿದ್ರಂತೆ. ಇನ್ನು ಸೃಜನ್ ಲೋಕೇಶ್ ಮತ್ತು ಗ್ರೀಷ್ಮಾ ಸೃಜನ್ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳೂ ಇದ್ದಾರೆ. ಸುಕೃತ್ ಮತ್ತು ಶ್ರೇಷ್ಠ್. ಇಬ್ಬರೂ ಸದ್ಯ ವಿದ್ಯಾಭ್ಯಾಸದಲ್ಲಿ ಬ್ಯುಸಿಯಾಗಿದ್ದಾರೆ. ಗ್ರೀಷ್ಮಾ ಸಹ ಮಕ್ಕಳ ಲಾಲನೆ, ಪಾಲನೆ, ಡ್ಯಾನ್ಸ್ ನಲ್ಲೇ ಬ್ಯುಸಿಯಾಗಿದ್ದಾರೆ.